Priyanka chopra: ಭಾರತದ ಮೆಣಸಿನಕಾಯಿ ಭಾರೀ ಇಷ್ಟ ಎಂದ ದೇಸಿ ಗರ್ಲ್
Priyanka Chopra: ದೇಸಿ ಗರ್ಲ್ ಇಷ್ಟಗಳೇನೇನು ಗೊತ್ತಾ ? ಭಾರತೀಯಳಾಗಿದ್ದು ಅತ್ಯಂತ ಇಷ್ಟ ಪಡೋದೇನನ್ನು ಎಂದರೆ ಪಿಗ್ಗಿ ಕೊಟ್ಟ ಉತ್ತರವಿದು

ನಟಿ ಪ್ರಿಯಾಂಕಾ ಚೋಪ್ರಾ(Priyanka chopra) ಜೋನಾಸ್ ಭಾರತವನ್ನು ಈಗ ಹಾಲಿವುಡ್‌ನಲ್ಲಿಯೂ ಬ್ಯುಸಿಯಾಗಿದ್ದಾರೆ. ಭಾರತಕ್ಕೆ ವಿದೇಶಿ ಅಳಿಯನ ಕೊಟ್ಟಿರೋ ದೇಸಿ ಗರ್ಲ್ (Desi Girl)ಈಗ ವಿದೇಶದಲ್ಲೇ ಸೆಟಲ್. ಪ್ರಿಯಾಂಕ ಚೋಪ್ರಾ ದೇಶದ ಕುರಿತು ಅಷ್ಟೇ ಪ್ರೀತಿಯನ್ನೂ ಇಟ್ಟುಕೊಂಡಿದ್ದಾರೆ.
ನೀವು ಭಾರತೀಯನನ್ನು ಭಾರತದಿಂದ ಹೊರಗೆ ಕರೆದೊಯ್ಯಬಹುದು, ಆದರೆ ನೀವು ಭಾರತವನ್ನು(India) ಭಾರತೀಯನಿಂದ ಹೊರಹಾಕಲು ಖಂಡಿತಾ ಸಾಧ್ಯವಿಲ್ಲ! ಏನಂತೀರಾ ?
ಪಿಗ್ಗಿ ವಿಚಾರದಲ್ಲಿ ಇದು ಮತ್ತೆ ಸಾಬೀತಾಗಿದೆ! ಇತ್ತೀಚೆಗೆ ಫ್ಲೈಟ್‌ನಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತು ತಮ್ಮ ಕಂಫರ್ಟ್ ಸಿಟ್ಟಿಂಗ್ ಸ್ಟೈಲ್ ಎಂಜಾಯ್ ಮಾಡಿದ್ದರು ನಟಿ. ಈ ಪೋಟೋಗಳು ವೈರಲ್(Viral) ಅಗಿದ್ದವು.
ನಿಕ್ ಜೋನಸ್(Nick Jonas) ಅವರನ್ನು ಮದುವೆಯಾದಾಗಿನಿಂದಲೂ ಭಾರತದಿಂದ ದೂರವಿದ್ದರೂ, ಪ್ರಿಯಾಂಕಾ ಅವರು ಎಷ್ಟು ದೇಸಿಯಾಗಿದ್ದಾರೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಾರೆ.
ಇತ್ತೀಚೆಗೆ ಅವರು ದೀಪಾವಳಿ(Diwali) ಬ್ಯಾಷ್‌ಗೆ ಹಾಜರಾಗಿದ್ದಾಗ ನಟಿ ಭಾರತೀಯಳಾಗಿರುವುದರಲ್ಲಿ ತನ್ನ ನೆಚ್ಚಿನ ವಿಷಯ ಯಾವುದು ಎಂಬುದನ್ನು ರಿವೀಲ್ ಮಾಡಿದ್ದಾರೆ. ಎರಡನೇ ಬಾರಿ ಆಲೋಚನೆ ಮಾಡದೆ ನಟಿ ಜೋರಾಗಿ ನಕ್ಕು ನಾನು ಅಲ್ಲಿ ಎಷ್ಟು ಬೇಕಾದರೂ ಮಿರ್ಚಿ ತಿನ್ನಬಹುದು ಎಂದು ಹೇಳಿದ್ದಾರೆ.
ಮಿಂಡಿ ಕಾಲಿಂಗ್ ಮತ್ತು ಲಿಲ್ಲಿ ಸಿಂಗ್ ಕೂಡ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಉತ್ತರವನ್ನು ನೀಡುತ್ತಾ, ಲಿಲ್ಲಿ, ಮೊದಲಿಗೆ ತನ್ನ ನೆತ್ತಿ ಬೊಟ್ಟು ಕಡೆಗೆ ತೋರಿಸಿ, ಓಹ್, ನನ್ನ ಟೀಕಾ! ಎಂದಿದ್ದಾರೆ.
ಪ್ರಿಯಾಂಕಾ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿದಿರುವುದು ಇದೇ ಮೊದಲಲ್ಲ. ನಟಿ ನಿಜವಾದ ದೇಸಿ ಹುಡುಗಿ ಎಂದು ಸಾಬೀತುಪಡಿಸಿದ ಇತರ ನಿದರ್ಶನಗಳಿವೆ.
ಪ್ರಿಯಾಂಕಾ ಭಾರತೀಯ ಸಂಪ್ರದಾಯವನ್ನು ಎತ್ತಿ ಹಿಡಿದಿರುವುದು ಇದೇ ಮೊದಲಲ್ಲ. ನಟಿ ನಿಜವಾದ ದೇಸಿ ಹುಡುಗಿ ಎಂದು ಸಾಬೀತುಪಡಿಸಿದ ಇತರ ನಿದರ್ಶನಗಳಿವೆ.
ಭಾರತೀಯ ಹಬ್ಬವನ್ನು ಆಚರಿಸುವ ಅವಕಾಶವನ್ನು ಪ್ರಿಯಾಂಕಾ ಚೋಪ್ರಾ ಎಂದಿಗೂ ಮಿಸ್ ಮಾಡುವುದಿಲ್ಲ. ನಟಿಯ ಭಾರತೀಯ ಹಬ್ಬಗಳ ಅದ್ಧೂರಿ ಆಚರಣೆಗಳು ಯಾವಾಗಲೂ ಸುದ್ದಿಯಾಗುತ್ತವೆ. ಇತ್ತೀಚೆಗಷ್ಟೇ ನಿಕ್ ಜೋನಾಸ್ ಜೊತೆಗಿನ ದೀಪಾವಳಿ ಪೂಜೆ ವೈರಲ್ ಆಗಿತ್ತು