ಗೋಧ್ರಾ ಗಲಭೆ ಬಗ್ಗೆ ಸತ್ಯ ಈಗ ಹೊರಬರುತ್ತಿದೆ, ಸುಳ್ಳು ಹೆಚ್ಚು ದಿನ ಉಳಿಯುದಿಲ್ಲ: ಪ್ರಧಾನಿ ಮೋದಿ

‘ಸತ್ಯ (ಗೋಧ್ರೋತ್ತರ ಗಲಭೆ) ಕೊನೆಗೂ ಹೊರಬರುತ್ತಿದೆ. ಅದೂ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ. ಸುಳ್ಳು ಕತೆ ಹೆಚ್ಚು ದಿನ ಉಳಿಯುವುದಿಲ್ಲ. ಕ್ರಮೇಣ ಸತ್ಯ ಹೊರಗೆ ಬರಲೇಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಯಾದ ‘ಸಾಬರಮತಿ ರಿಪೋರ್ಟ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Truth Is Coming Out PM Modi On Release Of 'The Sabarmati Report' Movie rav

ನವದೆಹಲಿ (ನ.18): ‘ಸತ್ಯ (ಗೋಧ್ರೋತ್ತರ ಗಲಭೆ) ಕೊನೆಗೂ ಹೊರಬರುತ್ತಿದೆ. ಅದೂ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ. ಸುಳ್ಳು ಕತೆ ಹೆಚ್ಚು ದಿನ ಉಳಿಯುವುದಿಲ್ಲ. ಕ್ರಮೇಣ ಸತ್ಯ ಹೊರಗೆ ಬರಲೇಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬಿಡುಗಡೆಯಾದ ‘ಸಾಬರಮತಿ ರಿಪೋರ್ಟ್‌’ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ಕರಸೇವೆ ಮಾಡಿ ಬಂದ 59 ಕರಸೇವಕರು ಇದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ 2002ರಲ್ಲಿ ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಬಳಿಕ ಇದರ ಸೇಡಿಗೆ ಗುಜರಾತ್ ದಂಗೆ ನಡೆದಿತ್ತು. ಈ ಘಟನೆಗಳಿಗೆ ಕಾರಣವಾದ ವಿಷಯಗಳ ಬಗ್ಗೆ ವಿಕ್ರಾಂತ್‌ ಮಸ್ಸೆ ನಟನೆಯ ಸಾಬರಮತಿ ರಿಪೋರ್ಟ್‌ ಚಿತ್ರ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದೆ.

 

ಏರ್‌ಪೋರ್ಟ್‌ ಟಾಯ್ಲೆಟ್‌ ಅನ್ನೂ ಮೋದಿಗೆ ರಿಸರ್ವ್‌ ಮಾಡ್ತೀರಾ?: ಲಾಂಜ್‌ಗೆ ಬಿಡದ್ದಕ್ಕೆ ಖರ್ಗೆ ಕಿಡಿ

ಅದಕ್ಕೆ ಸಂಬಂಧಿಸಿದ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ತಾವು ಆರೋಪಿಯಾಗಿ ಕ್ಲೀನ್‌ಚಿಟ್‌ ಪಡೆದ ಗೋಧ್ರಾ ಹತ್ಯಾಕಾಂಡದ ವಿಷಯದಲ್ಲಿ ಪ್ರಚಲಿತದಲ್ಲಿರುವ ಕತೆಗಳು ಸುಳ್ಳು ಎಂಬುದನ್ನು ಈ ಸಿನಿಮಾ ಹೊರಗೆಡವಿದೆ ಎಂದು ಶ್ಲಾಘಿಸಿದ್ದಾರೆ.

2002ರಲ್ಲಿ ಗೋಧ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆ ನಡೆದ ವೇಳೆ ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ನಂತರ ಗುಜರಾತ್‌ನಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ದಾಳಿಗಳು ನಡೆದಿದ್ದವು. ಅವುಗಳಿಗೆ ಮೋದಿ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಲಾಗಿತ್ತು.

Latest Videos
Follow Us:
Download App:
  • android
  • ios