- Home
- Entertainment
- Cine World
- ಟ್ರೈನ್‌ಲ್ಲೇ ಫಸ್ಟ್ ನೈಟ್ ಮಾಡ್ಕೊಂಡ ಸ್ಟಾರ್ ಹೀರೋ! ಅದಕ್ಕಾಗಿ ರೈಲು ಬುಕ್ ಮಾಡಿದ್ಯಾರು ಗೊತ್ತಾ?
ಟ್ರೈನ್‌ಲ್ಲೇ ಫಸ್ಟ್ ನೈಟ್ ಮಾಡ್ಕೊಂಡ ಸ್ಟಾರ್ ಹೀರೋ! ಅದಕ್ಕಾಗಿ ರೈಲು ಬುಕ್ ಮಾಡಿದ್ಯಾರು ಗೊತ್ತಾ?
ಡೈರೆಕ್ಟರ್ ರಾಘವೇಂದ್ರ ರಾವ್ ಸಿನಿಮಾಗಳಲ್ಲಿ ಹೀರೋಯಿನ್‌ಗಳ ಮೇಲೆ ಹೂವು, ಹಣ್ಣು ಹಾಕೋದು ಕಾಮನ್. ಆದ್ರೆ ಒಂದು ಸ್ಟಾರ್ ಹೀರೋ ಫಸ್ಟ್ ನೈಟ್‌ನ್ನ ಟ್ರೈನ್‌ಲ್ಲೇ ಪ್ಲಾನ್ ಮಾಡಿ, ಹೂವು ಹಣ್ಣಿಂದ ಡೆಕೋರೇಟ್ ಮಾಡಿಸಿದ್ರು! ಆ ಸ್ಟಾರ್ ಹಿರೋ ಯಾರು ಎಂಬ ಕುತೂಹಲ ನಿಮಗೋ ಇದ್ಯಾ? ಈ ಸುದ್ದಿ ಓದಿ.

ಡೈರೆಕ್ಟರ್ ರಾಘವೇಂದ್ರ ರಾವ್.. ಹೀರೋಯಿನ್‌ಗಳ ಮೇಲೆ ಹೂವು, ಹಣ್ಣು ಹಾಕದ ಸಿನಿಮಾ ಅಂತಾ ಇರಲ್ಲ. ಅವರ ಪ್ರತಿ ಹಾಡಿನಲ್ಲೂ ಅಂಥ ಸೀನ್ ಇರುತ್ತೆ. ಅದು ರಾಘವೇಂದ್ರ ರಾವ್ ಮಾರ್ಕ್ ಬ್ರಾಂಡ್. ಅಷ್ಟೇ ಅಲ್ಲ, ಹೀರೋಯಿನ್‌ಗಳು ಕೂಡ ಅಂಥದ್ದೇ ಬೇಕು ಅಂತಾ ಕೇಳ್ತಿದ್ರು. ಮಾಸ್ ಆಡಿಯನ್ಸ್‌ಗೆ ಫುಲ್ ಕಿಕ್ ಕೊಡೋ ಸೀನ್ ಅದು. ಅಂಥ ಸನ್ನಿವೇಶಕ್ಕಾಗಿಯೇ ರಾಘವೇಂದ್ರ ರಾವ್ ಸಿನಿಮಾಗೆ ಪ್ರೇಕ್ಷಕರು ಕ್ಯೂ ನಿಲ್ಲುತ್ತಿದ್ದರು.
ಕೆಲವು ಡೈರೆಕ್ಟರ್‌ಗಳಿಗೆ ಒಂದು ಸಪರೇಟ್ ಬ್ರಾಂಡ್ ಇರುತ್ತೆ. ಅವರ ಹೆಸರಲ್ಲೇ ಸಿನಿಮಾ ಓಡುತ್ತೆ. ಅಂಥವರಲ್ಲಿ ರಾಘವೇಂದ್ರ ರಾವ್ ಕೂಡ ಒಬ್ಬರು. ಸಿನಿಮಾ ಪೋಸ್ಟರ್ ಮೇಲೆ `ರಾಘವೇಂದ್ರ ರಾವ್ ಬಿ.ಎ` ಅಂತಾ ಬಿದ್ರೆ ಮಾಸ್ ಆಡಿಯನ್ಸ್ ಸಾಲುಗಟ್ಟಿ ನಿಲ್ಲುತ್ತಿದ್ದರು. ಅಷ್ಟರ ಮಟ್ಟಿಗೆ ಕ್ರೇಜ್ ಇತ್ತು. ರಾಘವೇಂದ್ರ ರಾವ್ ಸಿನಿಮಾಗಳಲ್ಲಿ ಫಸ್ಟ್ ನೈಟ್ ಸೀನ್, ಹೀರೋ ಹೀರೋಯಿನ್‌ಗಳ ಮಧ್ಯೆ ರೊಮ್ಯಾಂಟಿಕ್ ಸೀನ್ ಹಾಕೋದ್ರಲ್ಲಿ ಎತ್ತಿದ ಕೈ. ಆದ್ರೆ ರಿಯಲ್ ಲೈಫ್‌ನಲ್ಲೂ ಅದೇ ಮಾಡಿದ್ರು. ಒಂದು ಸ್ಟಾರ್ ಹೀರೋಗೆ ತನ್ನ ಸ್ಟೈಲ್‌ನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ರು, ಅದು ಕೂಡ ರೈಲಿನಲ್ಲಿ!
ರಾಘವೇಂದ್ರ ರಾವ್ ಟ್ರೈನ್‌ನಲ್ಲಿ ಫಸ್ಟ್ ನೈಟ್ ಏರ್ಪಡಿಸಿದ್ದು ಯಾರಿಗೆ ಅಂದ್ರೆ, ಮೆಗಾಸ್ಟಾರ್ ಚಿರಂಜೀವಿ ಅವರಿಗೆ. ಹೌದು ಇದು ನಿಜ. ಚಿರಂಜೀವಿ ಮತ್ತು ಅವರ ಧರ್ಮಪತ್ನಿ ಸುರೇಖಾಗೆ ಟ್ರೈನ್‌ನಲ್ಲಿ ಸ್ಪೆಷಲ್ ಆಗಿ ಫಸ್ಟ್ ನೈಟ್ ಏರ್ಪಡಿಸಿದ್ರು. ಸ್ಪೆಷಲ್ ಬೋಗಿ ಬುಕ್ ಮಾಡಿಸಿ ಮೊದಲ ರಾತ್ರಿಗೆ ಏರ್ಪಾಡು ಮಾಡಿದ್ರು. ಈ ಮೂಲಕ ಚಿರಂಜೀವಿ, ಸುರೇಖಾಗೆ ದೊಡ್ಡ ಶಾಕ್ ಕೊಟ್ಟಿದ್ರು. ಟ್ರೈನ್ ಹತ್ತೋವರೆಗೂ ಈ ವಿಷಯ ಅವರಿಗೆ ಗೊತ್ತಿರಲಿಲ್ಲ. ಇದನ್ನು ನೋಡಿ ಅವರಿಗೆ ಮೈಂಡ್ ಬ್ಲಾಕ್ ಆಗಿತ್ತು. ಆ ಎಕ್ಸ್‌ಪೀರಿಯೆನ್ಸ್ ಯಾವತ್ತೂ ಮರೆಯೋಕೆ ಆಗಲ್ಲ ಅಂತಾ ಚಿರಂಜೀವಿ, ಸುರೇಖಾ ಹೇಳ್ತಾರೆ.
ಇಷ್ಟಕ್ಕೂ ಇದು ಯಾವಾಗ ನಡೀತು? ಯಾಕೆ ಹಾಗೆ ಮಾಡಬೇಕಾಯ್ತು ಅಂದ್ರೆ, ಚಿರಂಜೀವಿ ಹೀರೋ ಆಗಿ ಬೆಳೆಯುತ್ತಿದ್ದಾಗ ಈ ಹುಡುಗ ಮುಂದೆ ದೊಡ್ಡ ಸ್ಟಾರ್ ಆಗ್ತಾನೆ ಅಂತಾ ಅಲ್ಲು ರಾಮಲಿಂಗಯ್ಯ ಸಿನಿಮಾದ ಹಿರಿಯರ ಜೊತೆ ಒತ್ತಡ ಹಾಕಿ ತನ್ನ ಮಗಳು ಸುರೇಖಾ ಜೊತೆ ಚಿರಂಜೀವಿಯ ಮದುವೆ ಮಾಡಿಸಿದ್ರು. ಸುರೇಖಾ ಜೊತೆ ಅವರ ಮದುವೆ ಕೇವಲ ಮೂರು ದಿನದಲ್ಲಿ ನಡೀತು. ಆ ಟೈಮ್‌ನಲ್ಲಿ ಚಿರಂಜೀವಿ ತುಂಬಾ ಬ್ಯುಸಿ ಇದ್ರು. 1980ರಲ್ಲಿ ಅವರು ತುಂಬಾ ಬ್ಯುಸಿ ಇದ್ರು. ಆ ಒಂದೇ ವರ್ಷದಲ್ಲಿ ಅವರ 14 ಸಿನಿಮಾ ರಿಲೀಸ್ ಆಗಿತ್ತು ಅಂದ್ರೆ ಯಾವ ರೇಂಜ್‌ಗೆ ಬ್ಯುಸಿ ಇದ್ರು ಅಂತಾ ಅರ್ಥ ತಿಳಿದುಕೊಳ್ಳಿ. ಮೂರು ಶಿಫ್ಟ್‌ನಲ್ಲಿ ಶೂಟಿಂಗ್ ನಡೀತಿತ್ತು.
ಚಿರಂಜೀವಿ ಮದುವೆ ಮಾಡ್ಕೊಳ್ಳೋಕೆ ಟೈಮ್ ಇರಲಿಲ್ಲ. ಅವರ ಮ್ಯಾರೇಜ್‌ಗೆ ಕೇವಲ ಮೂರು ದಿನ ರಜೆ ಸಿಕ್ಕಿತ್ತು. ಆ ಮೂರು ದಿನದಲ್ಲಿ ಒಂದು ದಿನ ಎಂಗೇಜ್‌ಮೆಂಟ್, ಎರಡನೇ ದಿನ ಮದುವೆ, ಮೂರನೇ ದಿನ ಮದುವೆ ನಂತರದ ಕಾರ್ಯಕ್ರಮ, ಅಷ್ಟೇ. ಫಸ್ಟ್ ನೈಟ್‌ಗೂ ಟೈಮ್ ಇರಲಿಲ್ಲ. ಆಮೇಲೆ ಸಿನಿಮಾ ಶೂಟಿಂಗ್‌ಗೆ ಹೋಗ್ಬಿಟ್ರು ಚಿರಂಜೀವಿ. ಆಗ ಚಿರಂಜೀವಿ ರಾಘವೇಂದ್ರ ರಾವ್ ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ರು. ಊಟಿಯಲ್ಲಿ ಶೂಟಿಂಗ್ ನಡೀತಿತ್ತು. ಕೆಲವೇ ದಿನಗಳಲ್ಲಿ ಆ ಮೂವಿ ಶೂಟಿಂಗ್ ಮುಗೀತು. ತನ್ನಗೋಸ್ಕರ ಚಿರು ಫಸ್ಟ್ ನೈಟ್ ತ್ಯಾಗ ಮಾಡಿದ್ರು. ಏನಾದ್ರೂ ಸ್ಪೆಷಲ್ ಮಾಡಬೇಕು ಅಂತಾ ರಾಘವೇಂದ್ರ ರಾವ್ ಪ್ಲಾನ್ ಮಾಡಿದ್ರು.
ಶೂಟಿಂಗ್ ಮುಗಿದ ತಕ್ಷಣ ಚಿರಂಜೀವಿ ಟ್ರೈನ್‌ನಲ್ಲಿ ಚೆನ್ನೈಗೆ ಹೋಗ್ತಿದ್ರು. ಆ ಟ್ರೈನ್‌ನಲ್ಲೇ ಸ್ಪೆಷಲ್ ಬರ್ತ್ ಬುಕ್ ಮಾಡಿ, ಅದರಲ್ಲಿ ಫಸ್ಟ್ ನೈಟ್ ತರ ಡೆಕೋರೇಟ್ ಮಾಡಿಸಿ ಚಿರಂಜೀವಿಗೆ ಸರ್‌ಪ್ರೈಸ್ ಮಾಡಿದ್ರು. ಅವರ ಲೈಫ್‌ನಲ್ಲಿ ಅದು ಯಾವತ್ತೂ ಮರೆಯಲಾಗದ ದಿನವಾಗಿ ಉಳಿಯೋ ಹಾಗೆ ಮಾಡಿದ್ರು. ಸಿನಿಮಾದಲ್ಲಿರೋ ತರಾನೇ ಆ ಬರ್ತ್‌ನ್ನ ಹೂವು, ಹಣ್ಣುಗಳಿಂದ ಡೆಕೋರೇಟ್ ಮಾಡಿದ್ದು ವಿಶೇಷ. ಆಮೇಲೆ `ಸೌಂದರ್ಯ ಲಹರಿ` ಟಾಕ್ ಶೋನಲ್ಲಿ ಮೆಗಾಸ್ಟಾರ್ ಈ ವಿಷಯ ಹೇಳಿದ್ರು.