ಪ್ರಿಯಾಂಕಾ ಚೋಪ್ರಾರ ಇಂಡಿಯನ್ ರೆಸ್ಟೋರೆಂಟ್ 'ಸೋನಾ' ಹೇಗಿದೆ ನೋಡಿ!
ಪ್ರಿಯಾಂಕಾ ಚೋಪ್ರಾ ಸಿನಿಮಾಗಳ ಜೊತೆಗೆ ತಮ್ಮನ್ನು ಇತರೆ ಬ್ಯುಸಿನೆಸ್‌ಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ, ನಟಿ ನ್ಯೂಯಾಕ್‌ನಲ್ಲಿ ಇಂಡಿಯನ್ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ. 'ಸೋನಾ' ಹೆಸರಿನ ಈ ರೆಸ್ಟೋರೆಂಟ್ ಉದ್ಘಾಟನೆಯ ಫೋಟೋವನ್ನು ಪ್ರಿಯಾಂಕಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಪ್ರಿಯಾಂಕಾ ತನ್ನ ಹೊಸ ರೆಸ್ಟೋರೆಂಟ್‌ನ ಪ್ರಚಾರ ಮಾಡಲು ಪ್ರಾರಂಭಿಸಿದ್ದಾರೆ. ತಮ್ಮ ಹೋಟೇಲ್‌ನ ಫೋಟೋವನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ ನಟಿ.
ಈ ಫೋಟೋಗಳಲ್ಲಿ, ಪ್ರಿಯಾಂಕಾರ ರೆಸ್ಟೋರೆಂಟ್‌ನ ಒಳಾಂಗಣವು ತುಂಬಾ ಸುಂದರವಾಗಿ ಕಾಣುತ್ತದೆ.
ರೆಸ್ಟೋರೆಂಟ್ ಮರದ ನೆಲಹಾಸನ್ನು ಹೊಂದಿದ್ದು, ತುಂಬಾ ಸುಂದರವಾಗಿ ಕಾಣುತ್ತದೆ.
ವುಡನ್ ಫ್ಲೋರಿಂಗ್‌ನ ಗೋಲ್ಡನ್ ಮತ್ತು ಹಳದಿ ಲೈಟ್ಸ್ ರೆಸ್ಟೋರೆಂಟ್‌ಗೆ ವಿಭಿನ್ನ ಲುಕ್ ನೀಡುತ್ತವೆ. ಇಲ್ಲಿ ಎರಡು ರೀತಿಯ ಆಸನ ವ್ಯವಸ್ಥೆ ಇದೆ. ಒಂದು ಬದಿಯಲ್ಲಿ ಟೇಬಲ್-ಚೇರ್ ಮತ್ತು ಗೋಡೆಗೆ ಅಂಟಿಕೊಂಡಿರುವ ಬೆಂಚುಗಳಿವೆ, ಇನ್ನೊಂದು ಬದಿಯಲ್ಲಿ ಸೋಫಾ ಮತ್ತು ಟೇಬಲ್ ಇದೆ.
ರೆಸ್ಟೋರೆಂಟ್‌ನ ಪ್ರತಿ ಟೇಬಲ್‌ನಲ್ಲಿ ಸುಂದರವಾದ ಮಿನಿ ಲ್ಯಾಂಪ್‌ಗಳ ಜೊತೆಗೆ, ಪ್ಲೇಟ್‌ಗಳು ಮತ್ತು ಗ್ಲಾಸುಗಳನ್ನು ಕಾಣಬಹುದು.
ಪ್ರಿಯಾಂಕಾ ಚೋಪ್ರಾ, ಫೋಟೋ ಪೋಸ್ಟ್ ಮಾಡಿ 'ಸೋನಾ ರೆಸ್ಟೋರೆಂಟ್' ನ್ಯೂಯಾರ್ಕ್ ವೆಬ್‌ಸೈಟ್ ಲೈವ್ ಆಗಿದೆ. ನೀವು ಅದನ್ನು ನೋಡಬಹುದು. ಎಂದು ಬರೆದು ಅವರು ವೆಬ್‌ಸೈಟ್‌ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.
ವೆಬ್‌ಸೈಟ್‌ನಲ್ಲಿ ವೆಲ್ಕಮ್ ನೋಟ್ ಜೊತೆ ರೆಸ್ಟೋರೆಂಟ್ ಒಳಗಿನ ಫೋಟೋಗಳಿವೆ. 'ಈ ರೆಸ್ಟೋರೆಂಟ್ ಕ್ಲಾಸಿ ಇಂಡಿಯಾದ ರುಚಿಗಳನ್ನು ನೀಡುತ್ತದೆ. ಭಾರತದ ಅದೇ ಸ್ವಾದವನ್ನು ಈಗ ನ್ಯೂಯಾರ್ಕ್ ನಗರದ ಮಧ್ಯಭಾಗದಲ್ಲಿಯೂ ಕಾಣಬಹುದು,' ಎಂದು ರೆಸ್ಟೋರೆಂಟ್‌ನ ವೆಲ್ಕಮ್ ನೋಟ್‌ನಲ್ಲಿ ಬರೆಯಲಾಗಿದೆ.
ಈ ರೆಸ್ಟೋರೆಂಟ್ ಸಂಜೆ 5 ರಿಂದ 11 ರವರೆಗೆ ಓಪನ್ ಇರುತ್ತದೆ. ಪ್ರಿಯಾಂಕಾ ಚೋಪ್ರಾ ತಮ್ಮ ನಿಕ್‌ನೇಮ್ ಮಿಮಿ ಹೆಸರಿನಲ್ಲಿ ಖಾಸಗಿ ಡೈನಿಂಗ್ ರೂಮನ್ನು ಸಹ ತೆರೆದಿದ್ದಾರೆ.
ಸೋನಾದ ವೆಬ್‌ಸೈಟ್‌ನ ಪ್ರಕಾರ, ಈ ಡೈನಿಂಗ್ ರೂಮ್‌ನಲ್ಲಿ 8 ರಿಂದ 30 ಜನರು ಒಟ್ಟಿಗೆ ಊಟ ಮಾಡಬಹುದು. ಖಾಸಗಿ ಈವೆಂಟ್ ಮಾಡಲು ಬಯಸಿದರೆ, ವೆಬ್‌ಸೈಟ್ ಮೂಲಕ ಕಾಯ್ದಿರಿಸಬಹುದು.
ಈ ಮಾರ್ಚ್ ಅಂತ್ಯದ ವೇಳೆಗೆ ಸೋನಾ ರೆಸ್ಟೋರೆಂಟ್ ಪ್ರಾರಂಭವಾಗಲಿದ್ದು ಮಂಗಳವಾರದಿಂದ ಶನಿವಾರದವರೆಗೆ ಸಂಜೆ 5 ರಿಂದ 11 ರವರೆಗೆ ಭೇಟಿ ಕೊಡಬಹುದು ಇದರ ವಿಳಾಸ 36 ಇ, 20 ಸ್ಟ್ರೀಟ್, ನ್ಯೂಯಾರ್ಕ್.
ಪ್ರಿಯಾಂಕಾ ಚೋಪ್ರಾ ಕೂಡ ಅದರ ಮೆನು ಬಗ್ಗೆ ಸಹ ಹೇಳಿದ್ದಾರೆ. ಸೋನಾ ರೆಸ್ಟೋರೆಂಟ್‌ನಲ್ಲಿ ಊಟದ ಜವಾಬ್ದಾರಿಯನ್ನು ಶೆಫ್ ಹರಿ ನಾಯಕರಿಗೆ ನೀಡಲಾಗಿದೆ. ಅವರು ಟೇಸ್ಟಿ ಭಾರತೀಯ ಆಹಾರಕ್ಕಾಗಿ ಪ್ರಸಿದ್ಧರಾಗಿದ್ದಾರೆ ಎಂದು ಪ್ರಿಯಾಂಕಾ ಬರೆದಿದ್ದಾರೆ.
ಈ ತಿಂಗಳ ಅಂತ್ಯದ ವೇಳೆಗೆಸೋನಾ ಓಪನ್ ಆಗುತ್ತದೆ. ನನ್ನ ಸ್ನೇಹಿತರಾದ ಮನೀಶ್ ಗೋಯಲ್ ಮತ್ತು ಡೇವಿಡ್ ರಾಬಿನ್ ಅವರ ನಾಯಕತ್ವ ಇಲ್ಲದಿದ್ದರೆ ಈ ಪ್ರಯತ್ನ ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ನಮ್ಮ ಡಿಸೈನರ್ ಮೆಲಿಸ್ಸಾ ಬೋವರ್ಸ್ ಮತ್ತು ತಂಡದ ಉಳಿದವರಿಗೆ ಅನೇಕ ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
ಪ್ರಿಯಾಂಕಾ ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಸಿನಿಮಾಗಳನ್ನು ಸಹ ನಿರ್ಮಿಸುತ್ತಾರೆ. ಪರ್ಪಲ್ ಪೆಬಲ್ಸ್ ಪಿಕ್ಚರ್ಸ್ ನಟಿಯ ಪ್ರೊಡಕ್ಷನ್ ಹೌಸ್ ಆಗಿದೆ.
ಅದರ ಬ್ಯಾನರ್ ಅಡಿಯಲ್ಲಿ, ಅವರು ವೆಂಟಿಲೇಟರ್, ಸರ್ವಾನ್, ಪಹುನಾ, ಫೈರ್‌ಬ್ಯಾಂಡ್, ಪಾನಿ, ದಿ ಸ್ಕೈ ಈಸ್ ಪಿಂಕ್, ದಿ ವೈಟ್ ಟೈಗರ್ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ
ಕೆಲವು ದಿನಗಳ ಹಿಂದೆ ಪ್ರಿಯಾಂಕಾ ತನ್ನ 'Unfinished' ಪುಸ್ತಕವನ್ನೂ ಬಿಡುಗಡೆ ಮಾಡಿದ್ದಾರೆ .