ಒಂದು ಕಾಲದ ಆಗರ್ಭ ಶ್ರೀಮಂತ ನಟಿ, ಉದ್ಯಮಿಯನ್ನು ಮದುವೆಯಾಗಲು ಚಿತ್ರರಂಗ ತೊರೆದರು!
ಭಾರತೀಯ ಚಿತ್ರರಂಗದ ಅಗ್ರಮಾನ್ಯ ನಟಿಯರು ಪ್ರತಿ ಚಿತ್ರಕ್ಕೆ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಾರೆ. ಈಗಿನ ಕಾಲದಲ್ಲಿ ನೃತ್ಯ ಮತ್ತು ಅತಿಥಿ ಪಾತ್ರಗಳಿಗೆ ಕೂಡ ಸಹ ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. 80ರ ದಶಕದಲ್ಲಿ ಅಂತಹ ಒಬ್ಬರು ನಟಿ ಇದ್ದರು. ಚಿತ್ರರಂಗ ತೊರೆದು ಅವರು 30 ವರ್ಷ. ಆದ್ರೆ ದೇಶದ ಶ್ರೀಮಂತ ಉದ್ಯಮಿ ಪತ್ನಿ.
ಒಂದು ಕಾಲದಲ್ಲಿ ದೇಶದ ಶ್ರೀಮಂತ ನಟಿ ಎನಿಸಿಕೊಂಡಿದ್ದ ಇವರು 30 ವರ್ಷಗಳ ಹಿಂದೆ ಬಾಲಿವುಡ್ ತೊರೆದರು. ನಂತರ ಅವರು ನಟಿಸಲೇ ಇಲ್ಲ. ಕಾರಣ ಆಕೆಗೆ ಇರುವ ಸಂಪತ್ತು, ಏಕೆಂದರೆ ಆ ನಟಿ ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರನ್ನು ಮದುವೆಯಾಗಿದ್ದಾರೆ.
ಇವರೇ ಭಾರತದ ಶ್ರೀಮಂತ ನಟಿ ಟೀನಾ ಅಂಬಾನಿ. ಮದುವೆಗೂ ಮುನ್ನ ಟೀನಾ ಮುನಿಮ್ ಎಂಬುದು ಅವರ ಹೆಸರಾಗಿತ್ತು. ರಿಲಯನ್ಸ್‌ನ ಮುಖ್ಯಸ್ಥ ಅನಿಲ್ ಅಂಬಾನಿ ಅವರ ಪತ್ನಿಯಾಗಿರುವ ಟೀನಾ, ರಿಲಯನ್ಸ್ ಸಾಮ್ರಾಜ್ಯದ ಭಾಗವಾಗಿರುವ ಖಾತೆಯಲ್ಲಿ ಸುಮಾರು 2331 ಕೋಟಿ ರೂ. ಪಾಲುದಾರಿಕೆ ಹೊಂದಿದ್ದಾರೆ.
ವರದಿಗಳ ಪ್ರಕಾರ ಟೀನಾ ಅವರ ನಿವ್ವಳ ಮೌಲ್ಯವು ಒಂದು ಕಾಲದಲ್ಲಿ ಹೆಚ್ಚಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಪತಿ ಅನಿಲ್ ಅನುಭವಿಸಿದ ನಷ್ಟದಿಂದ ಈಗ ಕಡಿಮೆಯಾಗಿದೆ.
ಕಂಪೆನಿಯ ಉತ್ತುಂಗದ ಸಮಯದಲ್ಲಿ ಟೀನಾ ಅವರ ನಿವ್ವಳ ಮೌಲ್ಯವು ಸುಮಾರು 10,000 ಕೋಟಿ ರೂ. ಭಾರತದ ಟಾಪ್ ನಟಿಯರಿಗಿಂತಲೂ ಅವರ ಆದಾಯ ಹೆಚ್ಚಾಗಿತ್ತು.
ಆಗ ಟೀನಾ ಮುನಿಮ್ ಎಂದು ಕರೆಯಲ್ಪಡುತ್ತಿದ್ದ ಟೀನಾ ಅಂಬಾನಿ, 20 ನೇ ವಯಸ್ಸಿನಲ್ಲಿ ದೇವ್ ಆನಂದ್ ಅವರ ದೇಸ್ ಪರ್ದೇಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು ಆ ಕಾಲದ ಅಗ್ರ ನಟರ ಜೊತೆ ನಟಿಸಿದರು.
ಬ್ಯಾಟನ್ ಬಾಟನ್ ಮೇನಲ್ಲಿ ಅಮೋಲ್ ಪಾಲೇಕರ್, ಕರ್ಜ್‌ನಲ್ಲಿ ರಿಷಿ ಕಪೂರ್ ಮತ್ತು ಸೌತೆನ್‌ನಲ್ಲಿ ರಾಜೇಶ್ ಖನ್ನಾ. 80 ರ ದಶಕದ ಆರಂಭದಲ್ಲಿ ಅವರ ಚಿತ್ರಗಳು ಯಶಸ್ಸಿನ ಮೆಟ್ಟಿಲೇರಿತ್ತು.
80 ರ ದಶಕದ ಮಧ್ಯಭಾಗ ನಂತರ ಚಿತ್ರಗಳು ಅಷ್ಟೊಂದು ಹಿಟ್ ಕಾಣಲಿಲ್ಲ . ಹೀಗಾಗಿ 1987 ರ ನಂತರ ಆಫರ್‌ಗಳು ಕಡಿಮೆ ಆದವು. 1991 ರಲ್ಲಿ ಕೇವಲ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡರು. ಅನಿಲ್ ಕಪೂರ್ ಅವರ ಜೊತೆಗೆ ಜಿಗರ್ವಾಲಾದಲ್ಲಿ ನಟಿಸಿದ್ದು ಕೊನೆ ಚಿತ್ರ.
1991 ರಲ್ಲಿ ಅದೇ ವರ್ಷ ಉದ್ಯಮಿ ಅನಿಲ್ ಅಂಬಾನಿಯನ್ನು ಮದುವೆಯಾದ ನಂತರ ಅವರು ಬಾಲಿವುಡ್ ತೊರೆದರು. ಬಾಲಿವುಡ್ ತೊರೆದ ಬಗ್ಗೆ ನನಗೆ ಬೇಸರವಿಲ್ಲ. ಹೊಸ ಜೀವನದ ಬಗ್ಗೆ ಖುಷಿ ಇದೆ ಎಂದು ಈ ಹಿಂದೆ ಅವರು ಹೇಳಿಕೊಂಡಿದ್ದಾರೆ.
ಐಶ್ವರ್ಯಾ ರೈ ಬಚ್ಚನ್ ಪ್ರಸ್ತುತ ಭಾರತದ ಅತ್ಯಂತ ಶ್ರೀಮಂತ ಸಕ್ರಿಯ ನಟಿಯಾಗಿದ್ದು, ಸುಮಾರು 850 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ, ನಂತರ ಪ್ರಿಯಾಂಕಾ ಚೋಪ್ರಾ (ರೂ. 600 ಕೋಟಿ), ಮತ್ತು ಕರೀನಾ ಕಪೂರ್ (ರೂ. 500 ಕೋಟಿ).
ನಂತರದ ಸ್ಥಾನದಲ್ಲಿ ದೀಪಿಕಾ ಪಡುಕೋಣೆ (330 ಕೋಟಿ ರೂ.), ಅನುಷ್ಕಾ ಶರ್ಮಾ (ರೂ. 300 ಕೋಟಿ), ಮಾಧುರಿ ದೀಕ್ಷಿತ್ (ರೂ. 290 ಕೋಟಿ), ನಯನತಾರಾ (ರೂ. 210 ಕೋಟಿ), ಮತ್ತು ರಾಣಿ ಮುಖರ್ಜಿ ಮತ್ತು ಕಾಜೋಲ್ (ಇಬ್ಬರೂ ರೂ. 200 ಕೋಟಿ) ಇದ್ದಾರೆ.