ಮೇಕಪ್ ಇಲ್ಲದೆ ಜಿಮ್ ಉಡುಪು ಧರಿಸಿ ಬಂದ ಮಲೈಕಾ ಹಿಗ್ಗಾಮುಗ್ಗಾ ಟ್ರೋಲ್!
ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ಯೋಗ ತರಗತಿಯ ಹೊರಗೆ ಕಾಣಿಸಿಕೊಂಡರು. ಜಿಮ್ ಉಡುಪಿನಲ್ಲಿದ್ದ ಅವರ ಫೋಟೋಗಳು ವೈರಲ್ ಆಗಿವೆ.

ಬಾಲಿವುಡ್ ನಟಿ ಮಲೈಕಾ ಅರೋರಾ ಇತ್ತೀಚೆಗೆ ತಮ್ಮ ಯೋಗ ತರಗತಿಯ ಹೊರಗೆ ಸ್ಟೈಲಿಶ್ ಜಿಮ್ ಉಡುಪನ್ನು ಧರಿಸಿ ಕಾಣಿಸಿಕೊಂಡರು, ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಅವರ ಕಾಳಜಿ ಮತ್ತು ಸಮರ್ಪಣೆಯ ಭಾವ ಯಾವಾಗಲೂ ದೃಢವಾಗಿದೆ.
ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದು ಗಮನ ಸೆಳೆಯಿತು. ಈ ಫೋಟೋಗಳು ಸಖತ್ ವೈರಲ್ ಆಗಿವೆ. ಮಲೈಕಾ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದಕ್ಕೆ ವಯಸ್ಸಾಗಿದೆ ಅಂತ ಜನ ಟ್ರೋಲ್ ಮಾಡ್ತಿದ್ದಾರೆ. ಉಡುಗೆ ತೊಡುಗೆ ಬಗ್ಗೆಯೂ ಜನ ಟೀಕೆ ಮಾಡಿದ್ದಾರೆ.
ಮಲೈಕಾ ಅವರನ್ನು ವಯಸ್ಸು ಮತ್ತು ಉಡುಗೆಯ ಕಾರಣಕ್ಕೆ ಆಗಾಗ ಟ್ರೋಲ್ ಮಾಡಲಾಗುತ್ತದೆ. ಅವರಿಗೆ ಇದು ಏನೂ ಪ್ರಭಾವ ಬೀರುವುದಿಲ್ಲ. ಆದರೆ ನಟಿ ಮಾತ್ರ ಈ ಬಗ್ಗೆ ಸ್ವಲ್ಪವೂ ತಲೆ ಕಡೆಸಿಕೊಳ್ಳುವುದಿಲ್ಲ
ಕೆಲವು ವಿಮರ್ಶಕರು ಸಾಮಾಜಿಕ ಮಾಧ್ಯಮಗಳಲ್ಲಿ ಮಲೈಕಾ ಅರೋರಾ ಅವರ ಡ್ರೆಸ್ಸಿಂಗ್ ಶೈಲಿಯನ್ನು ಟೀಕಿಸಿದರು ಮತ್ತು ಅವರ ಜಿಮ್ ಉಡುಪಿನ ಬಗ್ಗೆ ಕಾಮೆಂಟ್ ಮಾಡಿದರು. ಹಿನ್ನಡೆಯ ಹೊರತಾಗಿಯೂ, ಅವರು ತಮ್ಮ ಫ್ಯಾಷನ್ ಆಯ್ಕೆಗಳನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುವುದನ್ನು ಮುಂದುವರೆಸಿದ್ದಾರೆ.
ಮಲೈಕಾ ಅರೋರಾ ಅವರ ಯೋಗ ತರಬೇತುದಾರರು ಸರ್ವೇಶ್ ಶಶಿ, ಬಾಲಿವುಡ್ ನ ಅನೇಕ ಸ್ಟಾರ್ ಗಳಿಗೆ ಇವರು ಯೋಗ ಕಲಿಸುತ್ತಾರೆ. 52 ವರ್ಷದ ನಟಿ ಇಂದಿಗೂ ಸಖತ್ ಫಿಟ್ ನೆಟ್ ಹೊಂದಿದ್ದು, ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.