ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ಸೀತಾ ಮಹಾಲಕ್ಷ್ಮಿ: ಕಣ್ಣು ಕುಕ್ಕುವ ಈ ಸ್ಯಾರಿ ಬೆಲೆಯೆಷ್ಟು ಗೊತ್ತೇ?
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಇತ್ತೀಚೆಗೆ ಒಂದು ಇವೆಂಟ್ನಲ್ಲಿ ಡಿಸೈನರ್ ಜಾರ್ಜೆಟ್ ಸೀರೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ಉಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ಇದರ ಬೆಲೆ ಕೇಳಿದರೆ ಶಾಕ್ ಆಗುತ್ತದೆ. ಇದರ ಬೆಲೆಯೆಷ್ಟು ಗೊತ್ತಾ?
ಸೀತಾ ರಾಮಂ ಸಿನಿಮಾ ಬಳಿಕ ನಟಿ ಮೃಣಾಲ್ ಠಾಕೂರ್ ಯಾವುದೇ ಬಿಗ್ ಹಿಟ್ ನೀಡಿಲ್ಲ. ಇತ್ತೀಚಿಗೆ ತೆರೆಕಂಡ ಫ್ಯಾಮಿಲಿ ಸ್ಟಾರ್ ಸಿನಿಮಾ ಕೂಡ ಮಕಾಡೆ ಮಲಗಿತು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಮೃಣಾಲ್ ಠಾಕೂರ್ ಇದೀಗ ಸೀರೆಯಲ್ಲಿ ಮಿಂಚಿದ್ದಾರೆ.
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಜಾರ್ಜೆಟ್ ಸೀರೆಯಲ್ಲಿ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿಕೊಂಡು ಚೆಂದದ ಗೊಂಬೆಯಂತೆ ಇತ್ತೀಚೆಗೆ ಕಾಣಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಮೃಣಾಲ್ ಠಾಕೂರ್ ಫೋಟೋಸ್ ವೈರಲ್ ಆಗಿದ್ದು, ಸಾರಿ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹಾಗೆಯೇ ಈ ಪೋಸ್ಟ್ಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್ಗಳ ಸುರಿಮಳೆ ಬಂದಿದೆ.
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಈ ಸೀರೆಯನ್ನು ಇತ್ತೀಚೆಗೆ ನಡೆದ ‘ಹಿರಾಮಂಡಿ: ದಿ ಡೈಮಂಡ್ ಬಜಾರ್’ ವೆಬ್ ಸೀರಿಸ್ನ ಪ್ರೀರಿಲೀಸ್ ಶೋ ವೇಳೆ ಉಟ್ಟಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ದಕ್ಷಿಣ ಚಿತ್ರರಂಗದ ನಟಿ ಮೃಣಾಲ್ ಠಾಕೂರ್ ಜಾರ್ಜೆಟ್ ಸೀರೆಯನ್ನು ವಿನ್ಯಾಸಕಿ ಮೃಣಾಲಿನಿ ರಾವ್ ಡಿಸೈನ್ ಮಾಡಿದ್ದಾರೆ. ಈ ಸೀರೆಯಲ್ಲಿ ಕಸೂತಿ ಕೆಲಸವೇ ಹೆಚ್ಚಾಗಿಯೇ ಇದೆ.
ಸೌತ್ ಸುಂದರಿ ನಟಿ ಮೃಣಾಲ್ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮದುವೆ ಹಾಗೂ ಮಕ್ಕಳನ್ನು ಹೊಂದುವ ವಿಚಾರದ ಬಗ್ಗೆ ಮಾತಾಡಿದ ಮೃಣಾಲ್ ಠಾಕೂರ್, ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ನಟಿ ಮೃಣಾಲ್ ಠಾಕೂರ್ ಸೀತಾ ರಾಮಂ ಚಿತ್ರದ ಯಶಸ್ಸಿನ ಬಳಿಕ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದವರು, ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಆದರೆ ಈ ಸಿನಿಮಾಗೆ ಪ್ರೇಕ್ಷಕರಿಂದ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.