- Home
- Entertainment
- Cine World
- ಕನ್ನಡದ ನಟಿಯನ್ನು ಪ್ರೀತಿಸಿದ್ದರು ಚಿರಂಜೀವಿ? ಮದುವೆ ಆಗದಿರಲು ಕಾರಣವೇನು? ನಿಜಾಂಶವೇನು?
ಕನ್ನಡದ ನಟಿಯನ್ನು ಪ್ರೀತಿಸಿದ್ದರು ಚಿರಂಜೀವಿ? ಮದುವೆ ಆಗದಿರಲು ಕಾರಣವೇನು? ನಿಜಾಂಶವೇನು?
ಚಿತ್ರರಂಗ ಅಂದ್ರೇನೆ ಮಾಯಾ ಪ್ರಪಂಚ. ಇಲ್ಲಿ ನಿಜಗಳೆಷ್ಟೋ, ಸುಳ್ಳುಗಳೆಷ್ಟೋ ಗೊತ್ತಿಲ್ಲ. ಆದ್ರೆ ಗಾಸಿಪ್ಸ್, ರೂಮರ್ಸ್ ಮಾತ್ರ ಬೇಕಾದಷ್ಟು ಕ್ರಿಯೇಟ್ ಆಗ್ತಿರ್ತವೆ. ಅದ್ರಲ್ಲಿ ಕೆಲವು ನಿಜಾನೂ ಇರಬಹುದು. ಆದ್ರೆ ಹೆಚ್ಚಾಗಿ ಚಿತ್ರರಂಗದಿಂದ ರೂಮರ್ಸ್‌ಗಳೇ ಬರ್ತಿರ್ತವೆ. ಸೆಲೆಬ್ರಿಟಿಗಳ ಪರ್ಸನಲ್ ಲೈಫ್ ಬಗ್ಗೆ, ಅವರ ಪ್ರತಿಯೊಂದು ಮೂಮೆಂಟ್ ಅನ್ನು ಗಮನಿಸ್ತಾ... ಗಾಸಿಪ್ ಕ್ರಿಯೇಟ್ ಮಾಡ್ತಿರ್ತಾರೆ. ಸ್ಟಾರ್ ಹೀರೋಗಳು, ಹೀರೋಯಿನ್ಗಳ ಪ್ರೇಮ, ಮದುವೆಗಳ ಬಗ್ಗೆ ಕೂಡಾ ಎಷ್ಟೋ ಗಾಸಿಪ್‌ಗಳು ಕೇಳಿ ಬಂದಿವೆ. ಆಗ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಒಂದು ರೂಮರ್ ಹರಿದಾಡ್ತಿತ್ತು. ಏನದು ವಿಷಯ?

ಚಿರಂಜೀವಿ ಟಾಲಿವುಡ್ಗೆ ದೊಡ್ಡಣ್ಣ. ಸಣ್ಣ ಹೀರೋ ಆಗಿ ಕೆರಿಯರ್ ಸ್ಟಾರ್ಟ್ ಮಾಡಿ ಮೆಗಾಸ್ಟಾರ್ ರೇಂಜ್ಗೆ ಬೆಳೆದಿದ್ದಾರೆ. ಯಾವುದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲದೆ ತಮ್ಮ ಟ್ಯಾಲೆಂಟ್ನಿಂದ ಇಂಡಸ್ಟ್ರಿಯಲ್ಲಿ ಈ ಮಟ್ಟಕ್ಕೆ ತಲುಪಿದ್ದಾರೆ ಚಿರಂಜೀವಿ. ಆಕ್ಟಿಂಗ್, ಆಕ್ಷನ್ಸ್ ಜೊತೆಗೆ ಡ್ಯಾನ್ಸ್ನಿಂದ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ ಚಿರಂಜೀವಿ. ಇಂಡಸ್ಟ್ರಿಯಲ್ಲಿ ನಂಬರ್ ಒನ್ ಹೀರೋ ಆಗಿ ಬೆಳೆದರು. ಆಮೇಲೆ ತಮ್ಮ ವಾರಸುದಾರರನ್ನು ಒಂದೊಂದಾಗಿ ರಂಗಕ್ಕೆ ಇಳಿಸ್ತಾ... ಮೆಗಾ ಸಾಮ್ರಾಜ್ಯವನ್ನ ಟಾಲಿವುಡ್ನಲ್ಲಿ ಸ್ಥಾಪಿಸಿದರು ಚಿರಂಜೀವಿ.
ಇನ್ನು ಅವರ ಕೆರಿಯರ್ನಲ್ಲಿ ಎಷ್ಟೋ ಜನ ಹೀರೋಯಿನ್ಗಳ ಜೊತೆ ಸಿನಿಮಾ ಮಾಡಿದ್ದಾರೆ. ಕೆಲವೊಂದು ಹೀರೋಯಿನ್ಗಳಿಗೆ ಮೆಗಾಸ್ಟಾರ್ನಿಂದ ಸ್ಟಾರ್ಡಮ್ ಸಿಕ್ಕಿದೆ. ರಾಧಿಕಾ, ವಿಜಯಶಾಂತಿ ಜೊತೆ ಹೆಚ್ಚು ಸಿನಿಮಾ ಮಾಡಿದ್ದಾರೆ ಮೆಗಾಸ್ಟಾರ್. ಎಷ್ಟೇ ದೊಡ್ಡ ಸ್ಟಾರ್ ಹೀರೋಯಿನ್ ಆದ್ರೂ ಚಿರಂಜೀವಿ ಜೊತೆ ಸಿನಿಮಾ ಅಂದ್ರೆ ಗ್ರೀನ್ ಸಿಗ್ನಲ್ ಕೊಡ್ತಿದ್ರಂತೆ. ಇನ್ನು ಹೊಸ ಹೀರೋಯಿನ್ಗಳು ಮೆಗಾ ಸಿನಿಮಾ ಅಂದ್ರೆ ಕುಣಿದು ಕುಪ್ಪಳಿಸ್ತಿದ್ರಂತೆ. ಆದ್ರೆ ಚಿರಂಜೀವಿ ಕೂಡಾ ಆ ಹೀರೋಯಿನ್ಗಳ ಜೊತೆ ಫ್ರೆಂಡ್ಲಿಯಾಗಿ ಇರ್ತಾರೆ. ಈಗಲೂ ತಮ್ಮ ಹಳೆ ಬ್ಯಾಚ್ ಜೊತೆ ಅಪರೂಪಕ್ಕೆ ಮೀಟ್ ಆಗ್ತಿರ್ತಾರೆ.
ತಮ್ಮ ಸಿನಿಮಾ ಕೆರಿಯರ್ನಲ್ಲಿ ಎಷ್ಟೋ ಜನ ಹೀರೋಯಿನ್ಗಳ ಜೊತೆ ಆಕ್ಟ್ ಮಾಡಿದ್ದಾರೆ ಚಿರಂಜೀವಿ. ಆದ್ರೆ ಒಂದು ಹೀರೋಯಿನ್ ಅಂದ್ರೆ ಮೆಗಾಸ್ಟಾರ್ಗೆ ತುಂಬಾ ಇಷ್ಟವಂತೆ. ಅವರನ್ನ ಗಾಢವಾಗಿ ಪ್ರೀತಿಸಿದ್ರಂತೆ, ಮದುವೆ ಕೂಡಾ ಆಗಬೇಕು ಅಂದ್ಕೊಂಡಿದ್ರಂತೆ ಅಂತಾ ಅಂದಿನ ದಿನಗಳಲ್ಲಿ ಒಂದು ಸುದ್ದಿ ಹರಿದಾಡ್ತಿತ್ತು. ಆ ಹೀರೋಯಿನ್ ಯಾರೂ ಅಲ್ಲ ಸುಮಲತಾ. ಹೌದು ಈ ತೆಲುಗು ಹೀರೋಯಿನ್ ಚಿರಂಜೀವಿ ಜೊತೆ ಕೆಲವು ಸಿನಿಮಾಗಳಲ್ಲಿ ಆಕ್ಟ್ ಮಾಡಿದ್ದಾರೆ. ಮಾಡಿದ ಸಿನಿಮಾಗಳು ಕಮ್ಮಿ ಆದ್ರೂ ಯಾಕೋ ಇವರಿಬ್ಬರ ಮಧ್ಯೆ ರೂಮರ್ಗಳು ಕೇಳಿ ಬಂತು. ಮೆಗಾಸ್ಟಾರ್ ಸುಮಲತಾರನ್ನ ಪ್ರೀತಿಸಿದ್ರು ಅಂತಾ ಗಾಸಿಪ್ಸ್ ಫಿಲ್ಮ್ ಸರ್ಕಲ್ನಲ್ಲಿ ಹರಿದಾಡ್ತಿತ್ತು.
ಆದ್ರೆ ಅದ್ರಲ್ಲಿ ನಿಜ ಇಲ್ಲ ಅಂತಾ ಆಮೇಲೆ ಎಲ್ಲರಿಗೂ ಅರ್ಥ ಆಯ್ತು. ಯಾಕಂದ್ರೆ ಸುಮಲತಾ ಕನ್ನಡ ಸ್ಟಾರ್ ಆಕ್ಟರ್ ಅಂಬರೀಶ್ನ ಪ್ರೀತಿಸಿ ಮದುವೆ ಆದ್ರು. ಇತ್ತ ಚಿರಂಜೀವಿ ಸ್ಟಾರ್ ಕಾಮಿಡಿಯನ್ ಅಲ್ಲು ರಾಮಲಿಂಗಯ್ಯ ಅವರ ಮಗಳನ್ನ ಸುರೇಖಾರನ್ನ ಮದುವೆ ಆದ್ರು. ಈ ಗಾಸಸಿಪ್‌ಗಳು ಯಾಕೆ ಬಂತೋ ಗೊತ್ತಿಲ್ಲ. ಈ ಇಬ್ಬರು ಸ್ಟಾರ್ಗಳು ಮಾತ್ರ ತಮ್ಮ ಕೆರಿಯರ್, ಫ್ಯಾಮಿಲಿ ಲೈಫ್ನ ಬ್ಯಾಲೆನ್ಸ್ ಮಾಡ್ತಾ ಹ್ಯಾಪಿಯಾಗಿ ಲೈಫ್ ಲೀಡ್ ಮಾಡಿದ್ರು.