ನಟಿ ಸಮಂತಾಗೆ ಡಿವೋರ್ಸ್ ಕೊಟ್ಟಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟ ನಾಗ ಚೈತನ್ಯ!
ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದು ಸುಮಾರು 5 ವರ್ಷಗಳಾಗಿವೆ. ಈ ಬಗ್ಗೆ ಮತ್ತೊಮ್ಮೆ ಪ್ರತಿಕ್ರಿಯಿಸಿದ ನಾಗ ಚೈತನ್ಯ, ಒಂದು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ನಾಗ ಚೈತನ್ಯ ಮತ್ತು ಸಮಂತಾ 7 ವರ್ಷ ಪ್ರೀತಿಸಿ, 4 ವರ್ಷ ದಾಂಪತ್ಯ ಜೀವನ ನಡೆಸಿ 5 ವರ್ಷಗಳ ಹಿಂದೆ ವಿಚ್ಛೇದನ ಪಡೆದು ಬೇರೆ ಬೇರೆ ಆಗಿದ್ದಾರೆ. ಇತ್ತೀಚೆಗೆ 2ನೇ ಮದುವೆಗೂ ಮೊದಲು ಸಮಂತಾಗೆ ವಿಚ್ಛೇದನ ನೀಡಿದ ಅಸಲಿ ಕಾರಣವನ್ನು ನಾಗಚೈತನ್ಯ ಬಿಚ್ಚಿಟ್ಟಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಂದದ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದರು. ಆದರೆ, ಇವರ ವಿಚ್ಛೇದನ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಯ ವಿಷಯವಾಗುತ್ತಲೇ ಇರುತ್ತದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗುತ್ತದೆ.
ಸಮಂತಾ ಜೊತೆಗಿನ ವಿಚ್ಛೇದನದ ಬಗ್ಗೆ ಹಲವು ಸಂದರ್ಭಗಳಲ್ಲಿ ನಾಗ ಚೈತನ್ಯ ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಒಟ್ಟಿಗೆ ನಿರ್ಧಾರ ತೆಗೆದುಕೊಂಡಿದ್ದೇವೆ, ನಿರ್ಧಾರದ ಬಗ್ಗೆ ಸಂತೋಷವಾಗಿದೆ. ಈಗಲೂ ಇಬ್ಬರೂ ನಮ್ಮ ನಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ ಎಂದು ಚೈತನ್ಯ ತಿಳಿಸಿದ್ದಾರೆ.
ಆಗ ಅವರ ಮಾತುಗಳು ವೈರಲ್ ಆಗಿದ್ದವು. ಈಗ ಮತ್ತೊಮ್ಮೆ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ ಚೈತನ್ಯ, ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಯಾಕೆ ಕ್ರಿಮಿನಲ್ ತರ ನೋಡ್ತಿದ್ದಾರೆ. ಯಾಕೆ ಪದೇ ಪದೇ ನಮ್ಮ ಬಗ್ಗೆ ಸುದ್ದಿ ಬರೀತಾರೆ ಎಂದು ಕಿಡಿಕಾರಿದ್ದಾರೆ.
ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಮಾತನಾಡಿ, 'ನನ್ನ ಜೀವನದಲ್ಲಿ ಏನಾಯಿತೋ ಅದು ಹಲವರ ಜೀವನದಲ್ಲಿ ನಡೆಯುತ್ತದೆ. ಅದು ನನ್ನ ಜೀವನದಲ್ಲಿ ಮಾತ್ರ ನಡೆದಿಲ್ಲ, ಆದರೆ ನನ್ನನ್ನು ಯಾಕೆ ಕ್ರಿಮಿನಲ್ ತರ ನೋಡ್ತಿದ್ದಾರೆ. ನಾನು ಏನೋ ದೊಡ್ಡ ತಪ್ಪು ಮಾಡಿದ ಹಾಗೆ ನೋಡ್ತಿದ್ದಾರೆ. ಮದುವೆಯ ವಿಷಯದಲ್ಲಿ ಕೆಲವರನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ಒಂದು ಸಂಬಂಧವನ್ನು ಮುರಿಯಬೇಕಾದರೆ ಅದರ ಬಗ್ಗೆ ನಾನು ಸಾವಿರ ಬಾರಿ ಯೋಚಿಸುತ್ತೇನೆ. ಏಕೆಂದರೆ ಅದರ ಪರಿಣಾಮಗಳು ನನಗೆ ತಿಳಿದಿದೆ. ನಾನು ಒಂದು ಡಿವೋರ್ಸ್ ಆಗಿರುವ ಕುಟುಂಬದಿಂದ ಬಂದವನು. ಆ ಅನುಭವ, ಆ ಪರಿಣಾಮಗಳು ಹೇಗಿರುತ್ತವೆ ಎಂದು ನನಗೆ ಗೊತ್ತು. ಆ ವಿಷಯದಲ್ಲಿ ನಾನು ಯಾವಾಗಲೂ ಬೇಸರ ಪಡುತ್ತಲೇ ಇರುತ್ತೇನೆ. ಇದು ನಾವಿಬ್ಬರೂ (ಸಮಂತಾ ಮತ್ತು ನಾನು) ಒಟ್ಟಿಗೆ ತೆಗೆದುಕೊಂಡ ನಿರ್ಧಾರ.
ದುರದೃಷ್ಟವಶಾತ್ ಅದು ಒಂದು ಚರ್ಚೆಯ ವಿಷಯವಾಗಿ, ಒಂದು ಹೆಡ್‌ಲೈನ್ ಆಗಿ, ಒಂದು ಗಾಸಿಪ್ ಆಗಿ, ಈಗ ಒಂದು ಮನರಂಜನೆಯಾಗಿಬಿಟ್ಟಿದೆ. ಅದರ ಬಗ್ಗೆ ನಾನು ಮಾತನಾಡಿದರೆ, ಆ ಸಂದರ್ಶನದಿಂದಲೂ ಇನ್ನೂ ಕೆಲವು ಲೇಖನಗಳು ಹುಟ್ಟುತ್ತವೆ. ಇದಕ್ಕೆ ಪೂರ್ಣವಿರಾಮ ಎಲ್ಲಿದೆ? ಬರೆಯುವವರೇ ಪೂರ್ಣವಿರಾಮ ಇಡಬೇಕು ಎಂದು ನಾಗ ಚೈತನ್ಯ ತಿಳಿಸಿದ್ದಾರೆ. ಪ್ರಸ್ತುತ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಚೈತನ್ಯ ನಟಿಸಿರುವ 'ಕಸ್ಟಡಿ' ಚಿತ್ರ ಶುಕ್ರವಾರ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿರುವುದು ವಿಶೇಷ. ಅಲ್ಲು ಅರವಿಂದ್ ಮತ್ತು ಬನ್ನಿ ವಾಸು ನಿರ್ಮಿಸಿರುವ ಈ ಚಿತ್ರಕ್ಕೆ ವೆಂಕಟ್ ಪ್ರಭು ನಿರ್ದೇಶಕರು. ಬಹಳ ದಿನಗಳ ನಂತರ ಚೈತನ್ಯಗೆ ಈ ಚಿತ್ರದ ಮೂಲಕ ಗೆಲುವು ಸಿಕ್ಕಿದೆ ಎಂದು ತಿಳಿದುಬಂದಿದೆ. ಚಿತ್ರಕ್ಕೆ ಭಾರಿ ಪ್ರಮಾಣದಲ್ಲಿ ಕಲೆಕ್ಷನ್ ಬರುವ ಸಾಧ್ಯತೆ ಇದೆ.