- Home
- Entertainment
- Cine World
- 40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!
40 ಲಕ್ಷ ಕೊಟ್ಟು ಈ ನಟನ ಪ್ರಾಣ ಉಳಿಸಿದ್ರು ಚಿರಂಜೀವಿ.. ಆದರೆ ಮತ್ತೆ ಅವ್ರು ಆಸ್ಪತ್ರೆಗೆ ದಾಖಲು!
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ನಟ ಪೊನ್ನಂಬಳಂಗೆ ಚಿರಂಜೀವಿ 40 ಲಕ್ಷ ನೀಡಿ ಚಿಕಿತ್ಸೆ ಕೊಡಿಸಿದರು. ಇದೀಗ ಪೊನ್ನಂಬಳಂ ಮತ್ತೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಮ್ಮ ಅಣ್ಣ-ಅತ್ತಿಗೆ ವಿಷ ಹಾಕಿ ಕೊಲ್ಲಲು ಪ್ರಯತ್ನಿಸಿದ್ದಾರೆ ಎಂದು, ಎರಡು ಕಿಡ್ನಿಗಳು ಹಾಳಾಗಿ ಹಾಸಿಗೆ ಹಿಡಿದಾಗ ತಮ್ಮ ಕಥೆ ಮುಗಿಯಿತು ಎಂದು ಭಾವಿಸಿದ್ದ ಪೊನ್ನಂಬಳಂ, ಯಾರೂ ಸಹಾಯಕ್ಕೆ ಬಾರದಿದ್ದಾಗ ನಿರಾಶರಾಗಿದ್ದರು. ಕೊನೆಯ ಪ್ರಯತ್ನವಾಗಿ ಚಿರಂಜೀವಿ ಅವರಲ್ಲಿ ಸಹಾಯ ಕೇಳಿದ್ದಾರೆ. ತಕ್ಷಣ ಸ್ಪಂದಿಸಿದ ಚಿರು, ಪೊನ್ನಂಬಳಂ ಅವರಿಗೆ ಬೇಕಾದ ಸಹಾಯ ಮಾಡಿದ್ದಾರೆ.
ಒಂದು-ಎರಡು ಲಕ್ಷ ಕೊಟ್ಟು ಕಳಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಚಿರು ಆಸ್ಪತ್ರೆ ಖರ್ಚುಗಳನ್ನೆಲ್ಲ ಭರಿಸಿದರು. ಕಿಡ್ನಿ ಸಮಸ್ಯೆಯಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ. 40 ಲಕ್ಷ ಖರ್ಚು ಮಾಡಿದರು ಎಂದು ಪೊನ್ನಂಬಳಂ ಹೇಳಿದ್ದಾರೆ. ಕಿಡ್ನಿ ಸಮಸ್ಯೆ ಇದ್ದಾಗ ತಮಿಳು ಚಿತ್ರರಂಗದ ಕೆಲವರು ಡಯಾಲಿಸಿಸ್‌ಗೆ ಮಾತ್ರ ಸಹಾಯ ಮಾಡಿದ್ದರು ಎಂದಿದ್ದಾರೆ. ಕಳೆದ ವರ್ಷ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಪೊನ್ನಂಬಳಂ ಮತ್ತೆ ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ಅವರ ಆರೋಗ್ಯದ ಬಗ್ಗೆ ಆತಂಕ ಮೂಡಿಸಿದೆ. ಈಗ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾರೆ. ಏನಾಗಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.