ರತನ್ ಟಾಟಾ ರೀತಿ ನಾನೂ ಮದ್ವೆ ಆಗಲ್ಲ, ಸಿಂಗಲ್ಲಾಗಿರೋದೇ ಖುಷಿ: ನಿತ್ಯಾ ಮೆನನ್
ನಿತ್ಯಾ ಮೆನನ್ ನಟನೆಯ ‘ತಲೈವ ತಲೈವಿ’ ತಮಿಳು ಸಿನಿಮಾ ಜು.25ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ನಿತ್ಯಾ ಮೆನನ್ ತನ್ನ ವೈಯಕ್ತಿಕ ಬದುಕಿನ ಬಗ್ಗೆ, ಪ್ರೇಮ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.

ಕನ್ನಡದ ಹುಡುಗಿ, ಬಹುಭಾಷಾ ತಾರೆ ನಿತ್ಯಾ ಮೆನನ್ ನಟನೆಯ ‘ತಲೈವ ತಲೈವಿ’ ತಮಿಳು ಸಿನಿಮಾ ಜು.25ರಂದು ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ನಿತ್ಯಾ ಮೆನನ್ ತನ್ನ ವೈಯಕ್ತಿಕ ಬದುಕಿನ ಬಗ್ಗೆ, ಪ್ರೇಮ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.
1. ನಾನು ಮೂರು ತಿಂಗಳ ಮಗುವಾಗಿದ್ದಾಗ ಉದ್ಯೋಗಿಯಾಗಿದ್ದ ನನ್ನ ಅಮ್ಮನ ಮೆಟರ್ನಿಟಿ ರಜೆ ಮುಗಿದಿತ್ತು. ಅಜ್ಜಿಯ ಮಡಿಲಲ್ಲಿ ನನ್ನನ್ನು ಹಾಕಿ ಅಮ್ಮ ಉದ್ಯೋಗಕ್ಕೆ ತೆರಳಿದರು. ಅಜ್ಜಿಯೇ ಅಮ್ಮನ ಸ್ಥಾನ ತುಂಬಿದರು. ಬಾಲ್ಯದಿಂದಲೂ ನಾನು ಒಂಟಿ. ಗುಂಪಿನಲ್ಲಿ ಸೇರಲು ಸಾಧ್ಯವಾಗುತ್ತಿರಲಿಲ್ಲ. ಸ್ನೇಹಿತರಿದ್ದರೂ ಒಬ್ಬಳೇ. ಅಂದಿನಿಂದಲೂ ನಾನು ಉಳಿದವರಿಗಿಂತ ಭಿನ್ನ.
2. ಒಂದು ವಯಸ್ಸಿಗೆ ಬಂದಾಗ ನನಗೂ ಪ್ರೇಮದ ಅನುಭವವಾಯಿತು. ಪ್ರತೀ ಅನುಭವವೂ ನೋವನ್ನೇ ನೀಡಿತು. ಅದೆಷ್ಟು ಸಲ ಪ್ರೀತಿ, ಪ್ರೇಮ ಸಂಬಂಧದಲ್ಲಿ ಬಿದ್ದಿದ್ದೇನೋ ಅಷ್ಟೂ ಸಲ ಹೃದಯ ಒಡೆದುಹೋಗಿದೆ. ಆ ಹೊತ್ತಲ್ಲಿ ನನಗೆ ಆತ್ಮ ಸಂಗಾತಿಯೊಬ್ಬ ಬೇಕು, ಆತನೊಂದಿಗೆ ಚೆಂದದ ಬದುಕು ಸಾಗಿಸಬೇಕು ಎಂಬೆಲ್ಲ ಕನಸುಗಳಿದ್ದವು. ಆದರೆ ಅಂಥಾ ವ್ಯಕ್ತಿ ನನಗೆ ಸಿಗಲೇ ಇಲ್ಲ.
3. ಈಗ ಆ ಎಲ್ಲಾ ಭಾವನೆಗಳಿಂದ ಹೊರಬಂದಿದ್ದೇನೆ. ಒಬ್ಬಳೇ ತಿಂಗಳಾನುಗಟ್ಟಲೆ ಟ್ರಾವೆಲ್ ಮಾಡುತ್ತೇನೆ. ನನ್ನ ಕೆಲಸಗಳನ್ನು ನಾನೇ ಮಾಡುತ್ತೇನೆ. ಕೆಲವೊಮ್ಮೆ ತಿಂಗಳಾನುಗಟ್ಟಲೆ ಏನೂ ಮಾಡದೆ ಇದ್ದು ಬಿಡುತ್ತೇನೆ. ಅದು ನನ್ನನ್ನೇ ನಾನು ಅರಿತುಕೊಳ್ಳುವ ಪ್ರೊಸೆಸ್ ಆಗಿರುತ್ತದೆ. ನನ್ನ ಒಳಗೆ ಅಡಗಿರುವುದೆಲ್ಲ ಆಗ ಹೊರ ಬರುತ್ತದೆ.
4. ನಾನು ಅಧ್ಯಾತ್ಮದ ಹಾದಿಯನ್ನು ಅನುಸರಿಸುತ್ತೇನೆ. ಬದುಕಿನ ಅನೇಕ ಪ್ರಶ್ನೆಗಳಿಗೆ ಈ ಹಾದಿಯಲ್ಲಿ ಉತ್ತರ ಸಿಕ್ಕಿದೆ. ಮೆಟೀರಿಯಲಿಸ್ಟಿಕ್ ಆದ ಯಾವುದರಲ್ಲೂ ನನಗೆ ಆಸಕ್ತಿ ಇಲ್ಲ. ಹಾಗೆಂದು ನಟನೆ ನನ್ನ ವೃತ್ತಿ. ಆ ಕಾರಣಕ್ಕೆ ಇಲ್ಲಿದ್ದೇನೆ. ಆದರೆ ಇದಕ್ಕೇ ಅಂಟಿಕೊಂಡಿಲ್ಲ. ಸಿನಿಮಾ ಬಗ್ಗೆ ವ್ಯಾಮೋಹವೂ ಇಲ್ಲ.
5. ನಾನು ಬದುಕಿಡೀ ಮದುವೆಯೇ ಆಗಲಾರೆ ಅಂತೆಲ್ಲ ಷರತ್ತುಬದ್ಧವಾಗಿ ಜೀವಿಸುತ್ತಿಲ್ಲ. ಆತ್ಮ ಸಂಗಾತಿ ಸಿಕ್ಕರೆ ನಾಳೆಯೇ ಮದುವೆ ಆಗಬಹುದು. ಆದರೆ ನನಗೆ ಈಗಿರುವ ಸಿಂಗಲ್ ಲೈಫ್ ಬಹಳ ಖುಷಿ ನೀಡಿದೆ. ರತನ್ ಟಾಟಾ ಅವ್ರೂ ಮದುವೆ ಆಗಿಲ್ಲ. ಹೀಗೇ ನಾನೂ ಏಕಾಂತವನ್ನು ಬಹಳ ಆನಂದಿಸುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

