ಹಸೆಮಣೆ ಏರಿದ ಪ್ರಿಯಾಂಕಾ ಚೋಪ್ರಾ ಮೊದಲ ಬಾಯ್‌ಫ್ರೆಂಡ್!
ಪ್ರಿಯಾಂಕಾ ಚೋಪ್ರಾ ಎಕ್ಸ್ ಬಾಯ್‌ಫ್ರೆಂಡ್ ಹಾಗೂ ಹೃತಿಕ್ ರೋಶನ್ ಅವರ ಲುಕ್ ಅಲೈಕ್ ಬವೇಜಾ ಅವರು ಮಾರ್ಚ್ 21 ರಂದು ಮದುವೆಯಾದರು. ಅವರ ಪ್ರಿವೆಡ್ಡಿಂಗ್ ಫಂಕ್ಷನ್ ಹಾಗೂ ಮದುವೆಯ ಪೋಟೋಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿವೆ. ಅವರು ಸ್ನೇಹಿತರೊಂದಿಗಿನ ಕಾಕ್ಟೈಲ್ ಪಾರ್ಟಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಹರ್ಮನ್‌ರ ಈ ಪಾರ್ಟಿಯಲ್ಲಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಆಶಿಶ್ ಚೌಧರಿ ಮತ್ತು ಅಮೀರ್ ಅಲಿ ಮುಂತಾದ ಸೆಲೆಬ್ರೆಟಿಗಳು ಭಾಗವಹಿಸಿದ್ದರು. ಹರ್ಮನ್ ಅವರ ಪಾರ್ಟಿಯ ಕೆಲವು ಫೋಟೋಗಳನ್ನು ಇನ್ಸ್ಟಾಸ್ಟೋರಿಯಲ್ಲಿ ರಾಜ್ ಕುಂದ್ರಾ ಹಂಚಿಕೊಂಡಿದ್ದಾರೆ. ಇದಲ್ಲದೇ, ಅವರು ಹರ್ಮನ್ ಡ್ಯಾನ್ಸ್ ಮಾಡುವ ವಿಡಿಯೋವನ್ನೂ ಪೋಸ್ಟ್ ಮಾಡಿದ್ದರು.
ಬಾಲಿವುಡ್‌ನ ನಟ ಪ್ರಿಯಾಂಕಾ ಚೋಪ್ರಾ ಎಕ್ಸ್ ಬಾಯ್‌ಫ್ರೆಂಡ್ ಹರ್ಮನ್ ಬವೇಜಾ ಮಾರ್ಚ್ 21 ರಂದು ಸಶಾ ರಾಮ್‌ಚಂದಾನಿಯ ಜೊತೆ ಸಪ್ತಪದಿ ತುಳಿದರು.
ಸಶಾ ರಾಮ್‌ಚಂದಾನಿ ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್ ಟ್ರೈನರ್. ಕಳೆದ ವರ್ಷ ಡಿಸೆಂಬರ್‌ನಲ್ಲಿ ಹರ್ಮನ್ ಮತ್ತು ಸಶಾ ಚಂಡೀಗಡದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.
ಹರ್ಮನ್ ತಮ್ಮ ತಂದೆಯ ಚಿತ್ರ ಲವ್ ಸ್ಟೋರಿ 2050 ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಪ್ರಿಯಾಂಕಾ ಚೋಪ್ರಾ ನಾಯಕಿ ಆಗಿದ್ದ ಈ ಸಿನಿಮಾ ಫ್ಲಾಪ್ ಆಯಿತು.
ನಂತರ ಹರ್ಮನ್ ವಿಕ್ಟರಿ, ವಾಟ್ಸ್ ಯುವರ್ ರಾಶಿಚಕ್ರ, ಧಿಷ್ಕಿಯಾನ್ ಮತ್ತು ಭೂತ್ ಮುಂತಾದ ಚಿತ್ರಗಳಲ್ಲಿ ನಟಿಸಿದರು, ಆದರೆ, ಅವರ ಎಲ್ಲಾ ಚಿತ್ರಗಳು ಒಂದರ ನಂತರ ಒಂದರಂತೆ ಪ್ಲಾಪ್ ಆಗಿದ್ದವು. ಅವರು ಕೊನೆಯ ಬಾರಿಗೆ 2016ರಲ್ಲಿ
ಬಿಡುಗಡೆಯಾದ ಚಾರ್ ಸಾಹಿಬ್ಜಾಡೆ: ರೈಸ್ ಆಫ್ ಬಂಡಾ ಸಿಂಗ್ ಬಹದ್ದೂರ್ ಚಿತ್ರದಲ್ಲಿ ಕಾಣಿಸಿಕೊಂಡರು.
ಲವ್ ಸ್ಟೋರಿ 2050ರಸೆಟ್‌ನಲ್ಲಿ ಹರ್ಮನ್ ಮತ್ತು ಪ್ರಿಯಾಂಕಾ ಅವರ ನಡುವೆ ರಿಲೆಷನ್‌ಶಿಪ್ ಪ್ರಾರಂಭವಾಯಿತು. ಇಬ್ಬರೂ ಸುಮಾರು 2 ವರ್ಷಗಳ ಕಾಲ ಡೇಟ್ ಮಾಡಿದ್ದರು. ಆದರೆ, ನಂತರ ಶಾಹಿದ್ ಕಪೂರ್‌ಗೆ ಹತ್ತಿರವಾದ ಪ್ರಿಯಾಂಕಾ ಹರ್ಮನ್ ಅವರನ್ನು ತೊರೆದರು.
ಅವರ ಎರಡು ಚಿತ್ರಗಳು ಈಗಾಗಲೇ ಫ್ಲಾಪ್ ಆಗಿದ್ದವು, ಆದ್ದರಿಂದ ಅವರ ಮೇಲೆ ಸಾಕಷ್ಟು ಒತ್ತಡವಿತ್ತು. ಅವರು ತಮ್ಮ ಮೂರನೇ ಚಿತ್ರದತ್ತ ಗಮನ ಹರಿಸಿದ್ದರು. ಪ್ರಿಯಾಂಕಾ ಅವರಿಗೆ ಸಮಯವಿಲ್ಲ ಎಂದು ಹರ್ಮನ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಜಾನ್ ಅಬ್ರಹಾಂ ಅವರೊಂದಿಗಿನ ಬ್ರೇಕಪ್ ನಂತರ, ಬಿಪಾಶಾ ಹರ್ಮನ್ ಬವೇಜಾ ಅವರೊಂದಿಗೆ ಬಹಳ ಕಾಲ ಸಂಬಂಧ ಹೊಂದಿದ್ದರು. ಫೆಬ್ರವರಿ 2014ರಲ್ಲಿ, ಹರ್ಮನ್ ಅವರು ಬಿಪಾಶಾ ಬಸು ಜೊತೆ ರಿಲೆಷನ್‌ಶಿಪ್‌ನಲ್ಲಿರುವ ವಿಷಯವನ್ನು ಬಹಿರಂಗಪಡಿಸಿದರು. ಅವರ ಸಂಬಂಧ ವಿವಾಹದ ಹಂತಕ್ಕೂ ತಲುಪಿತ್ತು. ಆದರೂ ಮುರಿದು ಬಿತ್ತು. 2014ರ ಡಿಸೆಂಬರ್‌ನಲ್ಲಿ ಬಿಪಾಶಾ ಬ್ರೇಕಪ್ ವಿಷಯವನ್ನು ಆನೌನ್ಸ್ ಮಾಡಿದ್ದರು.
ಹರ್ಮನ್‌ನ ಮುಖವು ಹೃತಿಕ್ ರೋಷನ್‌ರನ್ನು ಹೋಲುತ್ತದೆ. ಹೃತಿಕ್ ಅವರ ಲುಕ್ ಮತ್ತು ಸ್ಟೈಲೂ ಹೊಂದಿದ್ದರೂ ಬಾಲಿವುಡ್‌ನಲ್ಲಿ ಹರ್ಮನ್ ಹೇಳಿಕೊಳ್ಳುವ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಸ್ವಲ್ಪ ಸಮಯದ ಹಿಂದೆ ಸಂದರ್ಶನವೊಂದರಲ್ಲಿ, ಹೃತಿಕ್ ಜೊತೆ ಹೋಲಿಕೆಯಿಂದಾಗಿ ಅವರ ವೃತ್ತಿನಜೀವನದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದರು.
ಹರ್ಮನ್ ಪತ್ನಿ ಸಶಾ ನ್ಯೂಟ್ರಿಷಿಯನ್ ಹೆಲ್ತ್ ಟ್ರೈನರ್.
ಕ್ರಿಕೆಟಿಗ ಜಹೀರ್ ಖಾನ್ ಪತ್ನಿ ಸಾಗರಿಕಾ ಘಾಟ್ಗೆ ಅವರ ಫ್ರೆಂಡ್ ಕೂಡ ಹೌದು.
ಸಶಾ ರಾಮ್‌ಚಂದಾನಿ ಇನ್ಸ್ಟಾಗ್ರಾಮ್‌ನಲ್ಲಿ ಬೆಟರ್ ಬ್ಯಾಲೆನ್ಸ್ಡ್ ಸೆಲ್ಫ್ ಎಂಬ ಪೇಜ್ ನಡೆಸುತ್ತಿದ್ದಾರೆ.
ಹರ್ಮನ್ ಫ್ರೆಂಡ್ಸ್ ಜೊತೆಗಿನ ಕಾಕ್ಟೈಲ್ ಪಾರ್ಟಿಯ ಫೋಟೋ.