ಮೋಹನ್‌ಲಾಲ್ ಇಷ್ಟೊಂದು ಕಿರಿಕ್ಕಾ? ಮಲೆಯಾಳಂ ನಟನ ಬಗ್ಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಹೇಳಿದ್ದೇನು
ಮಲೆಯಾಳಂ ಸಿನಿಮಾ ರಂಗದ ಸೂಪರ್ ಸ್ಟಾರ್ ಮೋಹನ್‌ಲಾಲ್, ಅವರಿಗೆ ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ ಅವರ ಬಗ್ಗೆ ನಟಿ, ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಗಳಿಸಿರುವ ನಯನಾತಾರಾ ಏನು ಹೇಳಿದ್ದಾರೆ ನೋಡಿ.
ಲೇಡಿ ಸೂಪರ್‌ಸ್ಟಾರ್ ನಯನತಾರಾ 'ಅವರು ಮಲೆಯಾಳಂನ ವಿಸ್ಮಯತುಂಬತು' ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜೊತೆ ಕೆಲಸ ಮಾಡಿದಾಗ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಈ ಸಿನಿಮಾದ ನಿರ್ದೇಶಕ ಫಾಜಿಲ್ ಅವರ ಹತಾಶೆಯನ್ನು ನೆನಪಿಸಿಕೊಳ್ಳುತ್ತಾ, 'ಒಂದು ಹಂತದಲ್ಲಿ, ಫಾಜಿಲ್ ಸರ್ ಹತಾಶರಾಗಿ, 'ನನಗೆ ಇನ್ನು ಸಾಧ್ಯವಿಲ್ಲ. ನೀವು ಅರ್ಥಮಾಡಿಕೊಳ್ಳುತ್ತಿಲ್ಲ' ಎಂದು ಹೇಳಿದ್ದರು ಎಂದು ನಯನತಾರಾ ಹೇಳಿಕೊಂಡಿದ್ದಾರೆ.
ಸಿನಿಮಾರಂಗಕ್ಕೆ ಹೊಸಬರಾಗಿ ಬಂದಾಗ ತಾನು ಎದುರಿಸಿದ ಸವಾಲುಗಳನ್ನು ನಯನತಾರಾ ವಿವರಿಸಿದ್ದು, ಆ ಸಿನಿಮಾದಲ್ಲಿ ನಟ ಮೋಹನ್‌ಲಾಲ್ ಸರ್, 'ನಯನತಾರಾ, ನೀವು ಭಾವನೆಗಳನ್ನು ಒಳಗಿನಿಂದ ಹೊರಹಾಕಬೇಕು. ಆಗ ಮಾತ್ರ ನೀವು ಸಂಭಾಷಣೆಯನ್ನು ಸರಿಯಾಗಿ ಹೇಳಬಹುದು' ಎಂದು ಒತ್ತಾಯಿಸುತ್ತಿದ್ದರು. ಅವರು ಅದನ್ನು ಪದೇ ಪದೇ ಹೇಳುತ್ತಿದ್ದರಿಂದ ನನಗೆ ತುಂಬಾ ಕಿರಿಕಿರಿಯಾಯಿತು ಎಂದು ನಯನತಾರಾ ಹೇಳಿಕೊಂಡಿದ್ದಾರೆ.
ನಟಿ ನಯನತಾರಾ
ಅಲ್ಲದೇ ಮೋಹನ್‌ಲಾಲ್ ಮಾತಿಗೆ ಪ್ರತಿಕ್ರಿಯಿಸುತ್ತಾ ನಯನತಾರಾ 'ಸರ್, ನಾನು ಏನು ಮಾಡುತ್ತಿದ್ದೇನೆಂದು ನನಗೆ ತಿಳಿದಿಲ್ಲ. ನಾನು ಹೇಳುತ್ತಿರುವ ಸಂಭಾಷಣೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ. ಈ ಪದವನ್ನು ನೀವು ಅಳಬೇಕು, ಆ ಪದವನ್ನು ನೀವು ಪ್ರೀತಿಸಬೇಕು ಅಂತ ನೀವು ಹೇಳ್ತಿದ್ದೀರ. ಆದರೆ ನನ್ನೊಳಗೆ ಏನೂ ಇಲ್ಲ. ಭಯ ಮಾತ್ರ' ಇದೆ ಎಂದು ಪ್ರತಿಕ್ರಿಯಿಸಿದ್ದಾಗಿ ನಯನತಾರಾ ನೆನಪಿಸಿಕೊಳ್ಳುತ್ತಾರೆ. ನಯನತಾರಾ ಮಾತಿಗೆ ಮೋಹನ್‌ಲಾಲ್ ನಕ್ಕು ವಿರಾಮ ತೆಗೆದುಕೊಳ್ಳುವಂತೆ ಹೇಳಿದ್ರಂತೆ.
ಈ ವೇಳೆ ನಿರ್ದೇಶಕ ಫಾಜಿಲ್ ನಯನತಾರಾಗೆ ಅವರ ಸಾಮರ್ಥ್ಯದಲ್ಲಿ ನಂಬಿಕೆ ಇದೆ ಎಂದು ಭರವಸೆ ನೀಡಿದರು. ಫ್ರೆಂಚ್ ಕಾದಂಬರಿ 'ಇಫ್ ಓನ್ಲಿ ಇಟ್ ವರ್ ಟ್ರೂ' ಆಧಾರಿತ ಮಾನಸಿಕ ಥ್ರಿಲ್ಲರ್ 'ವಿಸ್ಮಯತುಂಬತು' (2004) ಚಿತ್ರದಲ್ಲಿ ಮೋಹನ್‌ಲಾಲ್ ಆರನೇ ಇಂದ್ರಿಯ ಹೊಂದಿರುವ ವ್ಯಕ್ತಿಯಾಗಿ ನಟಿಸಿದ್ದಾರೆ. ಈ ಚಿತ್ರ ನಯನತಾರಾ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವು.