ತಾಪ್ಸಿ ಪನ್ನು ಬಾಯ್ ಫ್ರೆಂಡ್ ಈ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಸ್ಟಾರ್!
ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ತಾಪ್ಸೀ ಪನ್ನು. ತಮ್ಮ ಅಭಿನಯದಿಂದ ಜನರ ಮನ ಗೆದ್ದಿರುವ ಈ ಬೋಲ್ಡ್ ನಟಿ, ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ. ಆದರೆ ಯಾವುದೇ ಸಿನಿಮಾದ ಕಾರಣದಿಂದ ಅಲ್ಲ. ನಟಿಯ ಲವ್ ಲೈಫ್ ಸಾಕಷ್ಟು ಚರ್ಚೆಯಾಗುತ್ತದೆ. ಇದರ ಬಗ್ಗೆ ತಾಪ್ಸೀ ಸಾರ್ವಜನಿಕವಾಗಿ ಮಾತನಾಡಲಿಲ್ಲ. ತಾಪ್ಸಿಯ ಬಾಯ್‌ಫ್ರೆಂಡ್ ಯಾರು ಗೊತ್ತಾ?
ಬಾಲಿವುಡ್‌ನ ಮೋಸ್ಟ್ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಪರ್ಸನಲ್ ಲೈಫ್ ಸದ್ದು ಮಾಡುತ್ತಿದೆ.
ತಾಪ್ಸಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಆದರೆ ಇದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡಲಿಲ್ಲ.
ಕೆಲವು ದಿನಗಳ ಹಿಂದೆ, ಅವರು ಡೆನ್ಮಾರ್ಕ್ ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿವೆ.
ಮಥಿಯಾಸ್ ಬೋ 2015ರ ಯುರೋಪಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಹಾಗೂ 2012ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು.
'ನನ್ನ ಜೀವನದಲ್ಲಿ ಯಾರೋ ಇದ್ದಾರೆ ಮತ್ತು ನನ್ನ ಕುಟುಂಬಕ್ಕೆ ಈ ಬಗ್ಗೆ ಗೊತ್ತು,' ಎಂದು ತಾಪ್ಸೀ ಪನ್ನು ಅವರ ರಿಲೆಷನ್‌ಶಿಪ್ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ.
2014ರಲ್ಲಿ ಭಾರತದಲ್ಲಿ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ತಾಪ್ಸೀ ಮತ್ತು ಮಥಿಯಾಸ್ ಇಬ್ಬರೂ ಭೇಟಿಯಾದರು. ಮಥಿಯಾಸ್ ತಂಡದ ಭಾಗವಾಗಿದ್ದರೆ, ತಾಪ್ಸಿ ಮತ್ತೊಂದು ತಂಡದ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಕಳೆದ ವರ್ಷ, ಪಿಂಕ್ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ, ಶಗುನ್ (ತಾಪ್ಸೀ ಅವರ ತಂಗಿ) ಇಬ್ಬರೂ ಹೇಗೆ ಭೇಟಿಯಾದರು ಮತ್ತು ತನ್ನ ಕಾರಣದಿಂದ ಇಬ್ಬರು ಪರಿಚಯವಾದರು ಎಂಬುದನ್ನು ಬಹಿರಂಗಪಡಿಸಿದರು.
'ಈಗ, ಅವಳು ಅದೃಷ್ಟಶಾಲಿಯಾಗಿರಬಹುದು. ತಾಪ್ಸೀ ನನಗೆ ಧನ್ಯವಾದ ಹೇಳಬೇಕು ಏಕೆಂದರೆ ನನ್ನ ಕಾರಣದಿಂದ ಅವಳು ಅವನನ್ನು ಭೇಟಿಯಾದಳು ' ಎಂದು ಶಗುನ್ ಹೇಳಿದರು.
ಸಂದರ್ಶನವೊಂದರಲ್ಲಿ, ತಾಪ್ಸೀ ತನ್ನ ಪ್ರೀತಿಯ ಜೀವನದ ಬಗ್ಗೆ ಮಾತನಾಡುತ್ತಾ, 'ನಾನು ಯಾರಿಂದಲೂ ಏನನ್ನೂ ಮುಚ್ಚಿಡಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ಒಬ್ಬರ ಉಪಸ್ಥಿತಿಯನ್ನು ಸ್ವೀಕರಿಸಲು ನನಗೆ ತುಂಬಾ ಹೆಮ್ಮೆ ಇದೆ. ಆದರೆ ಹೌದು, ಅದೇ ಸಮಯದಲ್ಲಿ, ನಾನು ಅದರ ಬಗ್ಗೆ ಹೆಡ್‌ಲೈನ್‌ಗಾಗಿ ಮಾತ್ರ ಮಾತನಾಡುವುದಿಲ್ಲ. ಏಕೆಂದರೆ ಅದು ನಟಿಯಾಗಿ ನಾನು ಗಳಿಸಿದ ವಿಶ್ವಾಸ ಮತ್ತು ಈ ಎಲ್ಲಾ ವರ್ಷಗಳಲ್ಲಿ ನಾನು ಶ್ರಮಪಟ್ಟು ಸಾಧಿಸಿದ್ದನ್ನು ಕಳೆದು ಕೊಳ್ಳುತ್ತೇನೆ. ಹಾಗಾಗಲು ನಾನು ಬಿಡುವುದಿಲ್ಲುಲ,' ಎಂದಿದ್ದಾರೆ ತಪ್ಪಡ್ ನಟಿ.
ನನ್ನ ಜೀವನದಲ್ಲಿ ಯಾರಾದರೂ ಇದ್ದಾರೆ ಮತ್ತು ನನ್ನ ಕುಟುಂಬಕ್ಕೆ ಇದರ ಬಗ್ಗೆ ತಿಳಿದಿದೆ. ನನ್ನ ಕುಟುಂಬ - ನನ್ನ ಸಹೋದರಿ ಮತ್ತು ನನ್ನ ಪೋಷಕರು ಸೇರಿ ಅವರು ನನ್ನೊಂದಿಗೆ ಇರುವ ವ್ಯಕ್ತಿಯನ್ನು ಇಷ್ಟಪಡುತ್ತಾರೆ ಎಂಬುದು ನನಗೆ ಬಹಳ ಮುಖ್ಯ. ಇಲ್ಲದಿದ್ದರೆ ಅದು ನನಗೆ ವರ್ಕ್ ಆಗುವುದಿಲ್ಲ. ನನ್ನ ಪೋಷಕರು ಒಪ್ಪದಿದ್ದರೆ, ಈ ಸಂಬಂಧಕ್ಕೆ ಭವಿಷ್ಯವಿದೆ ಎಂದು ನಾನು ಭಾವಿಸುವುದಿಲ್ಲ, ಎನ್ನುತ್ತಾರೆ ತಾಪ್ಸೀ.
ಮಥಿಯಾಸ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಪ್ಸಿಯ ಸಹೋದರಿ ಶಗುನ್ ಪನ್ನು ಹಾಗೂ ಇತರ ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಎಂಜಾಯ್ ಮಾಡುತ್ತಿರುವುದ ನೋಡಬಹುದು.
'ನನ್ನ ರಾಜಕುಮಾರನನ್ನು ಭೇಟಿಯಾಗುವ ಮೊದಲು ನಾನು ಬಹಳಷ್ಟು ಕಪ್ಪೆಗಳಿಗೆ ಮುತ್ತಿಟ್ಟಿದ್ದೇನೆ', ಎಂದು ಹೇಳಿದ್ದರೊಮ್ಮೆ ತಾಪ್ಸೀ.
ಮದುವೆ ಪ್ಲಾನ್ ಬಗ್ಗೆ ಅವರನ್ನು ಕೇಳಿದಾಗ, 'ನಾನು ಮಕ್ಕಳನ್ನು ಹೊಂದಲು ಬಯಸಿದಾಗ ಮಾತ್ರ ನಾನು ಮದುವೆಯಾಗುತ್ತೇನೆ' ಎಂದು ಹೇಳಿದರು.