MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ನಟಿ ರಾಧಿಕಾ ಆಪ್ಟೆಯ ಲಕ್ಷುರಿಯಸ್‌ ಕಾರು ಕಲೆಕ್ಷನ್‌ !

ನಟಿ ರಾಧಿಕಾ ಆಪ್ಟೆಯ ಲಕ್ಷುರಿಯಸ್‌ ಕಾರು ಕಲೆಕ್ಷನ್‌ !

7 ಸೆಪ್ಟೆಂಬರ್ 1985 ರಂದು ಪುಣೆಯಲ್ಲಿ ಜನಿಸಿದ  ರಾಧಿಕಾ ಆಪಟ್ಟೆ 36ನೇ ವರ್ಷಕ್ಕೆ ಕಾಲಿಟಿದ್ದಾರೆ. ರಾಧಿಕಾ ಆಪ್ಟೆ ನಿಸ್ಸಂದೇಹವಾಗಿ ಬಿ-ಟೌನ್‌ನ ಪ್ರಮುಖ ನಟಿಯರಲ್ಲಿ ಒಬ್ಬರು. ಈ ನಟಿ ಗ್ಲಾಮ್ ಲುಕ್ ಹೊರತಾಗಿ ಯಾವುದೇ ಸಾಮಾನ್ಯ ಪಾತ್ರದಲ್ಲಿ ಸುಲಭವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ರಾಧಿಕಾ ಕಾರಿನ ಬಗ್ಗೆ ವಿಶೇಷ ಒಲವು. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು  ಹೊಂದಿದ್ದಾರೆ.

2 Min read
Author : Suvarna News | Asianet News
Published : Sep 08 2021, 03:58 PM IST
Share this Photo Gallery
  • FB
  • TW
  • Linkdin
  • Whatsapp
18

2005ರಲ್ಲಿ ನಟಿ ರಾಧಿಕಾ ಆಪ್ಟೆ ವಾಹ್ ಲೈಫ್ ಹೋ ತೋ ಐಸಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಹಿಂದಿ ಜೊತೆಗೆ, ದಕ್ಷಿಣದಲ್ಲೂ ಕೆಲವು ಚಿತ್ರಗಳನ್ನು ಮಾಡುವ ಮೂಲಕ ನಟಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

28

ಸಿನಿಮಾಗಳನ್ನು ಮಾಡುವಾಗ ರಾಧಿಕಾ ತನ್ನನ್ನು ಒಂದು ರೀತಿಯ ಪಾತ್ರಗಳಿಗೆ ಸೀಮಿತಗೊಳಿಸುವುದಿಲ್ಲ. ಅವರು ಅನೇಕ ಅಸಾಂಪ್ರದಾಯಿಕ ಫಿಲ್ಮ್‌ಗಳಲ್ಲಿಯೂ ನಟಿಸಿದ್ದಾರೆ. ಪ್ಯಾಡ್ ಮ್ಯಾನ್, ಲಸ್ಟ್ ಸ್ಟೋರೀಸ್, ರಾತ್ ಅಕೆಲಿ ಹೈ ಮುಂತಾದ ಸಿನಿಮಾಗಳಲ್ಲಿ ಆಪ್ಟೆ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

38
राधिका आप्टे

राधिका आप्टे

ರಾಧಿಕಾ ಆಪ್ಟೆ ಸಿನಿಮಾಗಳ ಜೊತೆಗೆ ಕಾರಿನ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ಇವರು ತಮ್ಮ ಕಲೆಕ್ಷನ್‌ನಲ್ಲಿ ಹಲವು ಕಾರುಗಳನ್ನು ಹೊಂದಿದ್ದಾರೆ. ಇಲ್ಲಿದೆ ಅವರ ಕಾರು ಸಂಗ್ರಹದ ವಿವರ.

48

Audi A4:
ರಾಧಿಕಾ ಆಪ್ಟೆ ಆಡಿ ಎ 4ನ ಹೆಮ್ಮೆಯ ಮಾಲೀಕರು. ನಟಿ ಹೊಂದಿರುವ ಈ ಕಾರಿನ ಬೆಲೆ 43.19 ಲಕ್ಷ ರೂ. ವೆಬ್‌ಸೈಟ್‌ನ ಪ್ರಕಾರ, ಆಡಿ ಎ4 ಪೆಟ್ರೋಲ್ ಆವೃತ್ತಿಯ ಬೆಲೆ ಶ್ರೇಣಿ ರೂ 43.19 ಲಕ್ಷದಿಂದ ಆರಂಭಗೊಂಡು, ರೂ 47.61 ಲಕ್ಷಕ್ಕೆ ಏರುತ್ತದೆ.

58

BMW X5:
ಆಡಿ A4 ಜೊತೆ  ನಟಿ ತನ್ನ ಕಾರು ಸಂಗ್ರಹದಲ್ಲಿ BMW X5 ಅನ್ನು ಹೊಂದಿದ್ದಾರೆ. BMW X5 ನ ಬೆಲೆ  ಆಡಿ A4 ಗಿಂತ ಹೆಚ್ಚಾಗಿದೆ. ಸೂಪರ್ ಐಷಾರಾಮಿ ಕಾರಿನ ಸರಾಸರಿ ಎಕ್ಸ್ ಶೋ ರೂಂ ಬೆಲೆ 76.47 ಲಕ್ಷ ರೂ ಆಗಿದೆ. 

68

Volkswagen Tiguan:
ರಾಧಿಕಾರ ಸಂಗ್ರಹದ ಮೂರನೇ ಐಷಾರಾಮಿ ಕಾರು ವೋಕ್ಸ್‌ವ್ಯಾಗನ್ ಟಿಗುವಾನ್. ಕಾರಿನ ಬೆಲೆ 27.49 ಲಕ್ಷದಿಂದ 30.87 ಲಕ್ಷ ರೂ. , ರಾಧಿಕಾ ಕೊನೆಯದಾಗಿ ಓಕೆ ಕಂಪ್ಯೂಟರ್‌ನಲ್ಲಿ ಜಾಕಿ ಶ್ರಾಫ್ ಮತ್ತು ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡರು.

78

ಈ ಸರಣಿಯಲ್ಲಿ ಲಕ್ಷ್ಮಿ ಸೂರಿ ಪಾತ್ರವನ್ನು ನಟಿ ನಿರೂಪಿಸಿದ್ದಾರೆ, ಇದನ್ನು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು.  ಪ್ರಸ್ತುತ ಅವರು  ಮೋನಿಕಾ, ಓ ಮೈ ಡಾರ್ಲಿಂಗ್!, ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿರುವುದು ವರದಿಯಾಗಿದೆ. ಇದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗುತ್ತದೆ.

88

ವೈಯಕ್ತಿಕ ಜೀವನದಲ್ಲಿ, ನಟಿ ಬ್ರಿಟಿಷ್ ಸಂಗೀತಗಾರ ಬೆನೆಡಿಕ್ಟ್ ಟೇಲರ್ ಅವರನ್ನು ವಿವಾಹವಾದರು. ರಾಧಿಕಾ ಮತ್ತು ಬೆನೆಡಿಕ್ಟ್ ಅವರ ಫೋಟೋಗಳು ಇಂಟರ್‌ನೆಟ್‌ ಹಲವು ಬಾರಿ ವೈರಲ್‌ ಆಗಿವೆ. ಆದಾಗ್ಯೂ, ರಾಧಿಕಾ  ತನ್ನ ವೈವಾಹಿಕ ಜೀವನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚು ಬಹಿರಂಗಪಡಿಸುವುದ್ದಿಲ್ಲ. ತನ್ನ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳುವ ಕಲ್ಪನೆಯನ್ನು ನಟಿ ನಂಬಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ವಿರೋಶ್ ಲವ್ ಸ್ಟೋರಿ: ನಿಮಗೆ ಗೊತ್ತಿರದ ರಶ್ಮಿಕಾ-ವಿಜಯ್ ದೇವರಕೊಂಡ ಪ್ರೇಮ್​ ಕಹಾನಿ!
Recommended image2
ಹುಟ್ಟುಹಬ್ಬಕ್ಕೆ ಕೇಕ್​ ಬಟ್ಟೆ ಧರಿಸಿ ಬಂದ ಉರ್ಫಿ: ಅಲ್ಲೇ ಕಟ್​ ಮಾಡಿ ತಿನ್ನಲು ಕೊಟ್ಟ ನಟಿ- ವಿಡಿಯೋ ವೈರಲ್​
Recommended image3
ಕೊಡಗಿನ ವಿರಾಜಪೇಟೆ ಮನೆಗೆ ಭಾರೀ ಅಲಂಕಾರ; ನ್ಯಾಷನಲ್ ಕ್ರಶ್ ನಟಿ ರಶ್ಮಿಕಾರ ಮನೆಯೀಗ ಜಗಮಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved