ರಾಖಿ- ಗುಲ್ಜಾರ್ ಮದುವೆ ಮುರಿಯಲು ಕಾರಣವಾಗಿದ್ದೇ ಆ ಒಂದು ರಾತ್ರಿ!
ಬರಹಗಾರ, ಗೀತರಚನೆಕಾರ, ನಿರ್ಮಾಪಕ ಮತ್ತು ನಿರ್ದೇಶಕ ಗುಲ್ಜಾರ್‌ಗೆ 86 ವರ್ಷ. ಆಗಸ್ಟ್ 18, 1934 ರಂದು ಪಂಜಾಬ್‌ನ ಜೇಲಂ (ಈಗ ಪಾಕಿಸ್ತಾನಕ್ಕೆ ಸೇರಿದೆ)ಜನಿಸಿದರು. ವಿಭಜನೆಯ ಸಮಯದಲ್ಲಿ, ಅವರ ಇಡೀ ಕುಟುಂಬ ಅಮೃತಸರದಲ್ಲಿ ನೆಲೆಸಿತ್ತು, ಆದರೆ ಗುಲ್ಜಾರ್‌ಗೆ ಅಮೃತಸರ ಹಿಡಿಸಲಿಲ್ಲ. ಮುಂಬೈಗೆ ತೆರಳಿದರು. ಗುಲ್ಜಾರ್ ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾದ ರಾಖಿಯನ್ನು ವಿವಾಹವಾದರು. ಆದರೆ, ಅವರ ಮದುವೆ ಹೆಚ್ಚು ಕಾಲ ಉಳಿಯಲಿಲ್ಲ. ಈ ಕಪಲ್ ಜೀವನದ ಆ ಒಂದು ರಾತ್ರಿ ಎಲ್ಲವನ್ನೂ ಬದಲಿಸಿತ್ತು. ರಾಖಿಗೆ ಈಗ 73 ವರ್ಷ ಮತ್ತು ಮುಂಬೈಯಿಂದ ದೂರದಲ್ಲಿರುವ ಫಾರ್ಮ್‌ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ರಾಖಿ-ಗುಲ್ಜಾರ್ ಮಗಳು ಚಿತ್ರ ನಿರ್ದೇಶಕಿ ಮೇಘನಾ ಗುಲ್ಜಾರ್ ಇವರನ್ನು ನೋಡಿ ಕೊಳ್ಳುತ್ತಿದ್ದಾರೆ. ಅತ್ಯದ್ಭುತ ಪ್ರೇಮ ಗೀತೆಗಳನ್ನು ರಚಿಸಿದ ಗುಲ್ಜರ್ ಪ್ರೇಮ ಕಥೆ ಇದು.
ಒಂದು ಕಾಲದಲ್ಲಿ ಚಿತ್ರರಂಗದ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದ ರಾಖಿಯನ್ನು ಇಂದು ಗುರುತಿಸುವುದು ಕಷ್ಟ.
ರಾಖಿ ಈ ದಿನಗಳಲ್ಲಿ ಫಾರ್ಮ್ ಹೌಸ್‌ನಲ್ಲಿ ಹಸುಗಳು ಮತ್ತು ಎಮ್ಮೆಗಳಿಗೆ ಮೇವನ್ನು ನೀಡುತ್ತಾ ಕಾಲ ಕಳೆಯುತ್ತಿದ್ದಾರೆ.
ಉದ್ದವಾದ ಕೂದಲನ್ನು ಹೊಂದಿದ್ದ ರಾಖಿಯ ಲುಕ್ ಸಂಪೂರ್ಣವಾಗಿ ಬದಲಾಗಿದೆ. ಗಿಡ್ಡ ಕೂದಲು ಜೊತೆ ಮುಖದ ನಗು ಕೂಡ ಮಾಸಿದೆ.
ರಾಖಿ ತನ್ನ 16ನೇ ವಯಸ್ಸಿನಲ್ಲಿ ಬಂಗಾಳಿ ಪತ್ರಕರ್ತ ಅಜಯ್ ಬಿಸ್ವಾಸ್ (1963) ಅವರನ್ನು ವಿವಾಹವಾದರು. ಆದರೆ ಎರಡು ವರ್ಷಗಳಲ್ಲಿ, ಇಬ್ಬರು ಬೇರ್ಪಟ್ಟರು (1965). ನಂತರ 1973ರಲ್ಲಿ ಗುಲ್ಜಾರ್‌ರನ್ನು ವರಿಸಿದರು.
ಆದರೆ, ಅವರ ಸಂಬಂಧದಲ್ಲಿ ಬಿರುಕು ಶುರವಾಗಿ ಕೆಲವು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ದಂಪತಿ ಬೇರ್ಪಟ್ಟರು, ಆದರೆ ಇಬ್ಬರೂ ವಿಚ್ಛೇದನ ಪಡೆಯಲಿಲ್ಲ.
ಮದುವೆ ನಂತರ, ರಾಖಿ ಚಿತ್ರಗಳನ್ನು ನಟಿಸುವುದನ್ನು ನಿಲ್ಲಿಸಿದ್ದರು. ಆದರೆ, ನಾನು ತಪ್ಪು ನಿರ್ಧಾರವನ್ನು ತೆಗೆದುಕೊಂಡೆ ಎಂದು ಇದ್ದಕ್ಕಿದ್ದಂತೆ ರಾಖಿಗೆ ಎನಿಸಲು ಶುರುವಾಯಿತು. ಮತ್ತೆ ಚಲನಚಿತ್ರಗಳನ್ನು ನಟಿಸಲು ಪ್ರಾರಂಭಿಸಿದಳು.
ಆದರೆ, ರಾಖಿ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ಗುಲ್ಜಾರ್‌ಗೆ ಇಷ್ಟವಾಗಲಿಲ್ಲ. ಈ ವಿಷಯದಲ್ಲಿ ಇಬ್ಬರೂ ಜಗಳವಾಡಿದರು.
ಒಮ್ಮೆ ಗುಲ್ಜಾರ್ ತಮ್ಮ ಆಂಧಿ (1975) ಚಿತ್ರದ ಶೂಟಿಂಗ್‌ಗಾಗಿ ಉತ್ತಮ ಸ್ಥಳವನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋದರು. ಆ ಸಮಯದಲ್ಲಿ ರಾಖಿ ಕೂಡ ಅವರೊಂದಿಗೆ ಇದ್ದರು. ಗುಲ್ಜಾರ್ ತನ್ನ ಕೆಲಸದಲ್ಲಿ ಮುಳುಗಿದ್ದರೆ, ರಾಖಿ ಒಬ್ಬಂಟಿಯಾಗಿ ಕುಳಿತು ಕಾಲಕಳೆಯುತ್ತಿದ್ದರು.
ಗುಲ್ಜಾರ್‌ರ ಚಿತ್ರ ಆಂಧಿ ಶೂಟಿಂಗ್ ನಂತರ ಯೂನಿಟ್ ಪಾರ್ಟಿ ಮಾಡುತ್ತಿತ್ತು. ಈ ಚಿತ್ರದಲ್ಲಿ ಪ್ರಮುಖ ಸ್ಟಾರ್‌ಗಳಾದ ಸುಚಿತ್ರ ಸೇನ್ ಮತ್ತು ಸಂಜೀವ್ ಕುಮಾರ್ ಸಹ ಇದ್ದರು. ಪಾರ್ಟಿಯಲ್ಲಿ ಸಂಜೀವ್ ಕುಮಾರ್ ಕುಡಿದ ಸ್ಥಿತಿಯಲ್ಲಿ ಸುಚಿತ್ರಾಗೆ ಹತ್ತಿರವಾಗಲು ಪ್ರಯತ್ನಿಸುತ್ತಿದ್ದರು. ನಂತರ, ಗುಲ್ಜಾರ್ ಸುಚಿತ್ರಾರನ್ನು ತಮ್ಮ ರೂಮ್‌ನಲ್ಲಿ ಬಿಡಲು ಹೊರಟಿದ್ದಾಗ, ರಾಖಿಯೂ ಅಲ್ಲಿಗೆ ಹೋದರು. ಸುಚಿತ್ರಾ ಜೊತೆ ಗುಲ್ಜಾರ್‌ನನ್ನು ನೋಡಿದ ನಂತರ ರಾಖಿ ಮತ್ತೆ ಜಗಳವಾಡಿದ್ದರು.
ಇದಾದ ನಂತರ, ಅವರ ಸಂಬಂಧದಲ್ಲಿ ಕಹಿ ಹೆಚ್ಚಾಯಿತು. ಅಷ್ಟೇ ಅಲ್ಲ, ಗುಲ್ಜಾರ್ ರಾಖಿಗೆ ಹೊಡೆಯುತ್ತಿದ್ದರಂತೆ. ಕೆಲವು ದಿನಗಳ ನಂತರ, ಗುಲ್ಜಾರ್ ನಿರಾಕರಣೆಯ ನಂತರವೂ ರಾಖಿ ಯಶ್ ಚೋಪ್ರಾ ಅವರ ಕಬಿ ಕಭಿ ಚಿತ್ರಕ್ಕೆ ಸಹಿ ಹಾಕಿದರು. ನಂತರ ಇಬ್ಬರೂ ಬೇರೆಯಾದರು.
1970 ರಲ್ಲಿ 'ಜೀವನ್ ಮೃತಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು ರಾಖಿ.
ಶಶಿ ಕಪೂರ್ ಜೊತೆ 'ಶರ್ಮಿಲಿ' (1971) ಮಾಡಿದರು. ಅದೇ ವರ್ಷ ಬಿಡುಗಡೆಯಾದ ಶರ್ಮಿಲಿ ಸೇರಿದಂತೆ 'ಲಾಲ್ ಪತ್ತರ್' ಮತ್ತು 'ಪ್ಯಾರಾಸ್' ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿದ್ದವು.