- Home
- Entertainment
- Cine World
- ಪ್ರಿಯಾಂಕಾ ಚೋಪ್ರಾ ಹೊಸ ಲುಕ್! ಎಲ್ಲರ ಕಣ್ಣು ಹೊಕ್ಕಳಿನಲ್ಲಿದ್ದ ₹2.7 ಕೋಟಿ ಮೌಲ್ಯದ ಡೈಮೆಂಡ್ ಪಿನ್ ಮೇಲಿತ್ತು!
ಪ್ರಿಯಾಂಕಾ ಚೋಪ್ರಾ ಹೊಸ ಲುಕ್! ಎಲ್ಲರ ಕಣ್ಣು ಹೊಕ್ಕಳಿನಲ್ಲಿದ್ದ ₹2.7 ಕೋಟಿ ಮೌಲ್ಯದ ಡೈಮೆಂಡ್ ಪಿನ್ ಮೇಲಿತ್ತು!
ಪ್ರಿಯಾಂಕಾ ಚೋಪ್ರಾ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಬ್ಲ್ಯಾಕ್ ಕೋ-ಆರ್ಡ್ ಸೆಟ್‌ನಲ್ಲಿ ಅವರ ಲುಕ್ ವೈರಲ್ ಆಗಿದೆ. ಅವರ ಹೊಕ್ಕಳಿನ ಪಿಯರ್ಸಿಂಗ್ ಮೇಲೆ ಎಲ್ಲರ ಕಣ್ಣು ಇತ್ತು. ಇದರ ಬೆಲೆ ಬರೋಬ್ಬರಿ 2.7 ಕೋಟಿ ರೂ. ಮೌಲ್ಯದ್ದಾಗಿತ್ತು.

ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡರು. ಈ ವೇಳೆ ಅಲ್ಲಿನ ಪಾಪರಾಜಿಗಳಿಗೆ ಭರ್ಜರಿ ಪೋಸ್ ನೀಡಿದರು. ಈ ವೇಳೆ ಎಲ್ಲರ ಕಣ್ಣು ಪ್ರಿಯಾಂಕಾಗಿಂತ ಬೇರೆ ವಸ್ತುವಿನ ಮೇಲೆಯೇ ಕೇಂದ್ರೀಕೃತ ಆಗಿತ್ತು.
ಈಗ ಪ್ರಿಯಾಂಕಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅವರ ಈ ಲುಕ್ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ, ಪ್ರಿಯಾಂಕಾ ತನ್ನ ಹೊಕ್ಕಳಿಗೆ ಡೈಮೆಂಡ್ ಪಿನ್ ಸಿಕ್ಕಿಸಿಕೊಂಡು ಪೋಸ್ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಪ್ರಿಯಾಂಕಾ ಹೊಕ್ಕಳಲ್ಲಿ ಪಿಯರ್ಸಿಂಗ್ ಮಾಡಿಸಿಕೊಂಡಿದ್ದಾರೆ. ಅದಕ್ಕೆ ಡೈಮಂಡ್ ಹಾಕಿದ್ದರು. ಈ ಡೈಮೆಂಡ್ ಪಿನ್ ಬೆಲೆ ಬರೋಬ್ಬರಿ 2.7 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ. ಪ್ರಿಯಾಂಕಾ ಹಲವು ದಿನಗಳಿಂದ ಹೈದರಾಬಾದ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಈಗ ಅವರು ಮುಂಬೈನಲ್ಲಿ ಸಿನಿಮಾ ಶೂಟಿಂಗ್‌ಗೆ ಬಂದಿದ್ದಾರೆ.
ಈ ವೇಳೆ ಪ್ರಿಯಾಂಕಾ ಕ್ರಾಪ್ ಟಾಪ್ ಜೊತೆಗೆ ಬ್ಲ್ಯಾಕ್ ಕಲರ್ ಕೋ-ಆರ್ಡ್ ಸೆಟ್ ಧರಿಸಿದ್ದರು. ಇದರೊಂದಿಗೆ ಅವರು ಸನ್ಗ್ಲಾಸ್‌ನೊಂದಿಗೆ ತಮ್ಮ ಲುಕ್ ಅನ್ನು ನೀಡಿದರು. ಪ್ರಿಯಾಂಕಾ ಹೊಟ್ಟೆಯ ಮೇಲೆ ಜನರ ಕಣ್ಣು ನೆಟ್ಟಿದ್ದವು. ಅವರು ಹೊಕ್ಕಳಲ್ಲಿ ಪಿಯರ್ಸಿಂಗ್ ಮಾಡಿಸಿಕೊಂಡಿದ್ದಾರೆ.