ನಿಖಿಲ್-ರೇವತಿ ಮನೆಯಲ್ಲಿ ಗಣೇಶ ಹಬ್ಬ.. ಅಭಿಮಾನಿಗಳಿಂದ ವಿಶೇಷ ಹಾರೈಕೆ!
ಬೆಂಗಳೂರು(ಸೆ. 10) ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಸರಳವಾಗಿ ಆಚರಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನಿಖಿಲ್ ಪೋಟೋ ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿರುವ ನಿಖಿಲ್ ದಂಪತಿ ಸರ್ವರಿಗೂ ಗಣೇಶ ಹಬ್ಬದ ಶುಭಾಶಯ ಕೋರಿದ್ದಾರೆ. ನಿಖಿಲ್ ತಮ್ಮ ರೈಡರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು.
ಅಭಿಮಾನಿಗಳು ಸಹ ದಂಪತಿಗೆ ಶುಭಕೋರಿದ್ದಾರೆ. ವಿಶೇಷವಾಗಿ ರೇವತಿಯವರಿಗೆ ಹಾರೈಕೆ ನೀಡಿದ್ದು ಬ್ಲೇಸಡ್ ಕಪಲ್ ಎಂದು ಕೊಂಡಾಡಿದ್ದಾರೆ.
ಕೊರೋನಾದಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಡ್ಯಾನ್ಸರ್ ನೆರವಿಗೆ ನಿಖಿಲ್ ಧಾವಿಸಿದ್ದರು. ರಾಮನಗರದ ಹಳ್ಳಿಗೆ ತೆರಳಿ ಕೃಷಿ ಕಾಯಕದಲ್ಲಿಯೂ ನಿರತರಾಗಿದ್ದರು.
ರೇವತಿ ಗರ್ಭಿಣಿ ಎಂಬ ವಿಚಾರವನ್ನು ಮಾವ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ತಿಳಿಸಿದ್ದರು. ಇತ್ತೀಚೆಗೆ ವಿನಯ್ ಗುರೂಜಿ ಸಹ ಕುಟುಂಬವನ್ನು ಭೇಟಿ ಮಾಡಿದ್ದರು.