- Home
- Entertainment
- Cine World
- Congratulations: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಚಂದ್ರ ಲಕ್ಷ್ಮಣ ಮತ್ತು ಟೋಶ್ ಕ್ರಿಸ್ಟಿ
Congratulations: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಚಂದ್ರ ಲಕ್ಷ್ಮಣ ಮತ್ತು ಟೋಶ್ ಕ್ರಿಸ್ಟಿ
ಮಲಯಾಳಂನ ಖ್ಯಾತ ನಟಿ ಚಂದ್ರ ಲಕ್ಷ್ಮಣ ಮತ್ತು ಟೋಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನವ ದಂಪತಿಗಳ ಫೋಟೋ ವೈರಲ್ ಆಗುತ್ತಿದೆ.ಫೋಟೋಕೃಪೆ: ಚಂದ್ರ ಇನ್‌ಸ್ಟಾಗ್ರಾಂ ಮತ್ತು ಪೇಪರ್‌ಕಾರ್ಟ್ ಮೀಡಿಯಾ

2002ರಲ್ಲಿ ಸ್ಟಾಪ್ violence ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಚಂದ್ರ ಲಕ್ಷ್ಮಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನವೆಂಬರ್ 10ರಂದು ಚಂದ್ರ ಲಕ್ಷ್ಮಣ ಮತ್ತು ಟೋಶ್ ಕ್ರಿಸ್ಟಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಕುಟುಂಬಸ್ಥರು ಮತ್ತು ಸ್ನೇಹಿತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.
'ನಮ್ಮದು inerfaith ಮದುವೆ ಆಗಿರುವ ಕಾರಣ ನಾವು ಎರಡು religions ರೀತಿ ಮದುವೆ ಪ್ಲಾನ್ ಮಾಡಲಾಗಿದೆ. ಐಯ್ಯಂಗಾರ್ ಸಂಪ್ರದಾಯಿಕ ರೀತಿ ತಂದೆಯ ಮಡಿಲ ಮೇಲೆ ಕುಳಿತು ತಾಳಿ ಕಟ್ಟಿಸಿಕೊಳ್ಳುವೆ' ಎಂದು ಈ ಹಿಂದೆ ಸಂದರ್ಶನದಲ್ಲಿ ಚಂದ್ರ ಹೇಳಿದ್ದಾರೆ.
ಟೋಶ್ ಅವರ ಸಂಪ್ರದಾಯದಂತೆ ಕ್ರಿಶ್ಚಿಯನ್ ಮದುವೆ ಹಾಗೂ ಕೇಕ್ ಕಟಿಂಗ್ ಕೂಡ ಮಾಡಲಾಗಿದೆ. ಎರಡು ದೇವರುಗಳು ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂದಿದ್ದಾರೆ.
ಇಬ್ಬರು ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿರುವ ಚಂದ್ರ ಮತ್ತು ಟೋಶ್ ಮದುವೆಗೂ ಎರಡು ದಿನ ಮುನ್ನ ಆನ್‌ಸ್ಕ್ರೀನ್ ಮದುವೆ ಸನ್ನಿವೇಶ ಚಿತ್ರೀಕರಣ ಮಾಡಲಾಗದೆ.
'ಟೋಶ್ ಅವರು ಆನ್‌ಸ್ಕ್ರೀನ್ ಮದುವೆ ಚಿತ್ರೀಕರಣ ನಡೆಯುವ ದಿನ ನಾನು ಅವರ ಹಿಂದೆ ನಿಂತು ತಾಳಿ ಕಟ್ಟಲು ಸಹಾಯ ಮಾಡಿದೆ. ಫಸ್ಟ್ ನೈಟ್ ಸೀನ್ ಕೂಡ ಚಿತ್ರೀಕರಣ ಮಾಡಿದ್ದೀವಿ' ಎಂದು ಚಂದ್ರ ಹೇಳಿದ್ದಾರೆ.
'ಯಾವ ಮದುವೆ ಹೆಣ್ಣಿಗೆ ಈ ರೀತಿ ಅವಕಾಶ ಸಿಗುತ್ತದೆ ಹೇಳಿ? ಮದುವೆಗೂ ಮುನ್ನ ಟೋಶ್ ಅವರಿಗೆ ಒಳ್ಳೆಯ ರಿಹರ್ಸಲ್ ಆಗಿದೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.