ಪವನ್ ಕಲ್ಯಾಣ್ ಉತ್ತರಾಧಿಕಾರಿಯಾಗಿ ಪುತ್ರ ಅಕೀರಾ ನಂದನ್ ಟಾಲಿವುಡ್‌ಗೆ ಪ್ರವೇಶ: ಇಲ್ಲಿದೆ ಅಪ್ಪನ ಬಿಗ್ ಪ್ಲ್ಯಾನ್?
ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ತಮ್ಮ ಉತ್ತರಾಧಿಕಾರಿಯನ್ನಾಗಿ ಪುತ್ರ ಅಕೀರಾ ನಂದನ್ ಅವರನ್ನು ಚಿತ್ರರಂಗಕ್ಕೆ ಪ್ರವೇಶ ಮಾಡಿಸಿಲು ಸಜ್ಜಾಗಿದ್ದಾರೆ. ಆರಂಭದಲ್ಲಿಯೇ ಒಂದು ಸಿನಿಮಾದ ಹೀರೋ ಆಗಿ ಮಗನನ್ನ ಪರಿಚಯಿಸಲು ಪವರ್ ಸ್ಟಾರ್ ಏನು ಪ್ಲ್ಯಾನ್ ಮಾಡುತ್ತಿದ್ದಾರೆ. ಇಲ್ಲಿದೆ ನೋಡಿ ಅವರ ಪ್ಲ್ಯಾನ್..
ಪವರ್ ಸ್ಟಾರ್ ಪವನ್ ಕಲ್ಯಾಣ್ ಮಗ ಅಕೀರಾ ನಂದನ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಪವನ್ ಕಲ್ಯಾಣ್ ಈ ವಿಷಯದಲ್ಲಿ ಪಕ್ಕಾ ಪ್ಲ್ಯಾನ್ ಪ್ರಕಾರ ಹೋಗ್ತಿದ್ದಾರಂತೆ. ಅದಕ್ಕಾಗಿ ಪವನ್ ಹಂತ ಹಂತವಾಗಿ ಮುಂದುವರಿಯುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ತಕ್ಷಣ ಡೆಪ್ಯುಟಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಪಕ್ಷ, ಸರ್ಕಾರದ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಸಿನಿಮಾ ಮಾಡಲು ಸಮಯ ಸಿಗುತ್ತಿಲ್ಲ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಬಾಕಿ ಇರುವ ಮೂರು ಸಿನಿಮಾಗಳಿಗೆ ಡೇಟ್ಸ್ ಕೊಡಲು ತುಂಬಾ ಕಷ್ಟಪಡ್ತಿದ್ದಾರೆ. ಆದರೂ ಈ ಸಿನಿಮಾಗಳನ್ನು ಪೂರ್ಣಗೊಳಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. ಈ ಮೂರು ಸಿನಿಮಾ ಮುಗಿದ ನಂತರ ಸಿನಿಮಾಗಳಿಂದ ದೂರ ಉಳಿದು ರಾಜಕೀಯದತ್ತ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಅಭಿಮಾನಿಗಳನ್ನು ಮಿಸ್ ಮಾಡಿಕೊಳ್ಳದಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಹೀಗಾಗಿಯೇ ನಟ ಪವನ್ ಕಲ್ಯಾಣ್ ತಮ್ಮ ಸ್ಥಾನವನ್ನು ಮಗನಿಗೆ ಬಿಟ್ಟುಕೊಡಲು ಚಿಂತಿಸುತ್ತಿದ್ದಾರಂತೆ. ಅದಕ್ಕಾಗಿಯೇ ಅಕೀರಾ ನಂದನ್ ಚಿತ್ರರಂಗ ಪ್ರವೇಶದ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯದಲ್ಲಿ ಗೆಲುವು ಸಾಧಿಸಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಎಲ್ಲಿಗೆ ಹೋದರೂ ಮಗ ಅಕೀರಾ ನಂದನ್‌ರನ್ನು ಕರೆದುಕೊಂಡು ಹೋಗುತ್ತಿದ್ದರು. ಇದು ಆಗ ಸುದ್ದಿಯಾಗಿತ್ತು.
ಪವನ್ ಕಲ್ಯಾಣ್ ಗೆದ್ದ ನಂತರ ಪ್ರಧಾನಿ ಮೋದಿ, ಸಿಎಂ ಚಂದ್ರಬಾಬು ಅವರನ್ನು ಭೇಟಿ ಮಾಡಲು ಹೋದಾಗಲೂ ಮಗನನ್ನು ಕರೆದುಕೊಂಡು ಹೋಗಿದ್ದರು. ಈ ರೀತಿ ಅಕೀರಾಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕ್ರೇಜ್ ಬರುವಂತೆ ಪ್ಲ್ಯಾನ್ ಮಾಡಿದ್ದಾರಂತೆ. ಅಕೀರಾ ಮಾರ್ಷಲ್ ಆರ್ಟ್ಸ್ ಜೊತೆಗೆ ಡ್ಯಾನ್ಸ್‌ನಲ್ಲೂ ತರಬೇತಿ ಪಡೆದಿದ್ದಾರೆ. ನಟನಾ ತರಬೇತಿಯನ್ನೂ ಪೂರ್ಣಗೊಳಿಸಿದ್ದಾರೆ. ಆದರೆ, ಸಿನಿಮಾ ಎಂಟ್ರಿ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.
ಅಕೀರಾರನ್ನು ಹೀರೋ ಆಗಿ ಪರಿಚಯಿಸಿ, ತಾನು ರಾಜಕೀಯಕ್ಕೆ ಸೀಮಿತವಾಗಲು ಪವನ್ ಪ್ಲ್ಯಾನ್ ಮಾಡಿದ್ದಾರಂತೆ. ಮಗನನ್ನು ಯಾವಾಗ ಪರಿಚಯಿಸುತ್ತಾರೆ, ನಿರ್ದೇಶಕರು ಯಾರು ಎಂಬುದನ್ನು ಕಾದು ನೋಡಬೇಕು. ಅಕೀರಾ ಎಂಟ್ರಿ ಬಗ್ಗೆ ಅಧಿಕೃತ ಘೋಷಣೆ ಬಂದಿಲ್ಲ.