- Home
- Entertainment
- Cine World
- ಪರ್ಪಲ್ ಸೀರೆಯಲ್ಲಿ ಮಿಂಚಿದ Anupama Parameshwaran: ರಾಮ್ ಪೋತಿನೇನಿ ಜೊತೆ ಮದುವೆ ಯಾವಾಗ ಅನ್ನೋದಾ?
ಪರ್ಪಲ್ ಸೀರೆಯಲ್ಲಿ ಮಿಂಚಿದ Anupama Parameshwaran: ರಾಮ್ ಪೋತಿನೇನಿ ಜೊತೆ ಮದುವೆ ಯಾವಾಗ ಅನ್ನೋದಾ?
ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ಮನಸ್ಸಿಗೆ ಲಗ್ಗೆ ಹಾಕುತ್ತಾರೆ. ಲೇಟೆಸ್ಟ್ ಆಗಿ ಸೀರೆಯುಟ್ಟು ತೆಗೆಸಿಕೊಂಡಿರೋ ಫೋಟೋಸ್ ಎಲ್ಲೆಡೆ ವೈರಲ್ ಆಗ್ತಿದೆ.

ಮನೋಜ್ಞ ಅಭಿನಯ ಹಾಗೂ ಸೌಂದರ್ಯದಿಂದಲೇ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡವರು ಅನುಪಮಾ ಪರಮೇಶ್ವರನ್. ಇವರು 2015ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಮಲಯಾಳಂ ಚಿತ್ರ 'ಪ್ರೇಮಂ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಅನುಪಮಾ ಪರಮೇಶ್ವರನ್ ಸಾಮಾಜಿಕ ಜಾಲತಾಣಲದಲ್ಲಿ ಹಂಚಿಕೊಂಡ ಫೋಟೋಗಳು ಯಾವುದಕ್ಕೂ ಕಡಿಮೆ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ನೇರಳೆ ಬಣ್ಣದ ಸೀರೆ ಉಟ್ಟು, ಕೂದಲನ್ನು ತುರುಬು ಕಟ್ಟಿ, ಸುತ್ತಲು ಮಲ್ಲಿಗೆ ಮುಡಿದು, ಆಭರಣಗಳನ್ನು ಧರಿಸಿ ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಜೊತೆಗೆ ವಿವಿಧ ಭಂಗಿಯಲ್ಲಿ ನಿಂತು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇವರ ಮುಗ್ಧ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನಟಿಯ ಅಂದಕ್ಕೆ ಲೈಕ್ಸ್ ಮೂಲಕ ಮೆಚ್ಚುಗೆ ನೀಡಿದ್ದು, ತೆಲುಗು ನಟ ರಾಮ್ ಪೋತಿನೇನಿ ಜೊತೆ ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.
ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಅನುಪಮಾ ನಟಿಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪುನೀತ್ ರಾಜ್ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು.
ಹಲವು ಹಿಟ್ ಸಿನಿಮಾಗಳನ್ನು ಕೊಟ್ಟ ಅನುಪಮಾ ಅನೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ಬ್ಯೂಟಿ, ಇನ್ಸ್ಟಾದಲ್ಲಿ 14.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಅನುಪಮಾ ಪರಮೇಶ್ವರನ್ ಸ್ಟಾರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಬಿಡುವು ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಜೊತೆ ಮಾತನಾಡುತ್ತಾರೆ. ಅಭಿಮಾನಿಗಳು ಮುಂದಿಡುವ ಡಿಮ್ಯಾಂಡ್‌ಗಳಿಗೆ ಉತ್ತರ ನೀಡುತ್ತಾರೆ. ಎಲ್ಲರಿಗೂ ತಪ್ಪದೆ ಪ್ರತಿಕ್ರಿಯೆ ನೀಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.