ಪ್ಲಾಸ್ಟಿಕ್ ಸರ್ಜರಿ ಎಡವಟ್ಟಿಗೆ ಬಲಿಯಾಯ್ತು ಜೀವ, ಖ್ಯಾತ ನಟಿ ಸಿಲ್ವಿನಾ ಇನ್ನಿಲ್ಲ!
ಪ್ರಮುಖವಾಗಿ ಸೆಲೆಬ್ರೆಟಿಗಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ಹೆಚ್ಚು. ಮೂಗು, ತುಟಿ ಸೇರಿದಂತೆ ಸಂಪೂರ್ಣ ಮುಖವನ್ನೇ ಪ್ಲಾಸ್ಟಿಕ್ ಸರ್ಜರಿ ಮಾಡಿ ಮತ್ತಷ್ಟು ಸುಂದರವಾಗಿ ಕಾಣಲು ಹಂಬಲಿಸುತ್ತಾರೆ. ಇದೀಗ ಇದೇ ಪ್ಲಾಸ್ಟಿಕ್ ಸರ್ಜರಿಯಿಂದ ಖ್ಯಾತ ನಟಿ ಸಿಲ್ವಿನಾ ಮೃತಪಟ್ಟಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ಹೊಸ ವಿಚಾರವಲ್ಲ. ಹೆಚ್ಚಾಗಿ ಸೆಲೆಬ್ರೆಟಿಗಳು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಮತ್ತಷ್ಟು ಸುಂದರವಾಗಿ ಕಾಣಲು ಬಯಸುತ್ತಾರೆ. ಆದರೆ ಈ ಪ್ಲಾಸ್ಟಿಕ್ ಸರ್ಜರಿಯಿಂದ ಅಪಾಯವೂ ಹೆಚ್ಚು.
ಖ್ಯಾತ ನಟಿ, ಮಾಡೆಲ್ ಹಾಗೂ ಟಿವಿ ನಿರೂಪಕಿ ಸಿಲ್ವಿನಾ ಲೂನಾ ಇದೀಗ ಇದೇ ಪ್ಲಾಸ್ಟಿಕ್ ಸರ್ಜರಿಗೆ ಬಲಿಯಾಗಿದ್ದಾಳೆ. ಅರ್ಜಂಟೈನಾದ ಈ ನಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಬಳಿಕ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು.
43 ವರ್ಷಗ ಸಿಲ್ವಿನಾ ಲೂನಾ ಕಿಡ್ನಿ ವೈಫಲ್ಯ ಸೇರಿದಂತೆ ಬಹು ಅಂಗಾಗ ವೈಫಲ್ಯದಿಂದ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಚಿಕಿತ್ಸೆ ಪಡೆದರೂ ಫಲಕಾರಿಯಾಗಲಿಲ್ಲ.
ಸಿಲ್ವಿನಾ ಲೂನಾ ತಮ್ಮ ಸಿನಿ ಕರಿಯರ್‌ನಲ್ಲಿ ಉತ್ತುಂಗಕ್ಕೇರಿದಾಗ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದರು. ಸತತ ಪ್ಲಾಸ್ಟಿಕ್ ಸರ್ಜರಿಗಳಿಂದ ಸಿಲ್ವಿನಾ ಆರೋಗ್ಯ ಹದಗೆಟ್ಟಿತ್ತು.
2011ರಿಂದ ಸಿಲ್ವಿನಾ ಒಂದಲ್ಲೂ ಒಂದು ಆರೋಗ್ಯ ಸಮಸ್ಯೆ ಎದುರಿಸಿದ್ದರು. ಆದರೆ 2016ರ ಬಳಿಕ ಸಿಲ್ವಿನಾ ಕಾರ್ಯಕ್ರಮ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಆಸ್ಪತ್ರೆಯಲ್ಲೇ ಕಾಣಿಸಿಕೊಂಡರು.
ಪ್ಲಾಸ್ಟಿಕ್ ಸರ್ಜರಿಯಿಂದ ಸಿಲ್ವಿನಾ ಕಿಡ್ನಿ ಸೇರಿದಂತೆ ಇತರ ಅಂಗಾಗಳು ವೈಫಲ್ಯಗೊಂಡಿತು. ಇದಕ್ಕಾಗಿ ಕಳೆದೆರಡು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನು 2023ರ ಆರಂಭದಿಂದಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಸಿಲ್ವಿನಾ ಲೂನಾ ನಿಧನವನ್ನು ಆಕೆಯ ವಕೀಲರು ಹಾಗೂ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಕುಟುಂಬಸ್ಥರು ಈಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ ಮೇಳೆ ದೇಹಕ್ಕೆ ಚುಚ್ಚುವ ಔಷಧಿಗಳು, ಟಾಕ್ಸಿಕ್ ಇಂಜೆಕ್ಷನ್ ಸೇರಿದಂತೆ ಇತರ ಔಷಧಿಗಳಿಂದ ಸಿಲ್ವಿನಾ ಲೂನಾ ಆರೋಗ್ಯ ಹದಗೆಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.