MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
Darshan Renukaswamy Case
Farm Chemicals Under Scanner
Kanteerava Stadium Renovation
Karnataka Electoral Roll
Bengaluru Land Scam
  • Home
  • Entertainment
  • Cine World
  • ಬುರ್ಜ್ ಖಲೀಫಾದಲ್ಲಿ ಲಕ್ಸುರಿ ಮನೆ ಇದೆ, ಇವ್ರನ್ನ ಕರೀತಾರೆ ದಕ್ಷಿಣದ ಅಂಬಾನಿ! ಈ ಜನಪ್ರಿಯ ನಟ ಯಾರು?

ಬುರ್ಜ್ ಖಲೀಫಾದಲ್ಲಿ ಲಕ್ಸುರಿ ಮನೆ ಇದೆ, ಇವ್ರನ್ನ ಕರೀತಾರೆ ದಕ್ಷಿಣದ ಅಂಬಾನಿ! ಈ ಜನಪ್ರಿಯ ನಟ ಯಾರು?

ಸಿನಿಮಾ ತಾರೆಯರು ಐಷಾರಾಮಿ ಲೈಫ್ ಸ್ಟೈಲ್ ಎಂಜಾಯ್ ಮಾಡ್ತಾರೆ ಮತ್ತು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದಾರೆ. ಪ್ರೇಕ್ಷಕರನ್ನು ರಂಜಿಸುವುದರ ಹೊರತಾಗಿ, ಬ್ಯುಸಿನೆಸ್, ಇನ್ನೇನೋ ಮಾಡಿ ಹಣ ಮಾಡಿ ಕೋಟ್ಯಾಧೀಶರಾಗ್ತಾರೆ. ದುಬಾರಿಯಾಗಿರೋ ಬುರ್ಜ್ ಖಲೀಫಾದಲ್ಲಿ ಮನೆ ತೆಗೊಂಡಿರೋ ನಟರೂ ಇದ್ದಾರೆ.  

2 Min read
Author : Pavna Das
Published : Aug 08 2024, 02:54 PM IST
Share this Photo Gallery
  • FB
  • TW
  • Linkdin
  • Whatsapp
17

ಇವರು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟ (Superstar Actor). ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಹಲವು ದಶಕಗಳಿಂದ ಮಲಯಾಲಂ ಸಿನಿಮಾ ಇಂಡಸ್ಟ್ರಿಯಲ್ಲಿ ಆಳುತ್ತಿರುವ ನಟ. ಇವರನ್ನ ದಕ್ಷಿಣದ ಮುಖೇಶ್ ಅಂಬಾನಿ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಈ ನಟನ ಹೆಸರಲ್ಲಿ ವಿಶ್ವ ದಾಖಲೆಗಳೂ ಇವೆ. ಅವರು ಬೇರೆ ಯಾರೂ ಅಲ್ಲ ಸಿನಿ ಪ್ರಿಯರ ನೆಚ್ಚಿನ ಲಾಲೆಟ್ಟನ್, ಅಂದ್ರೆ ಮೋಹನ್ ಲಾಲ್. 
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಮೋಹನ್ ಲಾಲ್ (Mohan Lal) ನಾಲ್ಕು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತನ್ನ 20 ನೇ ವಯಸ್ಸಿನಲ್ಲಿ ಮಂಜಿಲ್ ವಿರಿಂಜ ಪೂಕ್ಕಲ್ ಚಿತ್ರದ ಮೂಲಕ ಖಳನಾಯಕನಾಗಿ ಸಿನಿಮಾಗೆ ಪಾದಾರ್ಪಣೆ ಮಾಡಿದ ಮೋಹನ್ ಲಾಲ್, ಹಲವು ಸಮಯ ಖಳನಾಯಕ ಪಾತ್ರಗಳನ್ನು ಮಾಡುವುದನ್ನು ಮುಂದುವರೆಸಿದರು, ನಂತರ ಸೆಕೆಂಡ್ ಲೀಡ್ ಪಾತ್ರಗಳಲ್ಲಿ ಕಾಣಿಸಿಕೊಂಡರು ನಟ. 1980ರಲ್ಲಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡು ಬಳಿಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಸ್ಟಾರ್ ನಟನಾಗಿ ಬೆಳೆದರು. 
 

37

ಮಲಯಾಳಂನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ 64 ವರ್ಷದ ನಟ ಮೋಹನ್ ಲಾಲ್, ಕನ್ನಡದಲ್ಲಿ ಮೈತ್ರಿ ಮತ್ತು ಲವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಇವರು ಹಿಂದಿ, ತೆಲುಗು, ತಮಿಳು ಸಿನಿಮಾದಲ್ಲೂ ಗುರುತಿಸಿಕೊಂಡಿದ್ದಾರೆ. ಈಗ ಮಲಯಾಳಂ ಚಲನಚಿತ್ರೋದ್ಯಮದಲ್ಲಿ(Malayalam Film Industry) ಮತ್ತು ಭಾರತದಲ್ಲಿಯೂ ಅತ್ಯಂತ ಯಶಸ್ವಿ ಮತ್ತು ಹೈ ಪೇಯ್ಡ್ ನಟರಲ್ಲಿ ಒಬ್ಬರು. ಜೊತೆಗೆ ಈ ವಯಸ್ಸಿನಲ್ಲೂ ಬಹು ಬೇಡಿಕೆಯ ನಟ.  
 

47

ಮಾಧ್ಯಮ ವರದಿಗಳ ಪ್ರಕಾರ, ಮೋಹನ್ ಲಾಲ್ ಸುಮಾರು 243 ಕೋಟಿ ರೂ.ಗಳ ಆಸ್ತಿ ಹೊಂದಿದ್ದಾರೆ. ಅಷ್ಟೇ ಅಲ್ಲ ದುಬೈನ ಅತ್ಯಂತ ಎತ್ತರದ ಕಟ್ಟದವಾದ ಬುರ್ಜ್ ಖಲೀಫಾದಲ್ಲಿ (Burj Khalifa) ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿರುವ ದಕ್ಷಿಣ ಭಾರತದ ಅಂಬಾನಿ ಎಂದು ಕರೆಯಲ್ಪಡುವ ನಟ ಮೋಹನ್ ಲಾಲ್. 
 

57

ಮೋಹನ್ ಲಾಲ್ ಬಳಿ ದುಬಾರಿ ಕಾರುಗಳ ಸಂಗ್ರಹವೂ ಇದೆ. ಇವರ ಬಳಿ 20 ಕೋಟಿ ರೂ . ಮೌಲ್ಯದ ಗಾಡಿ ಕೂಡ ಇದೆ. ಮೋಹನ್ ಲಾಲ್ ಕೇವಲ ಒಬ್ಬ ನಟ ಮಾತ್ರ ಅಲ್ಲ, ಉದ್ಯಮಿಯೂ ಹೌದು. ಅವರು ಅನೇಕ ರೆಸ್ಟೋರೆಂಟ್ಸ್ ಮತ್ತು ಮಸಾಲೆ ಪ್ಯಾಕಿಂಗ್ ಕಂಪನಿಗಳನ್ನು ಹೊಂದಿದ್ದಾರೆ. ಜೊತೆಗೆ ನಿರ್ಮಾಣ ಕಂಪನಿಯನ್ನೂ ಹೊಂದಿದ್ದಾರೆ. ಮಹಾರಾಜರಂತಹ ಲಕ್ಸುರಿ ಜೀವನ ನೋಡಿಯೇ, ಲಾಲ್ ಅವರನ್ನ ದಕ್ಷಿಣದ ಮುಖೇಶ್ ಅಂಬಾನಿ ಎಂದು ಕರೆಯಲಾಗುತ್ತದೆ. 
 

67

ಭಾರತೀಯ ಚಿತ್ರರಂಗಕ್ಕೆ (Indian Film) ನೀಡಿದ ಕೊಡುಗೆಗಾಗಿ ಮೋಹನ್ ಲಾಲ್ ಹಲವು ಗೌರವಗಳನ್ನು ಪಡೆದಿದ್ದಾರೆ. ಇವರ ಹೆಸರಲ್ಲಿ ಮೂರು ವರ್ಲ್ಡ್ ರೆಕಾರ್ಡ್ ಸಹ ಇದೆ. ಅವುಗಳು ಯಾವುವೆಂದರೆ 3ಡಿ ಚಲನಚಿತ್ರ ಪ್ರದರ್ಶನದಲ್ಲಿ ಅತಿ ಹೆಚ್ಚು ಹಾಜರಾತಿಯ ಭಾಗವಾಗಿರುವುದು, ಚಾರಿಟಿ ಕೆಲಸವನ್ನ ಮಡುವ ಮೂಲಕ  ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಹೊಂದಿದ ವಿಶ್ವದ ಮೊದಲ ಅಭಿಮಾನಿಗಳ ಸಂಘ ಹೊಂದಿರುವುದು ಮತ್ತುಅತಿ ಉದ್ದದ ಸಾಕ್ಷ್ಯಚಿತ್ರಕ್ಕೆ ಧ್ವನಿ ನೀಡುವುದು ಸೇರಿ ಇವರ ಹೆಸರಲ್ಲಿ ಮೂರು ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ, ಒಂದೇ ವರ್ಷದಲ್ಲಿ 25 ಹಿಟ್ ಸಿನಿಮಾಗಳನ್ನು ನೀಡಿದ ದಾಖಲೆಯೂ ಅವರ ಹೆಸರಿನಲ್ಲಿದೆ. 

77

ಮಾಧ್ಯಮ ವರದಿಗಳ ಪ್ರಕಾರ, ಮೋಹನ್ ಲಾಲ್ ಅತಿ ಹೆಚ್ಚು ಸಂಭಾವನೆ ಪಡೆಯುವ ಮಲಯಾಳಂ ನಟ. ಸೂಪರ್ ಸ್ಟಾರ್ ಒಂದು ಚಿತ್ರಕ್ಕೆ 8 ಕೋಟಿಯಿಂದ 17 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ. ಮೋಹನ್ ಲಾಲ್ 40 ವರ್ಷಗಳಿಂದ ಚಲನಚಿತ್ರೋದ್ಯಮದ ಭಾಗವಾಗಿದ್ದಾರೆ ಮತ್ತು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರು 410 ಕೋಟಿ ರೂ.ಗಳ ನೆಟ್ ವರ್ತ್ ಹೊಂದಿದ್ದಾರೆ ಎಂದು ವರದಿಯಾಗಿದೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Recommended image1
Toxic Pre Release Event: ‘ನಾರ್ತ್‌-ಸೌತ್‌’ ಅಂತ ಕಿತ್ತಾಡೋದು ಬೇಡ: ತೆಲುಗು ನೆಲದಲ್ಲಿ ಯಶ್ ಹವಾ!
Recommended image2
ಸ್ಟೈಲ್​ನಲ್ಲಿ ಅಪ್ಪನನ್ನೇ ಸೈಡ್​ ಹೊಡೀತಿದ್ದಾಳೆ ಯಶ್​ ಪುಟಾಣಿ ಕಂದ: ಕ್ಯೂಟ್​ ವಿಡಿಯೋ ಪುನಃ ವೈರಲ್​
Recommended image3
ಆ ಸ್ಟಾರ್ ಹೀರೋ ರೇಂಜ್ ನೋಡಿ ತುಂಬಾ ಭಯವಾಗಿತ್ತು: ವಜ್ರಕಾಯ ಬೆಡಗಿ ನಭಾ ನಟೇಶ್ ಮಾತು ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved