- Home
- Entertainment
- Cine World
- ಮೋಹನ್‌ಲಾಲ್‌ಗೆ ಶ್ರೀಲಂಕಾ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ, ಸ್ಟಾರ್ ನಟ ಅಲ್ಲಿ ಹೋಗಿದ್ಯಾಕೆ?
ಮೋಹನ್‌ಲಾಲ್‌ಗೆ ಶ್ರೀಲಂಕಾ ಸಂಸತ್ತಿನಲ್ಲಿ ಅದ್ಧೂರಿ ಸ್ವಾಗತ, ಸ್ಟಾರ್ ನಟ ಅಲ್ಲಿ ಹೋಗಿದ್ಯಾಕೆ?
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿ ಶ್ರೀಲಂಕಾ ಸಂಸತ್ ಭೇಟಿ. ಪ್ರಧಾನಿ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಅದ್ಧೂರಿ ಸ್ವಾಗತ. ಈ ಅನುಭವವನ್ನು 'ಮರೆಯಲಾಗದ' ಎಂದು ಬಣ್ಣಿಸಿದ ನಟ.

ಮಲಯಾಳಂ (malayalam) ಚಿತ್ರರಂಗದ ಸ್ಟಾರ್ ನಟ ಮೋಹನ್ ಲಾಲ್ (Mohanlal) ಇತ್ತೀಚೆಗೆ ಶ್ರೀಲಂಕಾ ಪ್ರವಾಸದಲ್ಲಿದ್ದರು. ದ್ವೀಪ ರಾಷ್ಟ್ರಕ್ಕೆ ನೀಡಿದ ಈ ಭೇಟಿಯ ಸಂದರ್ಭದಲ್ಲಿ ಅವರಿಗೆ ಶ್ರೀಲಂಕಾ ಸಂಸತ್ತಿನಲ್ಲಿ (Sri Lankan parliament) ಅದ್ಭುತವಾದ ಆತ್ಮೀಯ ಸ್ವಾಗತ ಸಿಕ್ಕಿತು. ಈ ಭೇಟಿಯ ಕೆಲವು ಖಾಸಗಿ ಕ್ಷಣಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಡಾ. ಹರಿಣಿ ಅಮರಸೂರ್ಯ, ಸ್ಪೀಕರ್ ಡಾ. ಜಗತ್ ವಿಕ್ರಮರತ್ನೆ ಮತ್ತು ಉಪ ಸ್ಪೀಕರ್ ಡಾ. ರಿಜ್ವಿ ಸಾಲಿಹ್ ಸೇರಿದಂತೆ ಪ್ರಮುಖ ನಾಯಕರೆಲ್ಲರೊಂದಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಬಗ್ಗೆ ಬರೆದುಕೊಂಡಿರುವ ನಟಮೋಹನ್ ಲಾಲ್ “ನಿಜವಾಗಿಯೂ ಮರೆಯಲಾಗದ ಅನುಭವ” ಎಂದಿದ್ದಾರೆ . ಅವರ ಆಪ್ತ ಸ್ನೇಹಿತ ಇಶಾಂತ ರತ್ನಾಯಕ ಅವರ ಜೊತೆ ಈ ಸಂಸತ್ ಭೇಟಿಗೆ ಹಾಜರಾಗಿದ್ದ ಅವರು, ಆತಿಥ್ಯ, ಆತ್ಮೀಯತೆ ಮತ್ತು ಅರ್ಥಪೂರ್ಣ ಸಂಭಾಷನೆಗಳಿಗಾಗಿ ತಮ್ಮ ಹೃತ್ಪೂರ್ವಕ ಧನ್ಯತೆಯನ್ನು ಸೂಚಿಸಿದ್ದಾರೆ.
ಈ ಬರೆದುಕೊಂಡಿರುವ ಅವರು, "ಶ್ರೀಲಂಕಾ ಸಂಸತ್ತಿನಲ್ಲಿ ನನಗೆ ದೊರೆತ ಆತ್ಮೀಯ ಸ್ವಾಗತ ನನಗೆ ಅಪಾರ ಗೌರವದ ವಿಷಯವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ಡಾ. ಹರಿಣಿ ಅಮರಸೂರ್ಯ, ಸ್ಪೀಕರ್ ಡಾ. ಜಗತ್ ವಿಕ್ರಮರತ್ನೆ, ಉಪ ಸ್ಪೀಕರ್ ಡಾ. ರಿಜ್ವಿ ಸಾಲಿಹ್ ಮತ್ತು ನನ್ನ ಆತ್ಮೀಯ ಸ್ನೇಹಿತ ಇಶಾಂತ್ ರತ್ನಾಯಕ ಅವರನ್ನು ಭೇಟಿಯಾಗಿದ ಅನುಭವ ಯಾವತ್ತೂ ಮರೆಯಲಾಗದು."
64 ವರ್ಷ ವಯಸ್ಸಿನ ಮೋಹನ್ ಲಾಲ್ ಅವರು 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಭಾರತೀಯ ಸಿನಿಮಾರಂಗದಲ್ಲಿ ನಾಲ್ಕು ದಶಕಗಳಷ್ಟು ದೀರ್ಘಾವಧಿಯ ಯಶಸ್ವಿ ಪಯಣ ನಡೆಸಿದ್ದಾರೆ. ಅವರ ಕಲೆ ಮತ್ತು ಸಾಧನೆಗಳಿಗೆ ಭಾರತ ಸರ್ಕಾರವು ಪದ್ಮಶ್ರೀ (2001) ಮತ್ತು ಪದ್ಮಭೂಷಣ (2019) ಪದಕಗಳನ್ನು ನೀಡಿದೆ. ಮಾತ್ರವಲ್ಲ ಅವರು 2009ರಲ್ಲಿ ಭಾರತೀಯ ಸೇನೆಯ ಪ್ರಾದೇಶಿಕ ಘಟಕದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ಹೊಂದಿದ್ದು, ಈ ಗೌರವವನ್ನು ಪಡೆದ ಮೊದಲ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇತ್ತೀಚೆಗಷ್ಟೇ ಅವರು ತರುಣ್ ಮೂರ್ತಿ ನಿರ್ದೇಶನದ ಕ್ರೈಮ್ ಥ್ರಿಲ್ಲರ್ ‘ಥುಡರಮ್’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಇದೀಗ ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಬಹಳ ದಿನಗಳ ನಂತರ ಒಟ್ಟಿಗೆ ನಟಿಸುತ್ತಿರುವ ಚಿತ್ರಕ್ಕಾಗಿ ಮಲಯಾಳಿಗಳು ಕಾತರದಿಂದ ಕಾಯುತ್ತಿದ್ದಾರೆ. ಮಹೇಶ್ ನಾರಾಯಣನ್ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿದೆ.
ಈ ಹೊಸ ಚಿತ್ರವು ಭಾರೀ ಬಜೆಟ್‌ನೊಂದಿಗೆ ವಿಶಾಲ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಇಬ್ಬರೂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ಈ ಚಿತ್ರದ ಪ್ರಮುಖ ಆಕರ್ಷಣೆ. ಚಿತ್ರದಲ್ಲಿ ಇವರ ಜೊತೆಗೆ ಕುಂಚಾಕೋ ಬೋಬನ್, ಫಹದ್ ಫಾಸಿಲ್, ದರ್ಶನಾ ರಾಜೇಂದ್ರನ್, ಗ್ರೇಸ್ ಆಂಟನಿ, ರೆಂಜಿ ಪಣಿಕ್ಕರ್, ರಾಜೀವ್ ಮೆನನ್, ಡ್ಯಾನಿಷ್ ಹುಸೇನ್, ಶಾಹೀನ್ ಸಿದ್ದಿಕ್, ಸನಲ್ ಅಮನ್ ಮತ್ತು ರೇವತಿ ಮುಂತಾದ ಪ್ರಮುಖ ಕಲಾವಿದರೂ ಅಭಿನಯಿಸುತ್ತಿದ್ದಾರೆ.