- Home
- Entertainment
- Cine World
- ಹಳದಿ ಬನಾರಸಿ ಸೀರೆಯಲ್ಲಿ ಪೂಜಾ ಹೆಗ್ಡೆ; ನಟಿಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ!
ಹಳದಿ ಬನಾರಸಿ ಸೀರೆಯಲ್ಲಿ ಪೂಜಾ ಹೆಗ್ಡೆ; ನಟಿಯ ಸಾಂಪ್ರದಾಯಿಕ ಲುಕ್‌ಗೆ ಫ್ಯಾನ್ಸ್ ಫಿದಾ!
ದಕ್ಷಿಣದ ಚೆಲುವೆ ಪೂಜಾ ಹೆಗ್ಡೆ (Pooja Hegde) ಅವರು ಮತ್ತೊಮ್ಮೆ ಮಾಡ್ರನ್ ಔಟ್‌ಫಿಟ್ ಮಾತ್ರವಲ್ಲ ತಾನು ಸಾಂಪ್ರಾದಾಯಿಕ ಲುಕ್‌ಗೂ ಸೈ ಎಂದು ತೋರಿಸಿದ್ದಾರೆ. ನಟಿ ಇತ್ತೀಚಿಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬನಾರಸಿ ಸೀರೆಯಲ್ಲಿ ಪೋಸ್ ನೀಡಿದ್ದಾರೆ. ಪೂಜಾ ಅವರ ಈ ಫೋಟೋಗಳು ಸಖತ್ ವೈರಲ್ ಆಗಿವೆ. ಪ್ರಕಾಶಮಾನವಾದ ಹಳದಿ ಸೀರೆಯಲ್ಲಿ ತನ್ನ ಸಾಂಪ್ರದಾಯಿಕ ನೋಟದೊಂದಿಗೆ ದಿವಾ ಟೈಮ್‌ಲೆಸ್ ಗ್ಲಾಮರ್ ಅನ್ನು ಹೊರಹಾಕುತ್ತಿರುವಾಗ ಹೆಗ್ಡೆ ಕೆಲವು ಅದ್ಭುತವಾದ ಫ್ಯಾಷನ್ ಗೋಲ್ ನೀಡಿದ್ದಾರೆ.

ಸ್ಟೈಲಿಶ್ ನಟಿ ಸಂಪೂರ್ಣ ಫ್ಯಾಷನಿಸ್ಟ್ ಆಗಿದ್ದು, ತಮ್ಮನ್ನು ಎಲ್ಲಾ ಲುಕ್‌ನಲ್ಲೂ ಸುಲಭವಾಗಿ ಪ್ರಸ್ತುತ ಪಡಿಸುತ್ತಾರೆ. ಅದು ಚಿಕ್ ಜಂಪ್‌ಸೂಟ್ ಆಗಿರಲಿ ಅಥವಾ ಕ್ಯಾಶುಯಲ್ ಡ್ರೆಸ್ ಆಗಿರಲಿ, ಪೂಜಾ ಯಾವುದೇ ನೋಟದಲ್ಲಿ ಪರ್ಫೇಕ್ಟ್ ಆಗಿ ಕಾಣುತ್ತಾರೆ.
ಈ ಬಾರಿ ಅವರು ತಮ್ಮ ಅಭಿಮಾನಿಗಳನ್ನು ಆರು ಗಜಗಳ ಸಾಂಪ್ರದಾಯಿಕ ಆವತಾರದಲ್ಲಿ ಮನರಂಜಿಸಿದ್ದಾರೆ. ಪ್ರಕಾಶಮಾನವಾದ ಹಳದಿ ಸೀರೆಯಲ್ಲಿ ಪೂಜಾ ಅವರು ತನ್ನ ಸಾಂಪ್ರದಾಯಿಕ ನೋಟದೊಂದಿಗೆ ದಿವಾ ಟೈಮ್‌ಲೆಸ್ ಗ್ಲಾಮರ್ ಅನ್ನು ಹೊರಹಾಕುತ್ತಿದ್ದಾರೆ.
ಹಳದಿ ಬನಾರಸ್ ಸೀರೆಗೆ ಅದೇ ಬಣ್ಣದ ಮೊಣಕೈ ಉದ್ದದ ತೋಳಿನ ಕುಪ್ಪಸವನ್ನು ಮ್ಯಾಚ್ ಮಾಡಿಕೊಂಡ ಪೂಜಾ ಸಾಂಪ್ರದಾಯಿಕ ರೀತಿಯಲ್ಲಿ ಸೀರೆಯನ್ನು ಉಟ್ಟಿದ್ದಾರೆ. ಬ್ಲೌಸ್‌ನ ನೆಕ್ ಮತ್ತು ತೋಳುಗಳು ಸಂಕೀರ್ಣವಾದ ಚಿನ್ನದ ಎಂಬ್ರಾಯಿಡರಿ ಹೊಂದಿದ್ದು, ಶ್ರೀಮಂತ ಲುಕ್ ನೀಡಿದೆ.
ಸೀರೆ ನೋಟಕ್ಕೆ ಪೂರಕವಾಗಿ ಪೂಜಾ ಅವರು ಹಸಿರು ಪಚ್ಚೆ ಹೊದಿಸಿದ ಡೈಮಂಡ್ ಚೋಕರ್ ನೆಕ್ಲೇಸ್, ಚೈನ್ ನೆಕ್ಲೇಸ್, ಮ್ಯಾಚಿಂಗ್ ಸ್ಟೇಟ್‌ಮೆಂಟ್ ಕಿವಿಯೋಲೆಗಳು, ಬೆಳ್ಳಿಯ ಮಾಂಗ್ ಟಿಕ್ಕಾ, ಬಳೆಗಳು ಮತ್ತು ಸೊಂಟದ ಪಟ್ಟಿ ಸೇರಿದಂತೆ ಸಾಂಪ್ರದಾಯಿಕ ಆಭರಣಗಳೊಂದಿಗೆ ಆಲಂಕರಿಸಿಕೊಂಡಿದ್ದಾರೆ
Pooja hegde
ಪೂಜಾರ ಗ್ಲಾಮ್ ಮೇಕಪ್ ನೋಟವು ನ್ಯೂಡ್ ಐಶ್ಯಾಡೋ, ಐಲೈನರ್ (Eye LIner), ಮಸ್ಕರಾ-ಕವರ್ಡ್ ಈ ಲ್ಯಾಶ್, ಕಾಜಲ್ ಹಚ್ಚಿದ ಕಣ್ಣುಗಳು, ಗುಲಾಬಿ ಕೆನ್ನೆಗಳು, ಲುಮಿನಸ್ ಹೈಲೈಟರ್ ಮತ್ತು ನಯೂಡ್ ಲಿಪ್‌ಸ್ಟಿಕ್ ಶೇಡ್‌ಗಳನ್ನು ಒಳಗೊಂಡಿದೆ.
ತನ್ನ ಉದ್ದ ಕೂದಲು ನಟಿ ಮಧ್ಯ ಬೈತಲೆ ಒಳಗೊಂಡ ಲೋ ಪೋನಿಟೇಲ್‌ನಲ್ಲಿ ವಿನ್ಯಾಸಗೊಳಿಸಿದ್ದಾರೆ ಮತ್ತು ಅದನ್ನು ಬಿಳಿ ಹೂವುಗಳಿಂದ ಅಲಂಕರಿಸಿದ್ದಾರೆ.
ಪೂಜಾ ಅವರ ಈ ಸುಂದರ ಸೀರೆಯು ಬಟ್ಟೆ ಬ್ರಾಂಡ್ ರಾಜ್ಯಲಕ್ಷ್ಮಿ ಹೆರಿಟೇಜ್ ಬನಾರಸ್ ಸೀರೆಗಳ ಕಲೆಕ್ಷನ್‌ನಿಂದ ಆಯ್ಕೆ ಮಾಡಿಕೊಳ್ಳಲಾಗಿದೆ ಮತ್ತು ಅವರ ಸ್ಟೈಲಿಂಗ್ ಅನ್ನು ಪ್ರಸಿದ್ಧ ಫ್ಯಾಷನ್ ಸ್ಟೈಲಿಸ್ಟ್ ಅಶ್ವಿನ್ ಮಾವ್ಲೆ ಅವರು ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.