ಮದ್ವೆಗ್ಯಾಕೆ ಕರ್ದಿಲ್ಲ ಎಂದ ಅಭಿಮಾನಿಗೆ ಪಿಗ್ಗಿ ಕೊಟ್ರು ಸೂಪರ್ ಉತ್ತರ
First Published Mar 28, 2021, 9:19 AM IST
ನನ್ನನ್ನು ಯಾಕೆ ಮದುವೆಗೆ ಕರೆದಿಲ್ಲ ಎಂದು ಕೇಳಿದ ಅಭಿಮಾನಿ | ಸೂಪರ್ ಆನ್ಸರ್ ಕೊಟ್ಟ ಪ್ರಿಯಾಂಕ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಶುಕ್ರವಾರ ಟ್ವಿಟ್ಟರ್ ನಲ್ಲಿ ತಮ್ಮ ಅಭಿಮಾನಿಗಳಿಗಾಗಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದರು.

ಒಬ್ಬ ಅಭಿಮಾನಿ ನಟಿ 2018ರಲ್ಲಿ ನಿಕ್ ಜೊನಸ್ ಅವರ ಜೊತೆ ಮದುವೆಗೆ ಏಕೆ ಆಹ್ವಾನಿಸಿಲ್ಲ ಎಂದು ಕೇಳಿದ್ದಾರೆ.

ಹಾಸ್ಯದ ಉತ್ತರದಲ್ಲಿ, ವೈಟ್ ಟೈಗರ್ ನಟಿ ನಯವಾಗಿ ಕ್ಷಮೆಯಾಚಿಸಿದ್ದಾರೆ.

ತಮಗೆ ಆತನನ್ನು ತಿಳಿದಿಲ್ಲದಿರುವುದು ಮದ್ವೆಗೆ ಕರೆಯದಿರೋಕೆ ಕಾರಣ ಎಂದು ಹೇಳಿದ್ದಾರೆ.

ನನ್ನನ್ನು ಮದುವೆಗೆ ಏಕೆ ಆಹ್ವಾನಿಸಲಾಗಿಲ್ಲ? ಆ ಸಮಯದಲ್ಲಿ ನಾನು ಜೋಧಪುರದಲ್ಲಿ ಇದ್ದೆ ಎಂದು ಅಭಿಮಾನಿ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಉತ್ತರಿಸಿ ಕ್ಷಮಿಸಿ ಸಂತೋಷ್ ಪಟ್ನಾಯಕ್ ನನಗೆ ನೀವು ತಿಳಿದಿಲ್ಲವೆಂದು ನಾನು ಊಹಿಸುತ್ತೇನೆ, ಅದು ಕಾರಣವಿರಬಹುದು ಎಂದಿದ್ದಾರೆ.

ಅವಳು ನಗುವ ಎಮೋಜಿಗಳ ಮೂಲಕ ಟ್ವೀಟ್ ಅನ್ನು ಕೊನೆಗೊಳಿಸಿದ್ದಾರೆ

ಅವರ ಮತ್ತೊಬ್ಬ ಅಭಿಮಾನಿ ನಿಮ್ಮ ಮುಂದಿನ ಮುಂಬರುವ ಬಾಲಿವುಡ್ ಚಿತ್ರ ಯಾವುದು ಎಂದು ಕೇಳಿದ್ದಾರೆ.

ಇದಕ್ಕೆ ನಟಿ "ಮುಂದಿನ ವರ್ಷ !!!" ಎಂದಿದ್ದಾರೆ. ಶೋನಾಲಿ ಬೋಸ್ ನಿರ್ದೇಶನದ ಬಾಲಿವುಡ್ ಚಿತ್ರ ದಿ ಸ್ಕೈ ಈಸ್ ಪಿಂಕ್, ಇದರಲ್ಲಿ ಫರ್ಹಾನ್ ಅಖ್ತರ್ ಮತ್ತು ಜೈರಾ ವಾಸಿಮ್ ಜೊತೆ ಪ್ರಿಯಾಂಕಾ ನಟಿಸಿದ್ದಾರೆ. ಈ ಚಿತ್ರ 2019 ರಲ್ಲಿ ಬಿಡುಗಡೆಯಾಯಿತು.