- Home
- Entertainment
- Cine World
- ಡಿವೋರ್ಸ್ ಆದ್ರೇನು, ಬಾಯ್ಫ್ರೆಂಡ್ ಕೈಕೊಟ್ರೇನು? ನಾನಿನ್ನೂ...ಎನ್ನುತ್ತಲೇ ಶಾಕಿಂಗ್ ಹೇಳಿಕೆ ಕೊಟ್ಟ ಮಲೈಕಾ!
ಡಿವೋರ್ಸ್ ಆದ್ರೇನು, ಬಾಯ್ಫ್ರೆಂಡ್ ಕೈಕೊಟ್ರೇನು? ನಾನಿನ್ನೂ...ಎನ್ನುತ್ತಲೇ ಶಾಕಿಂಗ್ ಹೇಳಿಕೆ ಕೊಟ್ಟ ಮಲೈಕಾ!
ಅರ್ಬಾಜ್ ಖಾನ್ರಿಂದ ಡಿವೋರ್ಸ್ ಪಡೆದು, ಅರ್ಜುನ್ ಕಪೂರ್ ಜೊತೆಗಿನ ಸುದೀರ್ಘ ರಿಲೇಷನ್ ಬ್ರೇಕ್ ಅಪ್ ಮಾಡಿಕೊಂಡ ಬಳಿಕವೂ ಪ್ರಣಯದ ಬಗ್ಗೆ ನಟಿ ಮಲೈಕಾ ಅರೋರಾ ಹೇಳಿದ್ದೇನು?

ಮಲೈಕಾ ಅರೋರಾ ಎಂಬ ಹಾಟ್ ಲೇಡಿ ಸ್ಟೋರಿ
ಸದ್ಯ ಬಾಲಿವುಡ್ನಲ್ಲಿ ಹಾಟ್ ಟಾಪಿಕ್ಗಳಲ್ಲಿ ಒಂದಾಗಿರುವುದು ನಟರಾದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್ ಕುರಿತು. ದಶಕದಿಂದ ರಿಲೇಷನ್ನಲ್ಲಿದ್ದ ಈ ನಟರು ಈಗ ಬ್ರೇಕಪ್ ಆಗಿರುವುದು ಕನ್ಫರ್ಮ್ ಆಗಿದೆ. ಇದಾಗಲೇ ಅರ್ಜುನ್ ಕಪೂರ್ ತಾವು ಸಿಂಗಲ್ ಎಂದು ಹೇಳಿದ್ದಾರೆ. ಹತ್ತು ವರ್ಷ ದೊಡ್ಡವಳಾಗಿರುವ ಮಲೈಕಾ ಜೊತೆ ದಶಕದವರೆಗೆ ಲಿವ್ ಇನ್ ರಿಲೇಷನ್ನಲ್ಲಿದ್ದ ಅರ್ಜುನ್ ಕೂಡ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಇದಾಗಲೇ ಮಲೈಕಾ ಕೂಡ ಹಲವಾರು ರೀತಿಯಲ್ಲಿ ತಾವು ಒಂಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.
ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ
ವಯಸ್ಸು 50 ಆದ್ರೂ ಇನ್ನೂ ಮಾದಕ ನೋಟ, ಬಟ್ಟೆಗಳಿಂದ ಅಭಿಮಾನಿಗಳ ಹೃದಯ ಕದಿಯುತ್ತಿದ್ದಾರೆ ಈ ಬಾಲಿವುಡ್ ನಟಿ. ಈ ಮೂಲಕ ಹಸಿಬಿಸಿ ಲೇಡಿ ಎಂದೇ ಫೇಮಸ್ ಆಗಿದ್ದಾರೆ. ಅರ್ಜುನ್ ಕಪೂರ್ ಡೇಟಿಂಗ್, ಬ್ರೇಕಪ್ ವಿಷಯ ಸದಾ ಹಾಟ್ ಟಾಪಿಕ್ ಆಗಿಯೇ ಇರುತ್ತದೆ.
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಮದುವೆ
ಅಷ್ಟಕ್ಕೂ, ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 1998 ರಲ್ಲಿ ವಿವಾಹವಾದರು, ಆಗ ಮಲೈಕಾ ಸುಮಾರು 25 ವರ್ಷ ವಯಸ್ಸಿನವರಾಗಿದ್ದರು. ನಾಲ್ಕು ವರ್ಷಗಳ ನಂತರ, 2002 ರಲ್ಲಿ, ಅವರು ತಮ್ಮ ಮಗ ಅರ್ಹಾನ್ ಖಾನ್ ಅವರನ್ನು ಸ್ವಾಗತಿಸಿದರು. 18 ವರ್ಷಗಳ ದಾಂಪತ್ಯದ ನಂತರ, ದಂಪತಿಗಳು 2016 ರಲ್ಲಿ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು. ನಂತರ ಮಲೈಕಾ ಅರ್ಜುನ್ ಜೊತೆ ಸಂಬಂಧದಲ್ಲಿ ಬಿದ್ದರು. ಈಗ ಅರ್ಬಾಜ್ ಖಾನ್ ಶುರಾ ಖಾನ್ಗೆ ಮದ್ವೆಯಾಗಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಮಲೈಕಾ ಸದಾ ಹಾಟ್ ಟಾಪಿಕ್
50 ವರ್ಷದ ಮಲೈಕಾ ಮತ್ತು ಅರ್ಜುನ್ ಕಪೂರ್ ಸುದ್ದಿ ಸಿನಿ ಪ್ರಿಯರ ಬಾಯಲ್ಲಿ ಎಂದಿಗೂ ಹಾಟ್ ಟಾಪಿಕ್ಕೇ. ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶಿಸುವ ಮೂಲಕವೇ ಖ್ಯಾತಿ ಗಳಿಸಿದವರು ಇವರು. ಈ ವಯಸ್ಸಿನಲ್ಲಿಯೂ ಇಂದಿಗೂ, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಅಪರೂಪಕ್ಕೆ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಟ್ರೋಲ್ ಆಗುವುದೂ ಇದೆ, ಅಷ್ಟರಮಟ್ಟಿಗೆ ಇವರ ಡ್ರೆಸ್ ಸೆನ್ಸ್ಗೆ ಅಭಿಮಾನಿಗಳು ಒಗ್ಗಿ ಹೋಗಿದ್ದಾರೆ.
ಒಂಟಿಯಾಗಿರುವ ಮಲೈಕಾ
ಇದೀಗ ಒಂಟಿಯಾಗಿರುವ ಮೂಲಕ ಮಲೈಕಾ, ತಾನು ಒಂಟಿ ಒಂಟಿ ಎಂದು ಈಗ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇದೀಗ ಭವಿಷ್ಯದಲ್ಲಿ ಮತ್ತೆ ಮದುವೆಯಾಗುವ ಯೋಚನೆ ಇದೆಯೇ ಎಂದು ಕೇಳಿದಾಗ, ಮಲೈಕಾ, ಅದ್ಯಾಕೆ ಹಾಗೆ ಕೇಳುತ್ತೀರಿ, ನಾನು ಯಾವಾಗಲೂ ಪ್ರೀತಿಯನ್ನು ನಂಬುವವಳು. ಪ್ರಣಯದ ವಿಷಯದಲ್ಲಿ ಸಕತ್ ಹಾಟ್ ಆಗಿಯೇ ಇರುವವಳು. ನಾನು ಪ್ರೀತಿಯನ್ನು ನಂಬುತ್ತೇನೆ. ಆದ್ದರಿಂದ ಇದರ ಬಗ್ಗೆ ಮತ್ತೆ ಪ್ರಶ್ನೆ ಕೇಳಬೇಡಿ ಎನ್ನುವ ಮೂಲಕ ಲವರ್ ಕೈಕೊಟ್ಟರೂ ಮತ್ತೊಬ್ಬನ ಜೊತೆ ಇರೋದನ್ನು ಕನ್ಫರ್ಮ್ ಮಾಡಿದ್ದಾರೆ.
ಟಿ-ಷರ್ಟ್ ಮೇಲೆಯೂ ಬರಹ
ಈ ಹಿಂದೆ ನಟಿ, ಟಿ-ಷರ್ಟ್ ಮೇಲೆಯೂ ಅದೇ ಅರ್ಥ ಕೊಡುವ ಬರಹ ಬರೆದುಕೊಂಡಿದ್ದರು. ನಾನೀಗ ಬೋರಿಂಗ್ ಬೇಬಿ. ದುಡ್ಡು ಮಾಡುವುದು, ಮನೆಗೆ ಬರುವುದು ಅಷ್ಟೇ ಕೆಲಸ ಎಂದಿದ್ದರು. ಇದಾಗಲೇ ಡ್ರಿಂಕ್ಸ್ ಕೂಡ ಮಾಡುವುದಿಲ್ಲ ಎಂದು ನಟಿ ಶಪಥ ಮಾಡಿದ್ದರು. ಆದರೆ ಈ ಟಿ-ಷರ್ಟ್ ಮೇಲೆ ಬರೆದುಕೊಂಡಿರುವುದು ಸಕತ್ ವೈರಲ್ ಜೊತೆ ಟ್ರೋಲ್ ಕೂಡ ಆಗುತ್ತಿದೆ. ಹತ್ತು ವರ್ಷ ಚಿಕ್ಕವನಾದ ಮೇಲೆ ಈಗ ಇನ್ನೆಷ್ಟು ವರ್ಷ ಚಿಕ್ಕವನನ್ನು ಹುಡುಕುತ್ತಿರುವೆ ಎಂದು ಪ್ರಶ್ನಿಸುತ್ತಿದ್ದಾರೆ. ಬೋರ್ ಆದರೆ, ಅದನ್ನು ಹೀಗೆಲ್ಲಾ ತೋರಿಸಿಕೊಳ್ಳಬೇಕಾ? ಇದೇನು ಮೂರನೆಯದ್ದಕ್ಕೆ ಆಫರ್ ಕೊಡ್ತಿದ್ಯಾ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ.
ಅರ್ಜುನ್ ಕಪೂರ್ ಸಮಸ್ಯೆ
ಈಚೆಗಷ್ಟೇ ಅರ್ಜುನ್ ಕಪೂರ್ ತಮಗಿರುವ ಗಂಭೀರ ಕಾಯಿಲೆ ಬಗ್ಗೆ ವಿವರಿಸಿದ್ದರು. 'ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ್ ಕಪೂರ್ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದರು. ಅಲ್ಲಿ ಅವರು ಕಾಯಿಲೆ ಬಗ್ಗೆ ಮಾತನಾಡಿದ್ದಾರೆ.
ಖಿನ್ನತೆಯಿಂದ ಬಳಲುತ್ತಿರುವ ಅರ್ಜುನ್ ಕಪೂರ್
ಖಿನ್ನತೆಯಿಂದ ಬಳಲುತ್ತಿರುವ ತಾವು ಹಶಿಮೊಟೊ ಎಂಬ ಕಾಯಿಲೆಯಿಂದಲೂ ಬಳಲುತ್ತಿರುವುದಾಗಿ ಹೇಳಿ ಕೊಂಡಿದ್ದರು. ಇದು ಥೈರಾಯ್ಡ್ ಕಾಯಿಲೆ ಎಂದು ವಿಶ್ಲೇಷಿಸಿದ್ದರು. ಇದರಲ್ಲಿ ತೂಕವೂ ಹೆಚ್ಚುತ್ತದೆ. ಇದರಿಂದ ನನ್ನ ದೇಹವೂ ಸಾಕಷ್ಟು ತೊಂದರೆ ಎದುರಿಸುತ್ತಿದೆ. ನನಗೆ 30 ವರ್ಷದವನಿದ್ದಾಗ ಈ ಕಾಯಿಲೆ ಬಂದಿತ್ತು. ನನ್ನ ತಾಯಿ ಮೋನಾ ಕಪೂರ್ ಅವರಿಗೂ ಈ ಕಾಯಿಲೆ ಇತ್ತು ಮತ್ತು ಅವರ ಸಹೋದರಿ ಅಂಶುಲಾ ಕಪೂರ್ ಅವರಿಗೂ ಇದೆ ಎಂದು ಅವರು ಬಹಿರಂಗಪಡಿಸಿದ್ದರು.