ಸಲ್ಮಾನ್‌ ಖಾನ್‌ ಸಹೋದರಿ ಮದುವೆ ಮುರಿದಿದ್ದರಾ ನಟಿ ಯಾಮಿ ಗೌತಮ್‌?

First Published Jun 5, 2021, 7:28 PM IST

ಬಾಲಿವುಡ್‌ ನಟಿ ಯಾಮಿ ಗೌತಮ್, ನಿರ್ದೇಶಕ ಆದಿತ್ಯ ಧಾರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಯಾಮಿ ತಮ್ಮ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಗೋಹರ್‌ನಲ್ಲಿ ಯಾಮಿಯ ವಿವಾಹ ಬಹಳ ಸರಳವಾಗಿ ನಡೆದಿದೆ. ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ ಕೇವಲ 18 ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು, ಅದರಲ್ಲಿ ಕೇವಲ 5 ಜನರು ಹುಡುಗನ ಕಡೆಯವರು. ಅಂದಹಾಗೆ, ಒಂದು ಕಾಲದಲ್ಲಿ ಯಾಮಿ ಹೆಸರು ನಟ ಪಾಲ್ಕಿತ್ ಸಾಮ್ರಾಟ್ ಅವರೊಂದಿಗೂ ಕೇಳಿ ಬಂದಿತ್ತು  ಇದು ಪುಲ್ಕಿತ್ ಮತ್ತು ಅವರ ಪತ್ನಿ ಶ್ವೇತಾ ರೋಹಿರಾ ನಡುವೆ ವಿಚ್ಛೇದನಕ್ಕೆ ಕಾರಣವಾಯಿತು ಎಂಬ ಆರೋಪಗಳಿವೆ. ಸಂಬಂಧದಲ್ಲಿ ಶ್ವೇತಾ ಸಲ್ಮಾನ್ ಖಾನ್ ಅವರ ರಾಖಿ ಸಹೋದರಿ.