ಶರ್ಮಿಳಾರ ಮದುವೆಯಾಗಲು ಈ ನಟಿ ಜೊತೆ ಬ್ರೇಕಪ್ ಮಾಡಿಕೊಂಡ ಪಟೌಡಿ!
First Published Apr 1, 2021, 6:03 PM IST
ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಶರ್ಮಿಳಾ ಟ್ಯಾಗೋರ್ ಬಾಲಿವುಡ್‌ನ ಮೋಸ್ಟ್ ಫೇಮಸ್ ಹಾಗೂ ಲವಿಂಗ್ ಕಪಲ್ಸ್‌ನಲ್ಲಿ ಒಬ್ಬರು. ಅಂತರ್‌ಧರ್ಮೀಯ ವಿವಾಹ ದೊಡ್ಡ ವಿಷಯವಾದ ಕಾಲದಲ್ಲೇ ಪ್ರೀತಿಯ ಮುಂದೆ ಯಾವುದೂ ಇಲ್ಲ ಎಂದು ತೋರಿಸದವರು ಶರ್ಮಿಳಾ ಮತ್ತು ಪಟೌಡಿ. ಆದರೆ ಮನ್ಸೂರ್ ಅಲಿ ಖಾನ್ ಅವರು ಶರ್ಮಿಳಾ ಅವರನ್ನು ಮದುವೆಯಾಗುವ ಮೊದಲು ಇನ್ನೊಬ್ಬ ನಟಿಯನ್ನು ಪ್ರೀತಿಸುತ್ತಿದ್ದರು ಎಂಬ ವಿಷಯ ತಿಳಿದಿದೆಯಾ?

60 ಮತ್ತು 70 ರ ದಶಕಗಳಲ್ಲಿ, ಭೇರೆ ಧರ್ಮದವರನ್ನು ಮದುವೆಯಾಗುವುದು ನಿಷೇಧವಾಗಿತ್ತು. ಆ ಕಾಲದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಮತ್ತು ಬಾಲಿವುಡ್ ನಟಿ ಶರ್ಮಿಳಾ ಟ್ಯಾಗೋರ್ ಆಫೇರ್ ವಿಷಯ ಸಾಕಷ್ಟು ಸದ್ದು ಮಾಡಿತ್ತು.

ಆದರೆ ಜನಪ್ರಿಯ ಹಿಂದೂ ಬಂಗಾಳಿ ಕುಟುಂಬದ ಶರ್ಮಿಳಾ ಟ್ಯಾಗೋರ್ ತಮ್ಮ ಪ್ರೀತಿಗಾಗಿ ನವಾಬರನ್ನು ಮದುವೆಯಾದರು.

ಶರ್ಮಿಳಾ ಇಸ್ಲಾಂಗೆ ಮತಾಂತರಗೊಂಡು ಆಯೆಷಾ ಸುಲ್ತಾನಳಾಗಿದ್ದರು.

ಆ ಸಮಯದಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ಟೀಮ್ ಇಂಡಿಯಾದ ಕಿರಿಯ ನಾಯಕರಾಗಿದ್ದರು ಮತ್ತು ಶರ್ಮಿಳಾ ಕ್ರಿಕೆಟ್ ಅಭಿಮಾನಿ.

ವರದಿಗಳ ಪ್ರಕಾರ, ಇಬ್ಬರೂ ಕಾಮನ್ ಫ್ರೆಂಡ್ ಮೂಲಕ ಪರಸ್ಪರ ಭೇಟಿಯಾದರು. ಆದರೆ ನಟಿ ಪಟೌಡಿ ಅವರ ಪ್ರಪೋಸಲ್‌ಗೆ ಯೆಸ್ ಎಂದು ಹೇಳಲು ನಾಲ್ಕು ವರ್ಷಗಳನ್ನು ತೆಗೆದುಕೊಂಡರು. ಅಂತಿಮವಾಗಿ ಡಿಸೆಂಬರ್ 27, 1969 ರಂದು, ಇಬ್ಬರೂ ವಿವಾಹವಾದರು.

ಮೊದಲು, ಮನ್ಸೂರ್ ಸುಂದರ ಬಾಲಿವುಡ್ ನಟಿ ಸಿಮಿ ಗರೆವಾಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅವರು ಅನೇಕ ಇವೆಂಟ್ಸ್ ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಆದರೆ ನಂತರ ಶರ್ಮಿಳಾರಿಗೆ ಮನಸೋತರು ಪಟೌಡಿ.

ಮನ್ಸೂರ್ ಶರ್ಮಿಳಾರ ಬಗ್ಗೆ ಹೇಳಲು ಸಿಮಿಯ ಮನೆಗೆ ಹೋದರು. ಸಾರಿ, ನಮ್ಮಿಬ್ಬರ ನಡುವಿನ ಸಂಬಂಧ ಮುಗಿದಿದೆ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ, ನಾನು ಬೇರೊಬ್ಬರನ್ನು ಭೇಟಿ ಮಾಡಿದ್ದೇನೆ ಎಂದು ಮನ್ಸೂರ್ ಅವರು ಹೇಳಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ಮಾಡಿತ್ತು.

ವಿಷಯವನ್ನು ತಿಳಿಸಿದರೂ, ಸಿಮಿ ಅವರಿಗೆ ನಿಂಬೆ ಪಾನಕ ನೀಡಿದರು. ಸಿಮಿ ಯಾವುದೇ ಸೀನ್ ಕ್ರಿಯೇಟ್ ಮಾಡಲಿಲ್ಲ ಮತ್ತು ಮನ್ಸೂರ್ ಬೇಡ ಎಂದರೂ ಅವರನ್ನು ಕಳುಹಿಸಲು ಹೊರಗೆ ಬಂದಾಗ ಶರ್ಮಿಳಾ ಲಿಫ್ಟ್ ಬಳಿ ನಿಂತಿದ್ದನ್ನು ಸಿಮಿ ಗಮನಿಸಿದರು. ಇಬ್ಬರೂ ಮೌನವಾಗಿ ಪರಸ್ಪರ ಮುಖ ನೋಡಿಕೊಂಡರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

90ರ ದಶಕದಲ್ಲಿ, ಸಿಮಿ ತನ್ನ ಚಾಟ್ ಶೋ ರೆಂಡೆಜ್ವಸ್ ವಿತ್ ಸಿಮಿ ಅಗರೆವಾಲ್‌ನಲ್ಲಿ ಶರ್ಮಿಳಾ ಮತ್ತು ಮನ್ಸೂರ್ ದಂಪತಿಗಳನ್ನು ಆಹ್ವಾನಿಸಿದರು. ಆದರೆ ಅವರ ಶೋ ಸಮಯದಲ್ಲಿ ಹಳೆಯ ವಿಷಯದ ಬಗ್ಗೆ ಮಾತನಾಡಲಿಲ್ಲ

ಸಿಮಿ ಒಮ್ಮೆ ತನ್ನ ವೆಬ್‌ಸೈಟ್‌ನಲ್ಲಿ ಪಟೌಡಿಯ ಭೇಟಿಯ ಬಗ್ಗೆ ಬರೆದಿದ್ದಾರೆ. ಭಾರತ ಕ್ಯಾಪ್ಟನ್ ಆಗಿದ್ದಾಗ ಮನ್ಸೂರ್ ಮತ್ತು ನಾನು ಪರಸ್ಪರ ಡೇಟಿಂಗ್ ಮಾಡಿದ್ದೇವೆ. ಅವರು ಯಾವಾಗಲೂ ಈಸೀ ಗೋಯಿಂಗ್. ನನ್ನ ಶೂಟಿಂಗ್‌ಗಳಿಗೆ ಬರುತ್ತಿದ್ದರು. ಶರ್ಮಿಳಾ ಟ್ಯಾಗೋರ್ ಮತ್ತು ನಾನು ಸೋಶಿಯಲ್ ಫ್ರೆಂಡ್ಸ್ ಮತ್ತು ಸಹೋದ್ಯೋಗಿಗಳು. ನಂತರ ಅವರು ಭೇಟಿಯಾದರು ಮತ್ತು ಉಳಿದವು ನಿಮಗೆ ತಿಳಿದಿದೆ ಎಂದು ಬರೆದಿದ್ದಾರೆ ಸಿಮಿ.

'ಹಳೆಯ ಫ್ರೆಂಡ್ಸ್ ಮೀಟ್ ಆಗಿದ್ದೆ. ವರ್ಷಗಳ ನಂತರ ನಮ್ಮ ಪುನರ್ಮಿಲನದ ಕ್ಷಣಗಳನ್ನು ಆನಂದಿಸುತ್ತಿದೆ. ಮನ್ಸೂರ್ ಬದಲಾಗಿಲ್ಲ ಎಂದು ನಾನು ಕಂಡುಕೊಂಡೆ. ಅವರು ಬುದ್ಧೀವಂತೆ. Rational ವ್ಯಕ್ತಿಯಾಗಿ ಬೆಳೆದಿದ್ದಾರೆ. ಶರ್ಮಿಳಾ ಟ್ಯಾಗೋರ್ ಇನ್ನೂ ತನ್ನ ಛಾರ್ಮ್ ಉಳಿಸಿಕೊಂಡಿದ್ದಾರೆ ಎಂದು ತಮ್ಮ ಚಾಟ್ ಶೋನಲ್ಲಿ ಹೇಳಿದ್ದರು ಸಿಮಿ ಗರೆವಾಲ್.