- Home
- Entertainment
- Cine World
- ತಮ್ಮ ಪುಸ್ತಕದಲ್ಲಿ ಸುಳ್ ಸುಳ್ಳೇ ಬರೆದಿದ್ದಾರಂತೆ ಪ್ರಿಯಾಂಕ..! ದೇಸಿ ಗರ್ಲ್ ಕೊಟ್ಟ ಉತ್ತರವೇನು ?
ತಮ್ಮ ಪುಸ್ತಕದಲ್ಲಿ ಸುಳ್ ಸುಳ್ಳೇ ಬರೆದಿದ್ದಾರಂತೆ ಪ್ರಿಯಾಂಕ..! ದೇಸಿ ಗರ್ಲ್ ಕೊಟ್ಟ ಉತ್ತರವೇನು ?
ಪ್ರಿಯಾಂಕ ಚೋಪ್ರಾ ಪುಸ್ತಕದ ಬಗ್ಗೆ ವಿಮರ್ಶಕರ ಟೀಕೆ ಸುಳ್ ಸುಳ್ಳೇ ಬರೆದಿದ್ದಾರಂತೆ ದೇಸಿ ಗರ್ಲ್, ನಟಿ ಕೊಟ್ಟ ಉತ್ತರ ಇದು

ಪ್ರಿಯಾಂಕಾ ಚೋಪ್ರಾ ತನ್ನ ಮೆಮೊಯಿರ್ ಬರಹದಿಂದ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯು ತನ್ನ ಲೈಫ್ ಜರ್ನಿ ಮೇಲೆ ಬೆಳಕು ಚೆಲ್ಲಿದರೂ, ಭಾರತ ಮತ್ತು ಯುಎಸ್ನಲ್ಲಿ ಬೆಳೆಯುವುದರಿಂದ ಹಿಡಿದು, ಮಿಸ್ ಇಂಡಿಯಾದಿಂದ ಮಿಸ್ ವರ್ಲ್ಡ್ ವರೆಗೆ ಮತ್ತು ಹಾಲಿವುಡ್ ತಾರೆಯಾಗುವವರೆಗೆ ಬರೆದಿದ್ದಾರೆ.
ಆದರೆ ಇಲ್ಲಿ ಎಲ್ಲ ಕಡೆ ನಟಿ ಬಹಳಷ್ಟು ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಬಹುಶಃ ಅದನ್ನು ಉದ್ದೇಶಪೂರ್ವಕವಾಗಿ ಅವಾಯ್ಡ್ ಮಾಡಿದ್ದಾರೆ.
ಪುಸ್ತಕದಲ್ಲಿ ಜನರ ಗುರುತುಗಳನ್ನು ಬಹಿರಂಗಪಡಿಸಲು ಆಸೆಪಡುತ್ತೀರಾ ಎಂದು ನಟಿಯನ್ನು ಇತ್ತೀಚೆಗೆ ಕೇಳಿದಾಗ, ಅವರು ಅದನ್ನು ನಿರಾಕರಿಸಿದ್ದಾರೆ. ತನ್ನ ಪುಸ್ತಕವು ತನ್ನ ಬಗ್ಗೆ ಮಾತ್ರ, ಇತರರ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ.
ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಾಂಕಾ, ಇದು ನನ್ನದೇ ಹೊರತು ಬೇರೆಯವರ ಕಥೆ ಅಲ್ಲ. ಇದು ಪ್ರಿಯಾಂಕಾ ಸ್ಮರಣೆಯನ್ನು ಹೇಳುತ್ತದೆ ಎಂದಿದ್ದಾರೆ.
ಆದ್ದರಿಂದ ಇದು ನನ್ನ ಕಥೆ. ಇದು ನಿಜವಾಗಿಯೂ ತಮಾಷೆಯಾಗಿದೆ. ನಾನು ಕೆಲವು ವಿಮರ್ಶೆಗಳನ್ನು ಓದಿದ್ದೇನೆ. ನಾನು ಸತ್ಯವನ್ನು ಮಾತನಾಡಲಿಲ್ಲ ಎಂದು ಹೇಳಲಾಗಿದೆ.
ನಿಜಕ್ಕೂ ನೀವು ನನ್ನ ಪುಸ್ತಕದಲ್ಲಿ ಗಾಸಿಪ್ ಬಯಸಿದ್ದೀರಿ ಎಂದಿದ್ದಾರೆ ನಟಿ. ಇದು ಎಲ್ಲರಿಗೂ ಹೇಳಬೇಕೆಂದು ಇರುವ ವಿಚಾರ. ನಾನು ಸ್ಟಾರ್‌ಡಸ್ಟ್ ಅಲ್ಲ ಅಲ್ಲ ಎಂದಿದ್ದಾರೆ ನಟಿ.
ಹೆಸರುಗಳನ್ನು ಬಹಿರಂಗಪಡಿಸದೆ, ಪ್ರಿಯಾಂಕಾ ತನ್ನ ಬಾಲಿವುಡ್ ವೃತ್ತಿಜೀವನದ ಆರಂಭದಲ್ಲಿ ಅನುಭವಿಸಿದ ಕೆಲವು ದುರದೃಷ್ಟಕರ ಘಟನೆಗಳ ಬಗ್ಗೆ ಬಹಿರಂಗಪಡಿಸಿದ್ದಾರೆ.
ಅವಳು ಮಾತನಾಡಿದ್ದ ಅನೇಕ ಘಟನೆಗಳಲ್ಲಿ, ಒಬ್ಬ ನಿರ್ದೇಶಕರು ಆಕೆಯ ವೃತ್ತಿ ಜೀವನದ ಆರಂಭದಲ್ಲಿ 'ಬೂಬ್ ಜಾಬ್' ಮತ್ತು ಇತರ ಕಾಸ್ಮೆಟಿಕ್ ವರ್ಧನೆಗಳನ್ನು ಪಡೆಯುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.