- Home
- Entertainment
- Cine World
- ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಮದುವೆ ಫೋಟೋ ವೈರಲ್; ಫ್ಯಾನ್ಸ್ ಶಾಕ್
ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಬೆನ್ನಲ್ಲೇ ಶೋಭಿತಾ ಮದುವೆ ಫೋಟೋ ವೈರಲ್; ಫ್ಯಾನ್ಸ್ ಶಾಕ್
ನಟಿ ಶೋಭಿತಾ, ನಾಗ್ ಚೈತನ್ಯ ಬಿಟ್ಟು ಬೇರೆ ವ್ಯಕ್ತಿ ಜೊತೆ ಮದುವೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದುಬೈನಲ್ಲಿ ಹಸೆಮಣೆ ಏರಿದ ಶೋಭಿತಾ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟಿ ಸಮಂತಾ ಅವರಿಗೆ ವಿಚ್ಛೇದನ ನೀಡಿ ದೂರ ಆದ ಬಳಿಕ ನಾಗ ಚೈತನ್ಯ ಹೆಸರು ಮತ್ತೋರ್ವ ನಟಿ ಶೋಭಿತಾ ದುಲಿಪಾಲಾ ಅವರ ಜೊತೆ ಕೇಳಿಬರುತ್ತಿತ್ತು. ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ, ಸಮಂತಾರಿಂದ ದೂರ ಆಗಿರುವ ನಾಗ್ ಶೋಭಿತಾ ಅವರನ್ನೇ ಮದುವೆ ಆಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ ಈ ಬಗ್ಗೆ ಇಬ್ಬರೂ ತುಟಿಬಿಚ್ಚಿರಲಿಲ್ಲ. ಇದೀಗ ಶೋಭಿತಾ ಮದುವೆ ಫೋಟೋ ಶೇರ್ ಮಾಡುವ ಮೂಲಕ ಶಾಕ್ ನೀಡಿದ್ದಾರೆ.
Sobhita Dhulipala
ಇದೀಗ ನಟಿ ಶೋಭಿತಾ, ನಾಗ್ ಚೈತನ್ಯ ಬಿಟ್ಟು ಬೇರೆ ವ್ಯಕ್ತಿ ಜೊತೆ ಮದುವೆಯಾಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ದುಬೈನಲ್ಲಿ ಹಸೆಮಣೆ ಏರಿದ ಶೋಭಿತಾ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಫೋಟೋದಲ್ಲಿ ಶೋಭಿತಾ ಮದುವೆಗಳಾಗಿ ಕಂಗೊಳಿಸುತ್ತಿದ್ದಾರೆ. ಪತಿಯ ಕೈ ಹಿಡುದು ಇಬ್ಬರೂ ಒಬ್ಬರಿಗೊಬ್ಬರು ನೋಡುತ್ತಾ ನಗುತ್ತಿದ್ದಾರೆ. ಗುಲಾಬಿ ಬಣ್ಣದ ಲೆಹಂಗಾದಲ್ಲಿ ಶೋಭಿತಾ ಕಾಣಿಸಿಕೊಂಡಿದ್ದಾರೆ. ಹುಡುಗ ಶೇರ್ವಾನಿ ಧರಿಸಿದ್ದಾರೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂದಹಾಗೆ ಇದು ನಿಜವಾದ ಮದುವೆಯಲ್ಲ. ಜಾಹಾರಾತಿಗಾಗಿ ಶೋಭಿತಾ ಮದುಮಗಳಾಗಿ ಕಂಗೊಳಿಸಿದ್ದಾರೆ. ಶೋಭಿತಾ ಫೋಟೋ ಶೇರ್ ಮಾಡುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಯಿತು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬ ಅಬಿಮಾನಿ, ಒಂದು ಸೆಕೆಂಡ್ ನೀವು ಮದುವೆಯಾಗಿದ್ದೀರಿ ಎಂದು ಉಹಿಸು ಗಟ್ಟಿಸಿತು' ಎಂದು ಹೇಳಿದ್ದಾರೆ.
ಮತ್ತೋರ್ವ ಅಭಿಮಾನಿ ಕಾಮೆಂಟ್ ಮಾಡಿ ದೇವರಿಗೆ ಧನ್ಯವಾದಳು, ಇದೇ ಕೇವಲ ಜಾಹೀರಾತು ಎಂದು ಹೇಳಿದ್ದಾರೆ. ಮತ್ತೋರ್ವ ಅಭಿಮಾನಿ, ನನ್ನ ಹೃದಯ ಒಂದು ಕ್ಷಣ ನಿಂತುಹೋಯಿತು' ಎಂದು ಹೇಳಿದ್ದಾರೆ.
ಇತ್ತೀಚಿಗಷ್ಟೆ ಚಾಟ್ ಶೋ ಒಂದರಲ್ಲಿ ನಾಗ ಚೈತನ್ಯ ಅವರಿಗೆ ಶೋಬಿತಾ ಬಗ್ಗೆ ಪ್ರಶ್ನೆ ಎದುರಾಗಿತ್ತು. ಆಗ ನಾಗ ಚೈತನ್ಯ ಜೋರಾಗಿ ನಗುತ್ತಾ ಇದಕ್ಕೆ ನನ್ನ ನಗುವೇ ಉತ್ತರ ಎಂದು ಹೇಳಿದ್ದರು. ಇಬ್ಬರ ನಡುವೆ ಡೇಟಿಂಗ್ ವದಂತಿ ನಡುವೆ ಶೋಭಿತಾ ಜಾಹೀರಾತಿನ ಮದುವೆ ಫೋಟೋಗಳು ವೈರಲ್ ಆಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.