ನಿಗೂಢ ವ್ಯಕ್ತಿಯೊಂದಿಗೆ ನವಾಜುದ್ದೀನ್ ಸಿದ್ದಿಕಿ ಮಾಜಿ ಪತ್ನಿ ಆಲಿಯಾ
ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಅವರ ವಿಚ್ಛೇದಿತ ಪತ್ನಿ ಆಲಿಯಾ ( Aaliya) ಶೀಘ್ರದಲ್ಲೇ ಕಾನೂನುಬದ್ಧವಾಗಿ ಬೇರೆಯಾಗಲಿದ್ದಾರೆ. ಜೂನ್ 5 ರಂದು, ಅವರು ಇನ್ಸ್ಟಾಗ್ರಾಮ್‌ನಲ್ಲಿ ಮಿಸ್ಟರಿ ಮ್ಯಾನ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಮತ್ತು ಅದು ಡೇಟಿಂಗ್ ವದಂತಿಗಳಿಗೆ ಉತ್ತೇಜನ ನೀಡಿದೆ.

ನವಾಜುದ್ದೀನ್ ಸಿದ್ದಿಕಿ ಚಿತ್ರರಂಗದ ಅತ್ಯುತ್ತಮ ಕಲಾತ್ಮಕ ನಟರಲ್ಲಿ ಒಬ್ಬರು. ಆದರೆ, ಅವರ ಕೆಲಸದ ಹೊರತಾಗಿ, ಅವರ ವಿವಾದಾತ್ಮಕ ವೈಯಕ್ತಿಕ ಜೀವನವೂ (Controversial Personal LIfe) ಸಹ ಗಮನ ಸೆಳೆಯುತ್ತದೆ.
ನವಾಜುದ್ದೀನ್ ಮಾಜಿ ಪತ್ನಿ ಆಲಿಯಾ, ನಟನ ವಿರುದ್ಧದ ಹಲವು ಆರೋಪಗಳ ಜೊತೆಗೆ ತಮ್ಮ ಬಾಕಿ ಇರುವ ವಿಚ್ಛೇದನ ಮತ್ತು ಅನುಚಿತ ವರ್ತನೆ ಬಗ್ಗೆ ಆಗಾಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ನವಾಜುದ್ದೀನ್ ಮತ್ತು ಅವರ ಮಾಜಿ ಪತ್ನಿ ಆಲಿಯಾ ಸಾರ್ವಜನಿಕವಾಗಿ ಪರಸ್ಸರ ಕೆಟ್ಟ ಅರೋಪವನ್ನು ಹೊರಸಿದ ನಂತರ, ಈಗ ಆಲಿಯಾ ಅವರು ಜೀವನದಲ್ಲಿ ಹೊಸ ಆರಂಭವನ್ನು ಪ್ರದರ್ಶಿಸುವ ನಿಗೂಢ ವ್ಯಕ್ತಿಯೊಂದಿಗೆ ಫೋಟೋ ಹಂಚಿಕೊಂಡಿದ್ದಾರೆ.
ಜೂನ್ 5 ರಂದು, ಅವರು ನಿಗೂಢ ವ್ಯಕ್ತಿಯೊಂದಿಗೆ ಫೋಟೋ ಹಾಕಿದ್ದಾರೆ ಮತ್ತು 'ನನಗೆ ಸಂತೋಷವಾಗಿರಲು ಹಕ್ಕಿಲ್ಲವೇ?' ಎಂಬ ಪ್ರಶ್ನೆಯನ್ನು ಶೀರ್ಷಿಕೆಯಲ್ಲಿ ಕೇಳಿ ರೂಮರ್‌ಗೆ ದಾರಿ ಮಾಡಿಕೊಟ್ಟಿದ್ದಾರೆ .
'ನಾನು ಅಮೂಲ್ಯ ಸಂಬಂಧದಿಂದ ಹೊರಬರಲು 19 ವರ್ಷ ತೆಗೆದುಕೊಂಡೆ. ಆದರೆ ನನ್ನ ಜೀವನದಲ್ಲಿ, ನನ್ನ ಮಕ್ಕಳು ನನ್ನ ಆದ್ಯತೆ. ಅವರು ಯಾವಾಗಲೂ ಇದ್ದರು. ಮತ್ತು ಅವರು ಇರುತ್ತಾರೆ. ಆದಾಗ್ಯೂ, ಕೆಲವರು ಇದ್ದಾರೆ. ಸ್ನೇಹಕ್ಕಿಂತ ಮತ್ತು ಅದಕ್ಕಿಂತ ದೊಡ್ಡ ಸಂಬಂಧಗಳು. ಈ ಸಂಬಂಧವು ಅದೇ ಸಂಬಂಧವಾಗಿದೆ. ಅದೇ ಸಂಬಂಧ ನನಗೆ ಸಂತೋಷವಾಗಿದೆ. ಆದ್ದರಿಂದ ನಾನು ಇಲ್ಲಿ ನನ್ನ ಸಂತೋಷವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೇನೆ. ನನಗೆ ಸಂತೋಷವಾಗಿರಲು ಹಕ್ಕಿಲ್ಲವೇ? ' ಎಂದು ಫೋಟೋ ಜೊತೆ ಬರೆದಿದ್ದಾರೆ.
ನೆಟಿಜನ್ ಒಬ್ಬರು, ದಯವಿಟ್ಟು ನಿಮ್ಮ ಉಪನಾಮವನ್ನು ಬದಲಾಯಿಸಿ ಎಂದು ಕಾಮೆಂಟ್ ಮಾಡಿದಾಗ, ಆಲಿಯಾ ಅತಿ ಶೀಘ್ರದಲ್ಲಿ ಎಂದು ಅದಕ್ಕೆ ಉತ್ತರ ನೀಡಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.