ಪ್ಯಾನ್ ಇಂಡಿಯಾ ಸಿನಿಮಾಗಳ ಯಶಸ್ಸಿನ ರಹಸ್ಯ ಸೂತ್ರ ಬಿಚ್ಚಿಟ್ಟ ಎನ್‌ಟಿಆರ್!
Devara ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಎನ್‌ಟಿಆರ್ ಆಸಕ್ತಿಕರ ಕಾಮೆಂಟ್ ಮಾಡಿದ್ದಾರೆ. ಈ ಚಿಕ್ಕ ಲಾಜಿಕ್ ಮರೆತು ಅನೇಕ ಮೇಕರ್ಸ್ ನೂರಾರು ಕೋಟಿ ಹಣ ಸುರಿದು ಸೋಲು ಕಾಣ್ತಿದ್ದಾರೆ.
ಎನ್‌ಟಿಆರ್ ಇತ್ತೀಚೆಗೆ `ದೇವರ` ಸಿನಿಮಾದ ಮೂಲಕ ಹಿಟ್ ಕೊಟ್ಟಿದ್ದಾರೆ. ಈ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣ್ತಿದೆ. ಕಳೆದ ತಿಂಗಳು 27 ರಂದು ಬಿಡುಗಡೆಯಾದ ಈ ಚಿತ್ರ ಇನ್ನೂ ಉತ್ತಮ ಕಲೆಕ್ಷನ್ ಮಾಡ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ 400 ಕೋಟಿ ರೂ. ದಾಟಿ 500 ಕೋಟಿ ರೂ. ಕಡೆಗೆ ಮುನ್ನುಗ್ಗುತ್ತಿದೆ. ಸತತ ರಜೆಗಳು ಬಂದ ಹಿನ್ನೆಲೆಯಲ್ಲಿ `ದೇವರ` ಚಿತ್ರ ಗೆದ್ದಿದೆ. ನಿರ್ಮಾಪಕರಿಗೆ, ವಿತರಕರಿಗೆ ಲಾಭ ತಂದುಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ವಿತರಕರನ್ನು ಖುಷಿಪಡಿಸಿದ ದೊಡ್ಡ ಸಿನಿಮಾಗಳಲ್ಲಿ ಇದೂ ಒಂದು ಎಂದು ಹೇಳಬಹುದು. ಮತ್ತೊಂದು ವಾರ ರಜೆ ಇರುವ ಹಿನ್ನೆಲೆಯಲ್ಲಿ ಈ ಸಿನಿಮಾಗೆ ಇನ್ನಷ್ಟು ಲಾಭ ಸಿಗುವ ಸಾಧ್ಯತೆ ಇದೆ.
`ದೇವರ` ಚಿತ್ರ ಚಿತ್ರಮಂದಿರಗಳಲ್ಲಿ ಸದ್ದು ಮಾಡ್ತಿದೆ. ಹೀಗಾಗಿ ನಿರ್ಮಾಪಕರು ಇತ್ತೀಚೆಗೆ ಯಶಸ್ಸಿನ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಎನ್‌ಟಿಆರ್ ಪ್ರಚಾರದ ಸಂದರ್ಶನ ನೀಡ್ತಿದ್ದಾರೆ. ಇದರಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುಮಾ ಸಂದರ್ಶನದಲ್ಲಿ ತಾರಕ್ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಹಾಟ್ ಕಾಮೆಂಟ್ ಮಾಡಿದ್ದಾರೆ. ಅದೇ ಸಮಯದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಯಶಸ್ಸಿನ ಸೂತ್ರವನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾಗಳಲ್ಲಿ ಅದನ್ನು ಸೃಷ್ಟಿಸಲು ಸಾಧ್ಯವಾದರೆ ಸಿನಿಮಾ ಹಿಟ್ ಎಂದು ಸ್ಪಷ್ಟಪಡಿಸಿದ್ದಾರೆ. `ಬಾಹುಬಲಿ`, `ಕೆಜಿಎಫ್`, `ಕಲ್ಕಿ` ಸಿನಿಮಾಗಳ ಯಶಸ್ಸಿಗೆ ಕಾರಣಗಳನ್ನು ತಿಳಿಸಿದ್ದಾರೆ. ಹಾಲಿವುಡ್ ಸಿನಿಮಾಗಳ ಯಶಸ್ಸಿಗೆ ಕಾರಣವೇನು ಎಂದು ಹೇಳಿದ್ದಾರೆ. ನಾವು ಮಾಡುತ್ತಿರುವ ತಪ್ಪೇನು ಎಂದು ಹೇಳದೆ ಹೇಳಿದ್ದಾರೆ ಎನ್‌ಟಿಆರ್.
ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ ಏನೋ ಕಥೆಯೊಂದಿಗೆ ಮಾಡುವುದು ಅಲ್ಲ, ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸುವುದು ಎಂದು ತಿಳಿಸಿದ್ದಾರೆ. ಇದೀಗ ಪ್ರೇಕ್ಷಕರಿಗೆ ಹೊಸ ಪ್ರಪಂಚಗಳು ಬೇಕು, ಒಂದು ಹೊಸ ಪ್ರಪಂಚವನ್ನು ಸೃಷ್ಟಿಸಿದರೆ ಸಿನಿಮಾ ಹಿಟ್ ಎಂದು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಮತ್ತೊಂದು ಪ್ರಪಂಚವನ್ನು ಸೃಷ್ಟಿಸುವುದೇ ಮುಖ್ಯ ಅಂಶ ಎಂದು ಹೇಳಿದ್ದಾರೆ. ಅಂತಹ ಸಿನಿಮಾಗಳೇ ಯಶಸ್ಸು ಗಳಿಸಿವೆ ಎಂದು ತಿಳಿಸಿದ್ದಾರೆ. `ಬಾಹುಬಲಿ` ತೆಗೆದುಕೊಂಡರೆ ನಾವು ಸಿನಿಮಾ ನೋಡುವಾಗ `ಮಹಿಷ್ಮತಿ ಸಾಮ್ರಾಜ್ಯ`ದಲ್ಲಿರುತ್ತೇವೆ. ಅಲ್ಲೇ ಓಡಾಡುತ್ತೇವೆ. ನಮ್ಮ ಸುತ್ತಲೂ ಇದೆಲ್ಲ ನಡೆಯುತ್ತಿದೆಯಾ ಎಂದು ಭಾಸವಾಗುತ್ತದೆ. ಅದಕ್ಕಾಗಿಯೇ ಒಂದು ಅದ್ಭುತವಾದ ಅನುಭವವನ್ನು ಪಡೆಯುತ್ತೇವೆ ಎಂದು ಹೇಳಿದ್ದಾರೆ ಎನ್‌ಟಿಆರ್.
`ಕೆಜಿಎಫ್` ಸಿನಿಮಾ ನೋಡಿದರೆ ಸಿನಿಮಾ ಇಡೀ ಕೋಲಾರ ಗೋಲ್ಡ್ ಫೀಲ್ಡ್‌ನಲ್ಲಿ ನಡೆಯುತ್ತದೆ. ಅದರಲ್ಲಿಯೇ ನಾವೂ ಸಿಲುಕಿಕೊಳ್ಳುತ್ತೇವೆ. ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ನೋಡುವವರೆಗೂ ಅದನ್ನೇ ನೆನಪಿಸಿಕೊಳ್ಳುತ್ತೇವೆ. ಅಷ್ಟೇ ಅಲ್ಲ ಇತ್ತೀಚೆಗೆ ಬಂದ `ಕಲ್ಕಿ 2898 AD` ಕೂಡ ಅಷ್ಟೇ. ಭವಿಷ್ಯಕ್ಕೆ ಹೋಗುತ್ತೇವೆ. ಅದೇ ಲೋಕದಲ್ಲಿ ಇದ್ದು ಸಿನಿಮಾ ನೋಡುವ ಫೀಲಿಂಗ್ ಬರುತ್ತದೆ. ನಮ್ಮ ಸುತ್ತಲೂ ಅವೆಲ್ಲವೂ ನಡೆಯುತ್ತಿವೆ ಎಂದು ಅನಿಸುತ್ತದೆ. ಅದಕ್ಕಾಗಿಯೇ ಅಂತಹ ಹೊಸ ಪ್ರಪಂಚಗಳನ್ನು ಪರಿಚಯಿಸುವ ಸಿನಿಮಾಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಇದೀಗ ಹಾಲಿವುಡ್ ಚಿತ್ರಗಳ ಯಶಸ್ಸಿನ ಗುಟ್ಟೂ ಅದೇ. ಸೂಪರ್ ಹೀರೋ ಸಿನಿಮಾಗಳು ಒಂದು ಹೊಸ ಲೋಕದಲ್ಲಿ ನಡೆಯುತ್ತವೆ. ಅದನ್ನು ನಾವು ಎಂಜಾಯ್ ಮಾಡುತ್ತೇವೆ. ಅದು ನಮಗೆ ತುಂಬಾ ಇಷ್ಟವಾಗುತ್ತದೆ. ಅದಕ್ಕಾಗಿಯೇ ಹಾಲಿವುಡ್ ಸಿನಿಮಾಗಳು ದೊಡ್ಡ ಯಶಸ್ಸು ಗಳಿಸುತ್ತವೆ ಎಂದು ತಿಳಿಸಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ನಿರ್ದೇಶಕರಿಗೂ ಇದೇ ದೊಡ್ಡ ಸವಾಲು. ಹೊಸ ಪ್ರಪಂಚವನ್ನು ಸೃಷ್ಟಿಸುವುದೇ ಇಲ್ಲಿ ನಿಜವಾದ ಕೆಲಸ. ಇದೀಗ ಪ್ರೇಕ್ಷಕರು ಕೂಡ ಅದನ್ನೇ ಬಯಸುತ್ತಿದ್ದಾರೆ. ಅಂತಹ ಕಥೆಗಳನ್ನೇ ಎಂಜಾಯ್ ಮಾಡುತ್ತಿದ್ದಾರೆ. ಆದರಿಸುತ್ತಾ ಬೆನ್ನು ತಟ್ಟುತ್ತಿದ್ದಾರೆ. `ದೇವರ` ಸಿನಿಮಾದಲ್ಲಿ ಆ ಕರಾವಳಿ ಪ್ರದೇಶವನ್ನು ಸೃಷ್ಟಿಸುವುದೇ ದೊಡ್ಡ ಕೆಲಸ, ಕೊರಟಾಲ ತುಂಬಾ ಕಷ್ಟಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
`ದೇವರ` ಯಶಸ್ಸಿಗೂ ಅದೇ ಕಾರಣ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಎನ್‌ಟಿಆರ್ ಒಂದು ದೊಡ್ಡ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಎಂದು ಹೇಳಬಹುದು. ಈ ವಿಷಯ ಮರೆತು ಅನೇಕ ಮೇಕರ್ಸ್ ಪ್ಯಾನ್ ಇಂಡಿಯಾ ಹೆಸರಿನಲ್ಲಿ ಏನೇನೋ ಸಿನಿಮಾ ಮಾಡಿ ಸೋತಿದ್ದಾರೆ. ನೂರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಈ ವಿಷಯದಲ್ಲಿ ತಾರಕ್ ಹೇಳಿದ ಸಲಹೆಗಳನ್ನು ಪಾಲಿಸಿದರೆ ಒಳ್ಳೆಯದಾಗಬಹುದು.
ಆದರೆ ಕಥೆ ಏನೇ ಇರಲಿ, ಸಿನಿಮಾ ಏನೇ ಇರಲಿ ಭಾವನೆಗಳು ಬಹಳ ಮುಖ್ಯ. ಮತ್ತೊಂದು ಲೋಕಕ್ಕೆ ಕರೆದೊಯ್ದರೂ, ಸಿನಿಮಾಗೆ ಒಂದು ಆತ್ಮ ಇರುತ್ತದೆ, ಒಂದು ಭಾವನೆ ಇರುತ್ತದೆ. ಅದಕ್ಕೆ ಪ್ರೇಕ್ಷಕರು ಕನೆಕ್ಟ್ ಆದರೆ ಮಾತ್ರ ಸಿನಿಮಾ ಗೆಲ್ಲುತ್ತದೆ, ಇಲ್ಲದಿದ್ದರೆ ಕೆಟ್ಟ ಫಲಿತಾಂಶ ತಪ್ಪಿದ್ದಲ್ಲ.
ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸಿರುವ `ದೇವರ` ಚಿತ್ರ ಇದೀಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರೆ, ಸೈಫ್ ಅಲಿ ಖಾನ್ ಖಳನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣ್ ರಾಮ್, ಸುಧಾಕರ್ ಮಿಕ್ಕಿಲಿನೇನಿ, ಹರಿಕೃಷ್ಣ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರ 400 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ 184 ಕೋಟಿ ರೂ. ಗಳಿಗೆ ಮಾರಾಟವಾಗಿದೆ. ಡಿಜಿಟಲ್ ಹಕ್ಕುಗಳ ಮೂಲಕ ಮತ್ತೊಂದು 100 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಚಿತ್ರಮಂದಿರಗಳಲ್ಲಿ ಈ ಚಿತ್ರ ಸುರಕ್ಷಿತ ವಲಯಕ್ಕೆ ತಲುಪಿದೆ ಎಂದು ತಿಳಿದುಬಂದಿದೆ.