MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಹಾನಟಿ ಸಾವಿತ್ರಿ ದಕ್ಷಿಣ ಭಾರತದ ಮೊಟ್ಟ ಮೊದಲ ಐಟಂ ಡ್ಯಾನ್ಸರ್; ಈ ಸಿನಿಮಾ ಯಾವುದು ಗೊತ್ತಾ?

ಮಹಾನಟಿ ಸಾವಿತ್ರಿ ದಕ್ಷಿಣ ಭಾರತದ ಮೊಟ್ಟ ಮೊದಲ ಐಟಂ ಡ್ಯಾನ್ಸರ್; ಈ ಸಿನಿಮಾ ಯಾವುದು ಗೊತ್ತಾ?

ಭಾರತದ ಮಹಾನಟಿ ಖ್ಯಾತಿಯ ಸಾವಿತ್ರಿ.. ಅದ್ಭುತ ನಟಿಯಾಗಿ ದಕ್ಷಿಣ ಭಾರತದ ಸಿನಿಮಾದಲ್ಲಿ ಖ್ಯಾತಿ ಗಳಿಸಿದ್ದಾರೆ. ಆದರೆ, ಅವರು ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ಅವರ ಜೀವನ ದುರಂತವಾಗಿ ಅಂತ್ಯಗೊಂಡಿತು.

2 Min read
Author : Sathish Kumar KH
| Updated : Mar 18 2025, 03:18 PM IST
Share this Photo Gallery
  • FB
  • TW
  • Linkdin
  • Whatsapp
16

ಭಾರತಕ್ಕೆ ಮಹಾನಟಿ ಎಂದರೆ ಒಬ್ಬರೇ ಅದು ನಮ್ಮ ಸಾವಿತ್ರಿ ಅವರು. ಅವರು ಬೆಳ್ಳಿ ತೆರೆ ಮೇಲೆ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಸ್ಟಾರ್ ಹೀರೋಗಳಿಗಿಂತ ದೊಡ್ಡ ಇಮೇಜ್‌ನಿಂದ ಮಿಂಚಿದರು. ಸೌತ್ ಸಿನಿಮಾವನ್ನು ತನ್ನ ಕಡೆಗೆ ನೋಡುವಂತೆ ಮೋಡಿ ಮಾಡಿದ್ದರು. ಅಂಥ ಸಾವಿತ್ರಿ ಒಂದು ಐಟಂ ಸಾಂಗ್‌ನಲ್ಲಿ ನಟಿಸಿದ್ದಾರೆ. ಹಾಗಾದರೆ ಆ ಹಾಡು ಯಾವುದು? ಅದು ಯಾವ ಸಿನಿಮಾದ್ದು ಇಲ್ಲಿದೆ ನೋಡಿ.. 

26

ಆರಂಭದಲ್ಲಿ ನಾಟಕಗಳ ಮೂಲಕ ಗುರುತಿಸಿಕೊಂಡ ನಟಿ ಸಾವಿತ್ರಿ ಅವರು ನಂತರ ಸಿನಿಮಾಗಳಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿದ ನಟಿ ಆಗಿದ್ದಾರೆ. ತುಂಬಾ ಜನ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೇಳಿದ್ದಕ್ಕೆ, ಮದ್ರಾಸ್‌ಗೆ (ಚೆನ್ನೈ) ಹೋಗಿ ಪ್ರಯತ್ನಿಸಿದರು. 1949ರಲ್ಲಿ ಒಂದು ಸಿನಿಮಾದಲ್ಲಿ ಚಾನ್ಸ್ ಬಂತು. ಆದರೆ, ಚಿಕ್ಕ ಹುಡುಗಿ ಅಂತ ರಿಜೆಕ್ಟ್ ಮಾಡಿದರು. ಆ ನಂತರ ತೆಲುಗಿ ಸಿನಿಮಾದ 'ಸಂಸಾರಂ` ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪರಿಚಯವಾದರು. 

36

ಆಗ ಸಾವಿತ್ರಿಗೆ ದೊಡ್ಡ ಮಟ್ಟದಲ್ಲಿ ಗುರುತು ಸಿಕ್ಕಿರಲಿಲ್ಲ. ಅದೇ ಸಮಯದಲ್ಲಿ 'ಪಾತಾಳ ಭೈರವಿ' ಯಲ್ಲಿ ಡಾನ್ಸ್ ಮಾಡುವ ಅವಕಾಶ ಇದೆ ಅಂತ ಗೊತ್ತಾಗಿ ಆಡಿಷನ್‌ಗೆ ಹೋದರು. ಸುಮ್ಮನೆ ಹೋಗಿ ಆಫರ್ ಗಿಟ್ಟಿಸಿಕೊಂಡರು. ಎನ್ ಟಿ ಆರ್, ಎಸ್ ವಿ ಆರ್, ಮಾಲತಿ ಒಟ್ಟಿಗೆ ನಟಿಸಿದ ಸಿನಿಮಾ ಇದು. ಕೆ ವಿ ರೆಡ್ಡಿ ನಿರ್ದೇಶನ ಮಾಡಿದರು. ಇದರಲ್ಲಿ ಸಾವಿತ್ರಿ ನರ್ತಕಿಯಾಗಿ ನಟಿಸಿದರು.

46

ಆಗ ನರ್ತಕಿ ಎಂದತೆ ಈಗಿನ ತರಹದ ಐಟಂ ಗರ್ಲ್ ಅಂತ ಹೇಳಬಹುದು. ಪಾರ್ಟಿಯಲ್ಲಿ, ಸಭೆಯಲ್ಲಿ ಡಾನ್ಸ್ ಮಾಡೋದು. ಹಾಗೆ 'ಪಾತಾಳ ಭೈರವಿ' ಸಿನಿಮಾದಲ್ಲಿ ಸಾವಿತ್ರಿ ನರ್ತಕಿಯಾಗಿ ಡಾನ್ಸ್ ಮಾಡಿ ರಂಜಿಸಿದರು. ಎಲ್ಲರ ಗಮನ ಸೆಳೆದರು. ಈ ಸಿನಿಮಾ 1951ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಪಡೆಯಿತು. 'ರಾನಂತೆ ರಾನೆ' ಹಾಡಿನಲ್ಲಿ ಡಾನ್ಸ್ ಮಾಡಿದ ಸಾವಿತ್ರಿಗೆ ಒಳ್ಳೆ ಹೆಸರು ಬಂತು.

56

ಈ ಹಾಡು ಆಗ ದೇಶವನ್ನೇ ಒಂದು ರೌಂಡ್ ಹಾಕಿತ್ತು. ಇದರಿಂದ ಸಾವಿತ್ರಿ ಅವರ ಜಾತಕ ಬದಲಾಯಿತು. ಸಾಲು ಸಾಲಾಗಿ ಆಫರ್‌ಗಳು ಬಂದವು. 'ಪೆಳ್ಳಿ ಚೇಸಿ ಚೂಡು' ಸಿನಿಮಾ ನಟಿಯಾಗಿ ಬ್ರೇಕ್ ನೀಡಿತು. 'ದೇವದಾಸ್' ಸಿನಿಮಾದಿಂದ ಇವರು ಸ್ಟಾರ್ ನಟಿಯಾಗಿಬಿಟ್ಟರು. ನಂತರ ವಾಪಸ್ ಕೆಳಗಿಳಿಯುವ ಸಾಧ್ಯತೆಯೇ ಇಲ್ಲದಷ್ಟು ಎತ್ತರಕ್ಕೆ ಬೆಳೆದರು. ಇದಾದ ನಂತರ ಕನ್ನಡದಲ್ಲಿಯೂ ದೇವರು ಕೊಟ್ಟ ವರ, ತಾಯಿಗೆ ತಕ್ಕ ಮಗ, ಚಂದನದ ಗೊಂಬೆ, ರವಿಚಂದ್ರ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ರಾಜ್‌ಕುಮಾರ್ ಜೊತೆಗೆ ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿದ್ದು ಭಾರೀ ಸದ್ದು ಮಾಡಿತ್ತು.

66

ಆಗ ಸಾಲು ಸಾಲಾಗಿ ಮೂರು ಶಿಫ್ಟ್ ಗಳಲ್ಲಿ ಮೂರು ಸಿನಿಮಾಗಳನ್ನು ಮಾಡುತ್ತಿದ್ದರು ಅಂದ್ರೆ ಅತಿಶಯೋಕ್ತಿ ಅಲ್ಲ. ಹಾಗೆ ಎನ್ ಟಿ ಆರ್, ಎ ಎನ್ ಆರ್ ಅವರಿಗೆ ಸರಿಸಮಾನವಾಗಿ ಬೆಳೆದರು. ಆದರೆ ಜೀವನದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ತನ್ನ ಕೆರಿಯರ್ ಹಾಳು ಮಾಡಿಕೊಂಡರು. ಕೊನೆಗೆ ಕೋಮಾಗೆ ಹೋಗಿ ಸತ್ತರು ಅಂತ ನಿಮಗೆಲ್ಲಾ ಗೊತ್ತೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ದಕ್ಷಿಣ ಭಾರತದ ನಟಿ

Latest Videos
Recommended Stories
Recommended image1
Rashmika-Vijay Wedding; ವಿಜಯ್ ದೇವರಕೊಂಡ ಅತ್ತೆ-ಮಾವ ಯಾರು? ಕೊಡಗಿನ ಬೆಡಗಿಯ ಕಂಪ್ಲೀಟ್ ಡೀಟೇಲ್ಸ್, ನೋಡಿ!
Recommended image2
Rashmika-Vijay Wedding: ರಶ್ಮಿಕಾ-ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭಾಶಯ! 'ಇದು ದೈವಿಕವಾಗಿ ಬರೆಯಲ್ಪಟ್ಟ ಅಧ್ಯಾಯ' ಎಂದ ನಮೋ!
Recommended image3
Rashmika Mandanna, Vijay Deverakonda ವಿವಾಹವಾಗುತ್ತಿರುವ ಲಕ್ಸುರಿ ರೆಸಾರ್ಟ್‌ ಬಾಡಿಗೆ ಎಷ್ಟು ? ಗೆಸ್ಟ್‌ಗಳ್ಯಾರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved