SSMB29: ಪ್ರಿಯಾಂಕಾ ಚೋಪ್ರಾ ಅಭಿನಯ ನೋಡಿ ಮಹೇಶ್ ಬಾಬು ಪತ್ನಿ ಹೀಗಾ ಅನ್ನೋದು!
ಪ್ರಿಯಾಂಕಾ ಚೋಪ್ರಾ ಈಗ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ. ಹಾಲಿವುಡ್‌ನಲ್ಲೂ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ಈಗ ಕೇವಲ ಬಾಲಿವುಡ್ ನಟಿ ಮಾತ್ರವಲ್ಲ. ಹಾಲಿವುಡ್‌ನಲ್ಲೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಮಹೇಶ್ ಬಾಬು ಪತ್ನಿ ನಮ್ರತಾ, ಪ್ರಿಯಾಂಕಾ ಅವರನ್ನು ಹೊಗಳಿದ್ದಾರೆ.
“ಹೆಡ್ಸ್ ಆಫ್ ಸ್ಟೇಟ್” ಚಿತ್ರದಲ್ಲಿ ಪ್ರಿಯಾಂಕಾ ಅಭಿನಯ ನೋಡಿ ನಮ್ರತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಸೂಪರ್ ಆಗಿ ನಟಿಸಿದ್ದೀರಾ ಪ್ರಿಯಾಂಕಾ. ಚಿತ್ರ ತುಂಬಾ ಚೆನ್ನಾಗಿದೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಿಯಾಂಕಾ ಕೂಡ ಧನ್ಯವಾದ ತಿಳಿಸಿದ್ದಾರೆ.
ಇವರಿಬ್ಬರ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಿಯಾಂಕಾ, ಮಹೇಶ್ ಬಾಬು ಜೊತೆ SSMB29 ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.
ಮಹೇಶ್ ಬಾಬು ಲುಕ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗಡ್ಡ, ಉದ್ದ ಕೂದಲಿನಲ್ಲಿ ಮಹೇಶ್ ಕಾಣಿಸಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಖಳನಾಯಕನ ಪಾತ್ರದಲ್ಲಿದ್ದಾರೆ.
ಸುಮಾರು 1000 ಕೋಟಿ ಬಜೆಟ್‌ನ ಈ ಚಿತ್ರ ಭಾರತೀಯ ಚಿತ್ರರಂಗದ ಅತಿ ದುಬಾರಿ ಚಿತ್ರಗಳಲ್ಲಿ ಒಂದಾಗಲಿದೆ. ರಾಜಮೌಳಿ, ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಶೀಘ್ರದಲ್ಲೇ ಚಿತ್ರತಂಡ ಕೀನ್ಯಾಕ್ಕೆ ತೆರಳಲಿದೆ.