ಕರೀನಾ, ಸಾರಾ ಸ್ಲಿಮ್ ಹಾಗೂ ಫಿಟ್ ಆಗಿರಲು ಇವರೇ ಕಾರಣ!
ಗರ್ಭಿಣಿಯಾಗಿದ್ದಾಗ ಕರೀನಾ ಕಪೂರ್ ಬರೋಬ್ಬರಿ 16 ಕೆಜಿ ತೂಕ ಹೆಚ್ಚಾಗಿದ್ದರು, ಡಿಪ್ರೆಶನ್‌ನಲ್ಲಿದ್ದಾಗ ದೀಪಿಕಾ ಪಡುಕೋಣೆಗೆ ಅನಾರೋಗ್ಯ ಕಾಡಿತ್ತು. ಹೀಗೆ ಅನೇಕ ಸೆಲೆಬ್ರಿಟಿಗಳ ಆರೋಗ್ಯ ಟ್ರ್ಯಾಕ್ ಮಾಡುತ್ತಾ, ಅವರನ್ನು ಫಿಟ್ ಆ್ಯಂಡ್ ಫೈನ್ ಆಗಿರುವಂತೆ ಮಾಡುವುದು ಯಾರು ಗೊತ್ತಾ?
ಪೋಷಣೆ ಮತ್ತು ವ್ಯಾಯಾಮ ಸೈನ್ಸ್ ತಜ್ಞೆ ರುಜುತಾ ದಿವೇಕರ್.
ಕರೀನಾ ಕಪೂರ್, ಅಲಿಯಾ ಭಟ್, ಕರೀಷ್ಮಾ ಕಪೂರ್, ಸೈಫ್ ಅಲಿ ಖಾನ್ ಹಾಗೂ ದೀಪಿಕಾ ಪಡುಕೋಣೆ ಹಾಗೂ ಅನೇಕ ಸೆಲೆಬ್ರಿಟಿಗಳಿಗೆ ಈ ರುಜುತಾ ಪೌಷ್ಠಿಕ ತಜ್ಞೆ.
ಏಷ್ಯನ್ ಸಂಸ್ಥೆಯಲ್ಲಿ ಗ್ಯಾಸ್ಟ್ರೋ ಎಂಟ್ರೋಲೋಜಿ ವಿಭಾಗದಿಂದ 'Nurtition Award' ಪಡೆದುಕೊಂಡಿದ್ದಾರೆ.
ಸುಮಾರು 15 ವರ್ಷಗಳಿಂದ ನ್ಯೂಟ್ರಿಷಿಯನಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯಾವುದೇ ರೀತಿಯ ಕ್ರ್ಯಾಷ್ ಡಯಟ್ ಮಾಡದೇ ಮನೆಯಲ್ಲಿ ದಿನನಿತ್ಯ ಸೇವಿಸುವ ಆಹಾರಗಳಿಂದಾನೇ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ಹೇಳಿಕೊಡುತ್ತಾರೆ.
ಗರ್ಭಿಣಿಯಾಗಿದ್ದಾಗ 16 ಕೆಜಿ ತೂಕ ಹೆಚ್ಚಾದ ಕರೀನಾ ಕಪೂರ್‌ಗೆ ಪರ್ಸನಲ್ ನ್ಯೂಟ್ರಿಷಿಯನ್ ಟ್ರೈನರ್ ಆಗಿದ್ದರು.
ಲಾಕ್‌ಡೌನ್ ಪ್ರಾರಂಭದಿಂದಲೂ ಮನೆಯಲ್ಲಿ ಮಾಡಬಹುದಾದ ಸುಲಭ ವ್ಯಾಯಾಮಗಳನ್ನು ವಿಡಿಯೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಸಾರಾ ಅಲಿ ಖಾನ್ PCODಯನ್ನು ಸುಲಭವಾಗಿ ಎದುರಿಸಿದ್ದು ರುಜುತಾ ಅವರ ಸಹಾಯದಿಂದ.
ಸಾರಾ ಪಿಲಾಟೇಸ್ ಮಾಡುವುದರ ಜೊತೆ ರುಜುತಾ ಕೊಟ್ಟ ನ್ಯೂಟ್ರಿಷನ್ ಟೈಮ್ ಟೇಬಲ್ ಫಾಲೋ ಮಾಡುತ್ತಾರಂತೆ.
ಕೊರೋನಾವನ್ನು ಸುಲಭವಾಗಿ ಎದುರಿಸಲು ದೇಸಿ ತುಪ್ಪ ಸೇವಿಸಬೇಕು ಎಂದು ರುಜುತಾ ಸಲಹೆ ನೀಡುತ್ತಾರೆ.
ತುಪ್ಪದಲ್ಲಿ ವಿಟಮಿನ್-ಡಿ ಇದ್ದು, ಇಮ್ಯೂನಿಟಿ ಹೆಚ್ಚಿಸುತ್ತದೆ ಹಾಗೂ ವಿಟಮಿಸ್ ಎ ಕಣ್ಣನ್ನು ಆರೋಗ್ಯವಾಗಿಡುತ್ತದೆ.