70 ರ ದಶಕದ ಈ ಬೋಲ್ಡ್‌ ನಟಿ ಪರ್ವೀನ್ ಜೀವನ ಭಯದಿಂದಲೇ ಹಾಳಾಯಿತು!

First Published Apr 5, 2021, 5:37 PM IST

ಬಾಲಿವುಡ್‌ನ ಫೇಮಸ್‌ ನಟಿಯಾಗಿದ್ದ ಪರ್ವೀನ್ ಬಾಬಿಗೆ ಏಪ್ರಿಲ್ 4 ಕ್ಕೆ ಇದ್ದಿದ್ದರೆ 72ರ ವರ್ಷ ತುಂಬುತ್ತಿತ್ತು. 1949ರಲ್ಲಿ ಗುಜರಾತ್‌ನ ಜುನಾಗಡ್‌‌ನಲ್ಲಿ ಜನಿಸಿದ ಪರ್ವೀನ್ 2005ರಲ್ಲಿ ನಿಧನರಾದರು. ಅವರ ಜೀವನಕ್ಕೆ ಸಂಬಂಧಿಸಿ ಅನೇಕ ಕಥೆಗಳಿವೆ. ಪರ್ವೀನ್ ಅವರೊಂದಿಗೆ ಅನೇಕ ಸೂಪರ್‌ಹಿಟ್ ಸಿನಿಮಾಗಳನ್ನು ಮಾಡಿದ ಅಮಿತಾಬ್ ಬಚ್ಚನ್, ಈ ನಟಿ ತನ್ನ ಶತ್ರು ಎಂದು ಯೋಚಿಸುತ್ತಿದ್ದರು. ಈ ವಿಷಯವನ್ನು ಪರ್ವೀನ್ ಜೊತೆ ಲೀವ್‌ ಇನ್‌ ರಿಲೆಷನ್‌ಶಿಪ್‌ನಲ್ಲಿದ್ದ ನಿರ್ದೇಶಕ ಮಹೇಶ್ ಭಟ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.