ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ಗೆ ಫ್ಲಾಟ್ ಚಪ್ಪಲಿ ಧರಿಸಿ ಗೇಲಿಗೆ ಗುರಿಯಾಗಿದ್ರು ಐಶ್ವರ್ಯಾ
ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಪ್ರತಿವರ್ಷವೂ ನೆಡೆಯುತ್ತದೆ. ಇದರಲ್ಲಿ ಭಾಗವಹಿಸುವುದು ಪ್ರತಿಷ್ಠೆಯ ಸಂಕೇತ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಾರೆ ನಟಿಯರು. ವಿಶೇಷವಾಗಿ ನಟಿಯರು ಧರಿಸಿಸುವ ಡಿಸೈನರ್ ಡ್ರೆಸ್‌ಗಳು ಇಲ್ಲಿಯ ಮುಖ್ಯ ಆಕರ್ಷಣೆ. ಭಾರತದ ಹಲವು ನಟಿಯರು ಇದರಲ್ಲಿ ಭಾಗವಹಿಸುತ್ತಾರೆ ಬಾಲಿವುಡ್ ನಟಿ ಕಮ್ ಮಾಜಿ ಭುವನ ಸುಂದರಿ ಐಶ್ವರ್ಯಾ ರೈ ಕಳೆದ 18 ವರ್ಷಗಳಿಂದಲೂ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸುತ್ತಿದ್ದಾರೆ. ಒಮ್ಮೆ, ಬಚ್ಚನ್ ಫ್ಯಾಮಿಲಿಯ ಸೊಸೆ ಫ್ಲಾಟ್ ಚಪ್ಪಲಿಗಳನ್ನು ಧರಿಸಿ ಕೇನ್ಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನೆಡೆಯಬೇಕಾಯಿತು. ಅದಕ್ಕೆ ಸಿಕ್ಕಾಪಟ್ಟೆ ಟೀಕೆಗಳೂ ಕೇಳಿ ಬಂದಿದ್ದವು.
ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ನೆಡೆಯುವ ಇಂಟರ್‌ನ್ಯಾಷನಲ್ ಫಿಲ್ಮಂ ಫೆಸ್ಟಿವಲ್‌ನಲ್ಲಿ ಬಾಲಿವುಡ್ ದಿವಾ ಐಶ್ವರ್ಯಾ ರೈ ಸದಾ ಸೆಂಟರ್ ಅಫ್ ಅಟ್ರಾಕ್ಷನ್.
ಕಳೆದ 18 ವರ್ಷಗಳಿಂದ ಈ ಚಲನಚಿತ್ರೋತ್ಸವದಲ್ಲಿ ತಪ್ಪದೆ ಭಾಗವಹಿಸುತ್ತಿರುವ ಐಶ್. ಕೊರೋನಾದ ಕಾರಣ, ಈ ವರ್ಷ ಈ ಕಾರ್ಯಕ್ರಮ ಆಯೋಜನೆಗೊಂಡಿಲ್ಲ.
ಈ ಇವೆಂಟ್‌ಗೆ ಮಗಳು ಆರಾಧ್ಯಳನ್ನೂ ಕರೆದುಕೊಂಡು ಹೋಗಿದ್ದಾರೆ ಜೋಶ್ ನಟಿ.
ಕರಾವಳಿ ಸುಂದರಿ ರೆಡ್ ಕಾರ್ಪೆಟ್‌ಗಾಗಿ ಧರಿಸುವ ಡ್ರೆಸ್ ಮೇಲೆ ಎಲ್ಲರ ಕಣ್ಣಿರುತ್ತದೆ.
ಕಳೆದ ಹದಿನೆಂಟು ವರ್ಷಗಳಲ್ಲಿ ಕ್ಯಾನ್ಸ್ ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾರಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಈ ಸಮಯದಲ್ಲಿ ಐಶ್ವರ್ಯಾಗೆ ಒಂದಕ್ಕಿಂತ ಒಂದು ಚೆಂದದ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಆದರೆ ಎಂದಿಗೂ ಬದಲಾಗದ ಒಂದು ವಿಷಯವೆಂದರೆ ಭಾರತೀಯ ಉಡುಗೆಗೆ ಅವರ ಪ್ರೀತಿ .
ಫ್ಲಾಟ್ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ತಲುಪಿದರು ಫ್ರೆಂಚ್ ರಿವೇರಿಯಾದಲ್ಲಿ ನಡೆದ ಫಿಲ್ಮಂ ಫೆಸಿಟಿವಲ್‌ನ ಆಕರ್ಷಣ ಬಿಂದು ಐಶ್ವರ್ಯಾ.
2003 ರಲ್ಲಿ, ಐಶ್ವರ್ಯಾ ನೀತಾ ಲುಲ್ಲಾ ವಿನ್ಯಾಸದ ನಿಯಾನ್ ಗ್ರೀನ್ ಗೋಲ್ಡನ್ ಬಾರ್ಡರ್ ಸೀರೆ ಧರಿಸಿದ್ದರು. ಆದರೆ ಐಶ್ವರ್ಯಾ ತನ್ನ ನೋಟದಿಂದ ಎಲ್ಲರನ್ನೂ ಮೆಚ್ಚಿಸುವ ಮೊದಲೇ, ಅವಳ ಫ್ಲಾಟ್ ಚಪ್ಪಲಿಗಳು ಗೇಲಿಗೆ ಗುರಿಯಾದವು. ರೆಡ್ ಕಾರ್ಪೆಟ್ ಚಪ್ಪಲಿ ಧರಿಸಿದ ಐಶ್, ಅಂಡರ್-ಡ್ರೆಸ್ಡ್ ಟ್ಯಾಗ್ ಎದುರಿಸಬೇಕಾಯಿತು.
ತನ್ನ ಓವರ್‌ಅಲ್ ಲುಕ್ ಕುರಿತು ಮಾತನಾಡುತ್ತಾ, ಆಕೆ ಧರಿಸಿದ್ದ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಹಸಿರು ಸೀರೆ ಜೊತೆ ಟ್ಯೂಬ್ ಕಟ್ ಬ್ಲೌಸ್ ಮತ್ತು ಫ್ಲಾಟ್ ಸ್ಲಿಪರ್ಸ್ ಸೇರಿವೆ ಎಂದಿದ್ದರು. ಈ ಉಡುಪಿನೊಂದಿಗೆ, ಅವರ ಚಪ್ಪಲಿಗಳು ಮ್ಯಾಚ್ ಆಗದೆ ತುಂಬಾ ಕೆಟ್ಟದಾಗಿ ಕಾಣುತ್ತಿದ್ದವು,
ಐಶ್ ರೆಡ್ ಕಾರ್ಪೆಟ್ ಮೇಲೆ ಚಪ್ಪಲಿಗಳನ್ನು ಏಕೆ ಧರಿಸಿದ್ದರು? ವಾಸ್ತವವಾಗಿ ಅವರು ಖಾಕಿ ಚಿತ್ರದ ಶೂಟಿಂಗ್ ಸಮಯದಲ್ಲಿ ಅವರಿಗೆ ಅಪಘಾತವಾಗಿ, ಕಾಲು ಫ್ರಾಕ್ಚರ್ ಆಗಿತ್ತು. ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು. ಐಶ್ವರ್ಯಾಗೆ ಕನಿಷ್ಠ ಒಂದು ತಿಂಗಳಾದರೂ ವಿಶ್ರಾಂತಿಗೆ ಸೂಚಿಸಿದ್ದರು ವೈದ್ಯರು. ಆದರೆ, ಈ ಸಿನಿಮೋತ್ಸವವನ್ನು ಮಿಸ್ ಮಾಡಲು ಇಚ್ಛಿಸದ ಐಶ್ವರ್ಯಾ ಚಪ್ಪಲಿ ಧರಿಸಿ ರೆಡ್ ಕಾರ್ಪೆಟ್ ಮೇಲೆ ನಡೆಯಬೇಕಾಯಿತು.
ಭಾರತದಿಂದ ಸೋನಮ್ ಕಪೂರ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಸಹ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಆರಾಧ್ಯ ಹುಟ್ಟಿದ ಮೇಲೆ ಒಮ್ಮೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಐಶ್ವರ್ಯಾ ತೂಕ ಹೆಚ್ಚಿತ್ತು. ಅದಕ್ಕೂ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿದ್ದವು.