ಒತ್ತಡ ನಿಭಾಯಿಸೋದ್ರಲ್ಲಿ NCB ಆಫೀಸರ್ ಸಮೀರ್ ಎಕ್ಸ್‌ಪರ್ಟ್: ಪತ್ನಿ ಹೇಳಿದ್ದಿಷ್ಟು
ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಿಂದ ಹೆಚ್ಚಿದ ಒತ್ತಡ ಒತ್ತಡ ನಿಭಾಯಿಸೋದ್ರಲ್ಲಿ ನನ್ ಗಂಡ ಎಕ್ಸ್‌ಪರ್ಟ್ ಎಂದ ಸಮೀರ್ ಪತ್ನಿ

ಸದ್ಯ ಎಲ್ಲರ ಗಮನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(NCB) ಮತ್ತು ಅದರ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮೇಲಿದೆ. ಕಳೆದ ಕೆಲವು ದಿನಗಳಿಂದ ಎಲ್ಲರ ಗಮನ ಸೆಳೆದ ಅಧಿಕಾರಿ ಇವರು.
ಡ್ರಗ್ ವಿರೋಧಿ ಏಜೆನ್ಸಿ ಕ್ರೂಸ್ ಮೇಲೆ ದಾಳಿ ಮಾಡಿ ಡ್ರಗ್ ಪಾರ್ಟಿ ಮಾಡುತ್ತಿದ್ದವರನ್ನು ಬಂಧಿಸಿತು. ಇದರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಗ ಆರ್ಯನ್ ಖಾನ್ ಹಾಗೂ ಇತರ 8 ಜನರನ್ನು ವಶಕ್ಕೆ ಪಡೆಯಲಾಯಿತು.
ಅವರ ಬಂಧನ ಮತ್ತು ಬಂಧನದ ನಂತರ, ಎನ್‌ಸಿಬಿ ಮಾದಕವಸ್ತು ಮಾರಾಟಗಾರರು ಸೇರಿದಂತೆ 10 ಜನರನ್ನು ಬಂಧಿಸಿದೆ. ಸ್ಟಾರ್ ಮಗನ ಜಾಮೀನು ಅರ್ಜಿಯ ವಿಚಾರಣೆಯನ್ನು ಇಂದಿಗೆ ನಿಗದಿಪಡಿಸಲಾಗಿದೆ.
ಎಲ್ಲರ ಕಣ್ಣುಗಳು ಸಮೀರ್ ಮೇಲೆ ನೆಟ್ಟಿರುವಾಗ ಸಮೀರ್ ವಾಂಖೆಡೆ ಅವರ ಪತ್ನಿ ಮತ್ತು ಮರಾಠಿ ನಟಿ ಕ್ರಾಂತಿ ರೆಡ್ಕರ್ ತಮ್ಮ ಪತಿ ಅಂತಹ ಒತ್ತಡವನ್ನು ನಿಭಾಯಿಸುವಲ್ಲಿ ಬಹಳ ನಿಸ್ಸೀಮರು ಎಂದು ಬಹಿರಂಗಪಡಿಸಿದ್ದಾರೆ.
ಕ್ರಾಂತಿ ರೆಡ್ಕರ್ ಒತ್ತಡವನ್ನು ನಿಭಾಯಿಸುವಲ್ಲಿ ಸಮೀರ್ ತುಂಬಾ ನಿಸ್ಸೀಮರು. ಅವರು ನಮ್ಮ ಐತಿಹಾಸಿಕ ನಾಯಕರೊಂದಿಗೆ ತುಂಬಾ ಆಳವಾದ ಸಂಪರ್ಕ ಹೊಂದಿದ್ದಾರೆ. ಅವರು ವಿವಿಧ ವಿಶ್ವ ನಾಯಕರ ಕುರಿತು ಓದಿ ಬೆಳೆದಿದ್ದಾರೆ ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನೆಟಿಜನ್‌ಗಳು ಅವರನ್ನು ನಿಜ ಜೀವನದ ಸಿಂಗಮ್ ಎಂದು ಉಲ್ಲೇಖಿಸಿದ್ದಾರೆ. ಸಮೀರ್ ಅವರ ತಂದೆ ನ್ಯಾಂಡಿಯೋ ವಾಂಖೆಡೆ ಅವರು ನಿವೃತ್ತ ಪೊಲೀಸ್ ಅಧಿಕಾರಿ
ಇತ್ತೀಚೆಗೆ ಸಮೀರ್ ವಾಂಖೇಡೆ ಮುಂಬೈ ಪೋಲಿಸರಿಂದ ಸ್ಪೈ ಮಾಡಲ್ಪಟ್ಟ ಬಗ್ಗೆ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಲಾಗಿದೆ. ಸಮೀರ್ ತಮ್ಮನ್ನು ಪೊಲೀಸ್ ಒಬ್ಬ ಹಿಂಬಾಲಿಸುತ್ತಿದ್ದನೆಂದು ಬಹಿರಂಗಪಡಿಸಿದ್ದಾರೆ. ಸಿಸಿಟಿವಿ ಸಾಕ್ಷ್ಯವನ್ನು ಕೂಡ ಸಲ್ಲಿಸಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.