Mouni Roy Wedding: ಅಪ್ಪಟ ಕೇರಳ ಶೈಲಿ ಮದುವೆ, ಶ್ರೀಮತಿಯಾದ್ರು KGF ಬೆಡಗಿ
- ಸೂರಜ್ ನಂಬಿಯಾರ್ ಪತ್ನಿಯಾದ ಮೌನಿ ರಾಯ್
- ಬಾಲಿವುಡ್ ಬೆಡಗಿಯ ಸೌತ್ ಇಂಡಿಯನ್ ಸ್ಟೈಲ್ ವೆಡ್ಡಿಂಗ್
- ಅಪ್ಪಟ ಕೇರಳ ಶೈಲಿಯಲ್ಲಿ ಮದುವೆ, ಫೊಟೋಸ್ ವೈರಲ್
ಬಾಲಿವುಡ್ ನಟಿ ಮೌನಿ ರಾಯ್ ಅವರು ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ ಅವರನ್ನು ಮದುವೆಯಾಗಿದ್ದಾರೆ. ಗೋವಾದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನಡೆದಿದೆ.
ಅಪ್ಪಟ ಕೇರಳ ಶೈಲಿಯಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ತೆಂಗಿನ ಸಿರಿ, ದೀಪವನ್ನು ಹಚ್ಚಿಟ್ಟು ಪುರೋಹಿತರು ಶಾಸ್ತ್ರಗಳನ್ನು ಮಾಡುವುದು ಕಂಡು ಬಂದಿದೆ.
ಕೆಂಪು ಝರಿಯಂಚಿನ ಬಿಳಿ ಬಣ್ಣದ ಸೀರೆಯುಟ್ಟಿದ್ದ ಮೌನಿರಾಯ್ ಟೆಂಪಲ್ ಜ್ಯುವೆಲ್ಲರಿ ಧರಿಸಿದ್ದರು. ಹೆವಿಯಾದ ಆಭರಣಗಳನ್ನು ಅವಾಯ್ಡ್ ಮಾಡಿದ್ದರು ನಟಿ. ಸಿಂಪಲ್ ವಧುವಾಗಿ ಮಿಂಚಿದ್ದಾರೆ
ಸೂರಜ್ ಗೋಲ್ಡನ್ ಕುರ್ತಾ ಹಾಗೂ ಬಿಳಿ ಪಂಚೆಯಲ್ಲಿ ಕೇರಳ ವರನ ಲುಕ್‌ನಲ್ಲಿ ಮಿಂಚಿದ್ದಾರೆ. ಮದುವೆ ಮಂಟಪದ ಅಲಂಕಾರವೂ ಹೆಚ್ಚು ಕೇರಳದ ಅಲಂಕಾರಿಕಾ ಶೈಲಿಗಳನ್ನು ಹೊಂದಿತ್ತು
ನಟಿ ಸೂರಜ್ ಜೊತೆಗಿನ ಫೋಟೋ ಶೇರ್ ಮಾಡಿ ಅವರನ್ನು ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಎವರಿಥಿಂಗ್ ಎಂದಷ್ಟೇ ನಟಿ ಕ್ಯಾಪ್ಶನ್ ಕೊಟ್ಟಿದ್ದು ಹರಿ ಓಂ ಎಂದ ಟ್ಯಾಗ್ ಕೊಟ್ಟಿದ್ದಾರೆ.