ತುಂಡು ಬಟ್ಟೆ, ಮಾಡರ್ನ್ ಡ್ರೆಸ್ ಏನೂ ಇಲ್ಲ… ಹೀಗೆ ನಡೆದಿತ್ತು ನೋಡಿ 1990ರ ಫಿಲಂ ಫೇರ್ ಕಾರ್ಯಕ್ರಮ
ಫಿಲಂ ಫೇರ್ ಅವಾರ್ಡ್ ಗಳು ಮನರಂಜನೆಯ ಪ್ರಮುಖ ಭಾಗವಾಗಿದೆ. ರೆಡ್ ಕಾರ್ಪೆಟ್ ಮೇಲೆ ತಾರೆಯರು ನಡೆಯುವುದನ್ನು ನೋಡುತ್ತಾ ನಾವು ಬೆಳೆದಿದ್ದೇವೆ. ಇದೀಗ 90 ರ ದಶಕದ ಈ ಥ್ರೋಬ್ಯಾಕ್ ಫಿಲಂ ಫೇರ್ ವಿಡಿಯೋ ಸದ್ದು ಮಾಡ್ತಿದೆ.
35 ನೇ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭ (filmare award) 1990 ರಲ್ಲಿ ನಡೆದಿತ್ತು. ಇಂದಿನ ಹಾಗೆ ಅಂದು ಫಿಲಂ ಫೇರ್ ಅನ್ನೋದು ಫ್ಯಾಷನ್ ಶೋ ಆಗಿರಲಿಲ್ಲ. ಅದೊಂದು ಫ್ಯಾಮಿಲಿ ಫಂಕ್ಷನ್ ತರ ಇತ್ತು. ಆದರೆ ಇಂದು ಸಂಪೂರ್ಣವಾಗಿ ಬದಲಾಗಿದೆ. ಮೊದಲಿನ ಫಿಲಂ ಫೇರ್ ಹೇಗಿತ್ತು ಅನ್ನೋದರ ಜಲಕ್ ನೋಡೋಣ.
ತನ್ನ ನಗು, ಅದ್ಭುತ ನಟನೆ ಮತ್ತು ಜಬರ್ ದಸ್ತ್ ನೃತ್ಯದಿಂದ ನಮ್ಮ ಹೃದಯವನ್ನು ಕದ್ದ ಮಾಧುರಿ ದೀಕ್ಷಿತ್ (Madhuri Dixith) ಇಂದಿನಂತೆ ಅಂದು ಕೂಡ ತುಂಬಾನೆ ಸುಂದರವಾಗಿ ಕಾಣಿಸ್ತಿದ್ರು ಅಲ್ವಾ?
ಬಾಲಿವುಡ್ ಬ್ಯೂಟಿ ಶ್ರೀದೇವಿಯವರನ್ನ (Sridevi) ನೋಡಿದ್ರಾ? ಅಂದಿಗೂ ಅದೇ ಸೌಂದರ್ಯ. ಗುಲಾಬಿ ಮತ್ತು ಹಸಿರು ಬಣ್ಣದ ಜರತಾರಿ ಸೀರೆ, ಸೊಂಟಕ್ಕೆ ಪಟ್ಟಿ, ಮುಡಿ ತುಂಬಾ ಮಲ್ಲಿಗೆ ಹೂವು ಮುಡಿದು ಎಷ್ಟು ಚೆನ್ನಾಗಿ ಕಾಣಿಸ್ತಿದ್ದಾರೆ ಅಲ್ವಾ?
ಅನಿಲ್ ಕಪೂರ್ (Anil Kapoor) ಹೇಗಿದ್ರೂ ನೋಡಿ… ಈವಾಗ್ಲೂ ಹಾಗೆ ಇದ್ದಾರೆ ಅಲ್ವಾ? ಅಥವಾ ಇನ್ನೂ ಚಿಕ್ಕವರಾಗಿರೋ ಹಾಗಿದ್ದಾರೆ ಈಗ.
ಮೊಗ್ಯಾಂಬೋ ಖುಷ್ ಹುವಾ ಎನ್ನುತ್ತಾ ಮಿ. ಇಂಡಿಯಾ (Mr. India) ದಲ್ಲಿ ವಿಲನ್ ಆಗಿ ಬಾಲಿವುಡ್ ನಲ್ಲಿ ರಾರಾಜಿಸಿದ್ದ ಅಮ್ರಿಶ್ ಪುರಿ (Amreesh Puri)
ಎವರ್ ಗ್ರೀನ್ ಬ್ಯೂಟಿಯಾಗಿರುವ ನಟಿ ರೇಖಾ (evergreen heroine Rekha) ಅಂದೂ ಕೂಡ ತಮ್ಮ ಸ್ಟೈಲಿಶ್ ಲುಕ್ ಮೂಲಕ ಮಿಂಚುತ್ತಿರೋದನ್ನು ಕಾಣಬಹುದು.
ನಟ ಜಾಕಿ ಶ್ರಾಫ್ (Jackie Shroff) ಎಷ್ಟು ಸ್ಟೈಲ್ ಆಗಿದ್ರು ಅಲ್ವಾ? ಅವರ ಕೈಯಲ್ಲಿರೂ ಪುಟ್ಟ ಮಗು ಟೈಗರ್ ಶ್ರಾಫ್. ಈ ಫಿಲಂ ಫೇರ್ ನಲ್ಲಿ ಜಾಕಿಶ್ರಾಫ್ ನೆಲದ ಮೇಲೆ ಮಲಗಿ ಮಗುವನ್ನು ಆಡಿಸುತ್ತಿದ್ದ ವಿಡಿಯೋ ಕೂಡ ಇದೆ.
ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ (Aamir Khan), ತುಂಬಾನೆ ಹ್ಯಾಂಡ್ಸಮ್ ಆಗಿದ್ರು, ಇವರು ತಮ್ಮ ಜೊತೆ ಹುಡುಗನೊಬ್ಬನನ್ನು ಜೊತೆಯಾಗಿಸಿದ್ದಾರೆ, ಇದು ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಇರಬಹುದೇನೋ ಗೊತ್ತಿಲ್ಲ.
ಟಿಪ್ ಟಿಪ್ ಬರ್ಸಾ ಪಾನಿಯಿಂದ ಹಿಡಿದು ಕಿಸಿ ಡಿಸ್ಕೋ ಮೇ ಜಾಯೆವರೆಗೆ ರವೀನಾ ಟಂಡನ್ (Raveena Tandon) ಅವರ ಡ್ಯಾನ್ಸ್ ಗೆ ಮಾರು ಹೋಗದವರು ಯಾರಿದ್ದಾರೆ? 30 ವರ್ಷಗಳ ಹಿಂದೆ ನಟಿ ಹೇಗಿದ್ರು ನೋಡಿ.
1963 ರಿಂದ ತಮ್ಮ ಹಾಡುಗಳಿಂದ ಮ್ಯಾಜಿಕ್ ಮಾಡುತ್ತಿದ್ದ ಗುಲ್ಜಾರ್ ಸಾಬ್ ತುಂಬಾ ಯಂಗ್ ಮತ್ತು ಆಕರ್ಷಕವಾಗಿ ಕಾಣುತ್ತಿದ್ದರು ಅಂದ್ರೆ ತಪ್ಪೇನಿಲ್ಲ ಬಿಡಿ.
ಬಾಲಿವುಡ್ ನ ಶಹೆನ್ ಷಾ ಅಮಿತಾಬ್ ಬಚ್ಚನ್ ((Amitab Bacchan) ತಮ್ಮ ಮುದ್ದಿನ ಮಗಳು ಶ್ವೇತಾ ಬಚ್ಚನ್ ಜೊತೆ ಹೆಜ್ಜೆ ಹಾಕುತ್ತಿರೋದನ್ನು ಕಾಣಬಹುದು.
ವೈಟ್ ಎ ಮಿನಿಟ್… ಈ ಯಂಗ್ ಮ್ಯಾನ್ ಯಾರು ನೋಡಿ…. ಯುವಕ ಅಭಿಷೇಕ್ ಬಚ್ಚನ್ (Amitab Bacchan) ಬಿಳಿ ಟಕ್ಸ್ ನಲ್ಲಿ ಎಷ್ಟು ಆಕರ್ಷಕವಾಗಿ ಕಾಣುತ್ತಿದ್ರು ಅಲ್ವಾ? ಇವರು ಅಮ್ಮನ ಮುದ್ದಿನ ಮಗ.
1990ರ ಆ ವರ್ಷ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದೆ ಜೂಹಿ ಚಾವ್ಲಾ (Juhi Chawla). ಎಷ್ಟು ಮುದ್ದಾಗಿ ಕಾಣಿಸ್ತಿದ್ದಾರೆ ಅಲ್ವಾ? ಅವರ ಸೌಂದರ್ಯ ಈಗ ಮತ್ತಷ್ಟು ಹೆಚ್ಚಾದಂತಿದೆ.
ತಮ್ಮ ಮೊದಲ ಫಿಲಂ ಫೇರ್ ಕಾರ್ಯಕ್ರಮದಲ್ಲಿ ನಟಿ ಭಾಗ್ಯಶ್ರೀ (Bhagyashree) ಹೇಗೆ ಕಾಣಿಸ್ತಿದ್ದಾರೆ ನೋಡಿ. ಇದಾಗಿ 33 ವರ್ಷಗಳ ನಂತ್ರ ನಟಿ ಸಿನಿಮಾದಲ್ಲಿ ನಟಿಸಿದ್ದಾರೆ. ವರ್ಷಗಳು ಎಷ್ಟು ಬೇಗ ಓಡುತ್ತಿವೆ ಅಲ್ವಾ?
ಬಾಲಿವುಡ್ ನಟ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಅನುಪಮ್ ಖೇರ್ (Anupam Kher), ಅಂದು ಹಾಗೆಯೇ… ಇಂದಿಗೂ ನಟ ಹಾಗೇನೆ ಇದ್ದಾರೆ. ಅದೇ ನಗು, ಅದೇ ಮುಖ. ಹೌದಲ್ವಾ?
ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan), ಚಿಗುರು ಮೀಸೆಯ ಹುಡುಗ ಅಪ್ಪ ಸಲೀಂ ಖಾನ್ ಜೊತೆ, ಎಷ್ಟೊಂದು ಕ್ಯೂಟ್ ಆಗಿದ್ರಲ್ವಾ?