ನೇಹಾ ಧೂಪಿಯಾ, ಅಂಗದ್ ಬೇಡಿ ಫೇರಿಟೇಲ್ ಲವ್‌ಸ್ಟೋರಿ!
ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿಯವರ ಬಾಲಿವುಡ್‌ನ ಫೇವರೇಟ್ ಕಪಲ್‌ಗಳಲ್ಲಿ ಬಬ್ಬರು. ಈ ಜೋಡಿಯ ಮದುವೆ ಫೋಟೋಗಳು ಹೊರಬಿದ್ದಾಗ ಆಘಾತವನ್ನುಂಟು ಮಾಡಿತು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಯಾಗುವ ಯೋಜನೆ ಯಾರಿಗೂ ತಿಳಿದಿರಲಿಲ್ಲ. ಇಲ್ಲಿದೆ ನೇಹಾ ಧೂಪಿಯಾ, ಅಂಗದ್ ಬೇಡಿಯ ಸುಂದರ ಪ್ರೇಮ್ ಕಹಾನಿ ವಿವರ.

ನೇಹಾ ಧೂಪಿಯಾ, ಅಂಗದ್ ಬೇಡಿಯ ಮದುವೆಯ ವಿಷಯ ಎಲ್ಲರಿಗೂ ಶಾಕ್ ನೀಡಿತ್ತು. ಮದುವೆಯಲ್ಲಿ ನೇಹಾ ಧೂಪಿಯಾ ಸುಂದರವಾದ ಗುಲಾಬಿ ಬಣ್ಣದ ಲೆಹೆಂಗಾವನ್ನು ಧರಿಸಿ ಅಂಗದ್ ಜೊತೆ ಮುಂದಿನ ಜೀವನಕ್ಕೆ ಕಾಲಿಟ್ಟರು ಮತ್ತು ಒಂದು ಸುಂದರ ಅಧ್ಯಾಯವನ್ನು ಆರಂಭಿಸಿದರು.
ಅಂಗದ್ ಮೊದಲ ಬಾರಿಗೆ ನೇಹಾಳನ್ನು ನೋಡಿದಾಗ ನಟಿಗೆ ಕೇವಲ 20 ವರ್ಷ. ವರದಿಯ ಪ್ರಕಾರ ಅಂಗದ್ ಬೇಡಿ ನೇಹಾಳನ್ನು ದೆಹಲಿಯ ಜಿಮ್‌ನಲ್ಲಿ ನೋಡಿದರು ಮತ್ತು ಅವರು ಸ್ನೇಹಿತರಿಗೆ ತಾನು ಒಂದು ದಿನ ಅವಳನ್ನು ಪರಿಚಯ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು.
ಇಬ್ಬರೂ ಮೊದಲು ಕಾಮನ್ ಫ್ರೆಂಡ್ ಪಾರ್ಟಿಯಲ್ಲಿ ಭೇಟಿಯಾದರು ಮತ್ತು ವೃತ್ತಿಪರ ಕಾರಣಗಳಿಗಾಗಿ ಇವರಿಬ್ಬರೂ ಮುಂಬೈಗೆ ತೆರಳಿದರು. ಇವರ ಲವ್‌ಸ್ಟೋರಿಯಲ್ಲಿ ಆಹಾರ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿಗಳು ಹೇಳುತ್ತವೆ.
ಅಂಗದ್ ಮನೆಯ ಊಟ ಮಿಸ್ ಮಾಡಿಕೊಳ್ಳುವಾಗ ನೇಹಾಳ ಮನೆಯ ಮಾಡಿದ ಆಹಾರ ಆ ಕೊರತೆ ಪೂರೈಸುತ್ತಿತ್ತು. ಶೀಘ್ರದಲ್ಲೇ, ಅವರು ಆಪ್ತ ಸ್ನೇಹಿತರಾದರು. ಈ ನಡುವೆ ನೇಹಾ ತಮ್ಮ ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.
ಈ ಸಮಯದಲ್ಲಿ ಅವರು ಅಂಗದ್‌ಗೆ ಕಾಲ್ ಮಾಡಿ ಮಾತನಾಡುತ್ತಿದ್ದರು. ಕರಣ್ ಜೋಹರ್ ಅವರಿಬ್ಬರನ್ನು ಬೆಸೆಯುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಕರಣ್ ಪಾರ್ಟಿಯಲ್ಲಿ ಇವರಲ್ಲಿರುವ ಪ್ರೀತಿಯ ಬಗ್ಗೆ ಅರಿವು ಮೂಡಿಸಿದರು. ಅಂಗದ್ ತನ್ನ ಹೆತ್ತವರನ್ನು ಮದುವೆಯಾಗಲು ಕೇಳಿದಾಗ ನೇಹಾಳಿಗೆ ಇದು ಆಶ್ಚರ್ಯವಾಗಿತ್ತು.
ನಂತರ ಈ ಜೋಡಿ ಮೇ 10, 2018 ರಂದು ಗುರುದ್ವಾರದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ನವೆಂಬರ್ 18, 2018 ರಂದು ತಮ್ಮ ಮಗಳು ಮೆಹರ್ ಅವರನ್ನು ಸ್ವಾಗತಿಸಿತು. ಅವರು ಶೀಘ್ರದಲ್ಲೇ ಎರಡನೇ ಮಗುವಿಗೆ ಪೋಷಕರಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.