ಬಾಲಿವುಡ್ ಬ್ಯೂಟಿ ಮಾಧುರಿಗೆ ಪಿಜ್ಜಾ ಮಾಡಿ ತಿನ್ನಿಸಿದ ಪತಿ ಡಾಕ್ಟರ್‌ ನೆನೆ

First Published Feb 28, 2021, 3:36 PM IST

ಬಾಲಿವುಡ್‌ ನಟಿ ಮಾಧುರಿ ಧಿಕ್ಷೀತ್‌ ಶೀಘ್ರದಲ್ಲೇ ಡ್ಯಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ದಿವಾನೆ ಮೂರನೇ ಸೀಸನ್‌ನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ, ಮಾಧುರಿ ಮನೆಯಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. 11 ತಿಂಗಳುಗಳಿಂದ ಮನೆಯಲ್ಲಿರುವ ತನ್ನ ಹೆಂಡತಿಯನ್ನು ಮೆಚ್ಚಿಸಲು, ಪತಿ ಡಾ.ಶ್ರೀರಾಮ್ ನೆನೆ  ವಿವಿಧ ಭಕ್ಷ್ಯಗಳನ್ನು ತಯಾರಿಸುತ್ತಿದ್ದಾರೆ. ಇತ್ತೀಚೆಗೆ ಡಾ. ನೆನೆ ಅವರು ತಮ್ಮ ಹೆಂಡತಿಗೆ ಪಿಜ್ಜಾಗಳನ್ನು ತಯಾರಿಸಿ  ತಮ್ಮ ಕೈಗಳಿಂದ ತಿನ್ನಿಸಿದರು. ಡಾ. ನೆನೆ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ  ಫೋಟೋ ಸಖತ್‌ ವೈರಲ್‌ ಆಗಿದೆ.