ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಫೇಲ್ ಆಯ್ತು ಪುಷ್ಪ 2! ಕಾರಣ ಏನು?
ಪುಷ್ಪ 2: ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಥಿಯೇಟರ್‌ಗಳಲ್ಲಿ ದಾಖಲೆ ಬರೆದರೂ, ನೆಟ್‌ಫ್ಲಿಕ್ಸ್‌ನಲ್ಲಿ ಅಂದುಕೊಂಡಷ್ಟು ಟ್ರೆಂಡ್ ಆಗಿಲ್ಲ. ರಿಲೀಸ್ ಆದ ಕೆಲವೇ ದಿನಗಳಲ್ಲಿ ವ್ಯೂವ್ಸ್ ಕಡಿಮೆ ಆಗೋಕೆ ಕಾರಣಗಳೇನು ಅಂತ ನೋಡೋಣ.

ಪುಷ್ಪ 2: ಅಲ್ಲು ಅರ್ಜುನ್ (Allu Arjun) ಹೀರೋ ಆಗಿ ಸುಕುಮಾರ್ ನಿರ್ದೇಶನದಲ್ಲಿ ಬಂದ ಆಕ್ಷನ್ ಥ್ರಿಲ್ಲರ್ ‘ಪುಷ್ಪ 2: ದಿ ರೂಲ್’. ಡಿಸೆಂಬರ್ 4 ರಂದು ಪ್ರಪಂಚದಾದ್ಯಂತ ರಿಲೀಸ್ ಆದ ಈ ಸಿನಿಮಾ ಥಿಯೇಟರ್‌ಗಳಲ್ಲಿ ದಾಖಲೆ ಬರೆದು ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಗೆಲುವು ಕಂಡ ‘ಪುಷ್ಪ 2’ (Pushpa 2) ಜನವರಿ 30 ರಂದು ನೆಟ್‌ಫ್ಲಿಕ್ಸ್ ಓಟಿಟಿಗೆ ಬಂದಿದೆ. ಈ ಸಿನಿಮಾ ಓಟಿಟಿಗೆ ಬಂದ ತಕ್ಷಣ ನೆಟ್‌ಫ್ಲಿಕ್ಸ್‌ನಲ್ಲಿಯೂ ದಾಖಲೆ ಬರೆಯಿತು. ಆದರೆ ಆಮೇಲೆ ಡ್ರಾಪ್ ಆಯ್ತು.
ಪುಷ್ಪ 2: ವಾಸ್ತವವಾಗಿ ನೆಟ್‌ಫ್ಲಿಕ್ಸ್ ಓಟಿಟಿಗೆ ಬಂದಾಗಿನಿಂದ ವ್ಯೂವ್ಸ್‌ನಲ್ಲಿ ಟಾಪ್‌ನಲ್ಲಿದ್ದ ‘ಪುಷ್ಪ 2’ ಇತ್ತೀಚೆಗೆ ಏಳು ದೇಶಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಪ್ರಪಂಚದಾದ್ಯಂತ ಇಂಗ್ಲಿಷ್ ಅಲ್ಲದ ಸಿನಿಮಾಗಳ ವಿಭಾಗದಲ್ಲಿ 5.8 ಮಿಲಿಯನ್ ವ್ಯೂವ್ಸ್‌ನೊಂದಿಗೆ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಎರಡನೇ ಸ್ಥಾನದಲ್ಲಿದೆ.
ಇದು ತೆಲುಗು ಸಿನಿಮಾಗೆ ಸಿಕ್ಕ ಅಪರೂಪದ ಗೌರವ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಈ ವ್ಯೂವ್ಸ್ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದುಕೊಳ್ಳುವಷ್ಟರಲ್ಲಿ ಕಡಿಮೆಯಾಗಲು ಶುರುವಾಯಿತು(Pushpa 2 OTT Record). ಎರಡು ವಾರ ಆಗುವಷ್ಟರಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಿಂದ ಹೊರಗೆ ಹೋಯಿತು.
‘ಪುಷ್ಪ 2’ ನಾಲ್ಕನೇ ವಾರಕ್ಕೆ (ಫೆಬ್ರವರಿ 16 – ಫೆಬ್ರವರಿ 23 ) ಪ್ರವೇಶಿಸುವಷ್ಟರಲ್ಲಿ ಟಾಪ್ 10 ಗ್ಲೋಬಲ್ ನಾನ್ ಇಂಗ್ಲಿಷ್ ಫಿಲ್ಮ್ಸ್ ಲಿಸ್ಟ್‌ನಲ್ಲಿ ಇರಲಿಲ್ಲ. ರೀಸೆಂಟ್ ಆಗಿ ಬಂದ ಇಂಡಿಯನ್ ಸಿನಿಮಾಗಳು ಧೂಮ್ ಧಾಮ್ (ಎರಡನೇ ವಾರ), ಡಾಕೂ ಮಹಾರಾಜ್ (ಮೊದಲ ವಾರ) ಟಾಪ್ 10 ಗ್ಲೋಬಲ್ ಲಿಸ್ಟ್‌ಗೆ ಸೇರಿವೆ.
ಭಾರತದಲ್ಲಿ ಡಾಕೂ ಮಹಾರಾಜ್ ಸಿನಿಮಾ ಈ ವಾರ ನಾಲ್ಕನೇ ಪ್ಲೇಸ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಇಂಡಿಯಾದಲ್ಲಿ ಈ ಸಿನಿಮಾ ಟ್ರೆಂಡ್ ಆಗುತ್ತಿದೆ. ಆದರೆ ಈ ನಡುವೆ ಪುಷ್ಪ 2 ಪಕ್ಕಕ್ಕೆ ಹೋಗಿದ್ದು ಮಾತ್ರ ಯಾರು ಊಹಿಸಿರಲಿಲ್ಲ.
ಪುಷ್ಪ 2: ಪುಷ್ಪ 2 ಸಿನಿಮಾ ನಾರ್ತ್‌ನಲ್ಲಿ ಓಟಿಟಿಯಲ್ಲಿ ಜಾಸ್ತಿ ಜನ ನೋಡದಿರೋಕೆ ಕಾರಣ, ಆಲ್ರೆಡಿ ಈ ಸಿನಿಮಾ ಅಲ್ಲಿ ದೊಡ್ಡ ಹಿಟ್ ಆಗಿರೋದೇ ಅಂತ ಹೇಳ್ತಿದ್ದಾರೆ. ಹಾಗೆಯೇ ಮೊದಲು 3 ಗಂಟೆ 20 ನಿಮಿಷಗಳಿದ್ದ ‘ಪುಷ್ಪ 2’ಗೆ ಇತ್ತೀಚೆಗೆ ಇನ್ನೊಂದು 20 ನಿಮಿಷದ ಸೀನ್ ಸೇರಿಸಿದ್ದಾರೆ.
ಇದರಿಂದ ಸಿನಿಮಾದ ಟೈಮ್ ಸುಮಾರು 3 ಗಂಟೆ 40 ನಿಮಿಷ ಆಗಿದೆ. ಓಟಿಟಿ ವರ್ಷನ್ ಕೂಡ ಇದೇ ಟೈಮ್‌ನಲ್ಲಿದೆ. ಈ ಕಾರಣದಿಂದ ಈ ಸಿನಿಮಾ ತುಂಬಾ ದೊಡ್ಡದಿದೆ ಅಂತ ಬೇರೆ ದೇಶಗಳಲ್ಲಿ ಸ್ಕಿಪ್ ಮಾಡ್ತಿದ್ದಾರೆ ಅಂತ ಸೋಶಿಯಲ್ ಮೀಡಿಯಾ ಚರ್ಚೆಗಳಲ್ಲಿ ಗೊತ್ತಾಗಿದೆ.