#WeddingAnniversary ಪತ್ನಿಗೆ ಬಿಗ್ ಬಿ ವಿಶ್ ಮಾಡಿದ್ದು ಹೀಗೆ!
ಬಾಲಿವುಡ್‌ನ ಲೆಜೆಂಡ್ ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ದಾಂಪತ್ಯ ಜೀವನದ 48 ವರ್ಷಗಳನ್ನು ಪೂರೈಸಿದ್ದಾರೆ. ಅಮಿತಾಬ್ ಮತ್ತು ಜಯಾ 1973ರ ಜೂನ್ 3 ರಂದು ವಿವಾಹವಾದರು. ತಮ್ಮ ವಿವಾಹ ವಾರ್ಷಿಕೋತ್ಸವದಂದು ಅಮಿತಾಬ್ ಎರಡು ಫೋಟೋಗಳ ಕೊಲಾಜ್ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ತಮ್ಮ ಮದುವೆಯ 2 ಪೋಟೋಗಳ ಕೋಲಾಜ್ ಅನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

'ಜೂನ್ 3 1973, ನಮ್ಮ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಅಮಿತಾಬ್ ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ.

ಜಯಬಾಧುರಿ ಪುಣೆಯ FTIIನಲ್ಲಿ ಓದುತ್ತಿದ್ದಾಗ ಅಮಿತಾಬ್ ತಮ್ಮ ಮೊದಲ ಚಿತ್ರ 'ಸಾತ್ ಹಿಂದೂಸ್ತಾನಿ' (1969) ಕ್ಕಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದರು.

ಆದರೆ ಹೃಷಿಕೇಶ್ ಮುಖರ್ಜಿ ಅವರ 'ಗುಡ್ಡಿ' ಸಿನಿಮಾದ ಸೆಟ್‌ಗಳಲ್ಲಿ ಜಯ ಮತ್ತು ಅಮಿತಾಬ್‌ರ ಪರಿಚಯವಾಯಿತು.

ಇದರ ನಂತರ 1973ರಲ್ಲಿ 'ಜಂಜೀರ್' ಸಿನಿಮಾ ಸಮಯದಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು.

ಇವರು ಜಂಜೀರ್, ಶೋಲೆ, ಅಭಿಮಾನ್, ಮಿಲಿ, ಚುಪ್ಕೆ ಚುಕ್ಪೆ ಮತ್ತು ಸಿಲ್ಸಿಲಾ ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಶ್ವೇತಾ ಬಚ್ಚನ್ ನಂದಾ ಮತ್ತು ಅಭಿಷೇಕ್ ಬಚ್ಚನ್ ಅವರ ಜನನದ ನಂತರ ಸಿನಿಮಾದಲ್ಲಿ ನಟಿಸುವುದು ಕಡಿಮೆ ಮಾಡಿದ್ದರು ಜಯಾ.

ಇತ್ತೀಚಿನ ವರ್ಷಗಳಲ್ಲಿ, ಕಬಿ ಖುಷಿ ಕಭಿ ಘಾಮ್ ಮತ್ತು ಕಿ ಆ್ಯಂಡ್ ಕಾ ಸಿನಿಮಾಗಳಲ್ಲಿ ಬಿಗ್ ಬಿ ಮತ್ತು ಜಯಾ ಒಟ್ಟಿಗೆ ಕಾಣಿಸಿಕೊಂಡರು.

ಈ ವರ್ಷ ಅಮಿತಾಬ್‌ರ ಅನೇಕ ಚಲನಚಿತ್ರಗಳು ಬಿಡುಗಡೆಯಾಗಲಿವೆ ಹಾಗೂ ಇನ್ನೂ ಕೆಲವು ಶೂಟಿಂಗ್ ಬಾಕಿ ಇದೆ.

ಶೀಘ್ರದಲ್ಲೇ ಮೀಡೆ, ಚೆಹ್ರೆ, ಬ್ರಹ್ಮಾಸ್ತ್ರ, ಝುಂಡ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಅವರು ಕೌನ್ ಬನೇಗಾ ಕರೋಡ್‌ಪತಿ 13ರ ಶೂಟಿಂಗ್‌ನ ಲ್ಲೂ ಬ್ಯುಸಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.