ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ; ಇಲ್ಲಿವೆ ಫೋಟೋಗಳು
ಬೆಂಗಳೂರಿಗೆ ಆಗಮಿಸಿರುವ ವಿಜಯ್ ದೇವರಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸದರು. ವಿಜಯ್ ದೇವರತಕೊಂಡಗೆ ಲೈಗರ್ ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಸಾಥ್ ನೀಡಿದರು.
ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾದ ರಿಲೀಸ್‌ನ ಬ್ಯುಸಿಯಲ್ಲಿದ್ದಾರೆ. ಸದ್ಯ ಲೈಗರ್ ಸಿನಿಮಾ ಪ್ರಮೋಷನ್ ಮಾಡುತ್ತಿದ್ದಾರೆ. ದೇಶದಾದ್ಯಂತ ವಿಜಯ್ ಲೈಗರ್ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಉತ್ತರ ಭಾರತದ ಕಡೆ ಪ್ರಚಾರ ಮಾಡಿದ್ದ ವಿಜಯ್ ಇದೀಗ ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಇಂದು (ಆಗಸ್ಟ್ 19)ರಂದು ಬೆಂಗಳೂರಿಗೆ ಆಗಮಿಸಿರುವ ವಿಜಯ್ ದೇವರಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಕಂಠೀರವ ಸ್ಟುಡಿಯೋ ಕಡೆ ತೆರಳಿದ ವಿಜಯ್ ದೇವರಕೊಂಡ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸದರು. ವಿಜಯ್ ದೇವರತಕೊಂಡಗೆ ಲೈಗರ್ ಸಿನಿಮಾದ ನಾಯಕಿ ಅನನ್ಯಾ ಪಾಂಡೆ ಸಾಥ್ ನೀಡಿದರು.
ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಇಬ್ಬರೂ ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಮಾಧಿ ಪ್ರದಕ್ಷಿಣೆ ಹಾಕಿ, ಬಳಿಕ ನಮಸ್ಕರಿಸಿದರು. ಅನನ್ಯಾ ಮತ್ತು ವಿಜಯ್ ದೇವರಕೊಂಡ ಅವರ ಪೂಜೆಯ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾವುದೇ ಸ್ಟಾರ್ ಬೆಂಗಳೂರಿಗೆ ಬಂದರೇ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ಇದೀಗ ವಿಜಯ್ ಕೂಡ ಬೆಂಗಳೂರನಲ್ಲಿ ಪ್ರಚಾರ ಪ್ರಾರಂಭ ಮಾಡುವ ಮೊದಲು ಪುನೀತ್ ಸಮಾಧಿಗೆ ಭೇಟಿ ನೀಡಿದರು. ಪವರ್ ಸ್ಟಾರ್ ಪುನೀತ್ ರಾಜ್ ಎಲ್ಲಾ ಭಾಷೆಯ ಸ್ಟಾರ್‌ಗಳ ಜೊತೆಯೂ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದರು. ಹಾಗಾಗಿ ಅಪ್ಪು ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಬೇರೆ ಭಾಷೆಯ ಕಲಾವಿದರು ಬೆಂಗಳೂರಿಗೆ ಬಂದಾಗ ಅಪ್ಪು ನೋಡಲು ಸಮಾಧಿಗೆ ತೆರಳುತ್ತಾರೆ.
ಲೈಗರ್ ಸಿನಿಮಾ ಬಗ್ಗೆ ಹೇಳುವುದಾರೆ, ಲೈಗರ್ ಸಿನಿಮಾ ಆಗಸ್ಟ್ 25ರಂದು ಅದ್ದೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರು ಮೊದಲ ಬಾರಿ ಹೀರೋ ಆಗಿ ನಟಿಸಿದ ಅಪ್ಪು ಚಿತ್ರಕ್ಕೂ ಪುರಿ ಜಗನ್ನಾಥ್ ಆ್ಯಕ್ಷನ್-ಕಟ್ ಹೇಳಿದ್ದರು. ಪುರಿ ಜಗನ್ನಾಥ್ ಅವರಿಗೂ ಡಾ. ರಾಜ್‌ಕುಮಾರ್ ಕುಟುಂಬದ ಜೊತೆಗೆ ಒಡನಾಟ ಇದೆ.
ಲೈಗರ್ ಚಿತ್ರದಲ್ಲಿ ಚಿತ್ರದಲ್ಲಿ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ಸ್ಟಾರ್ ಅನನ್ಯಾ ಪಾಂಡೆ ನಟಿಸಿದ್ದಾರೆ. ಬಾಕ್ಸರ್ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ತಾಯಿ ಪಾತ್ರಕ್ಕೆ ರಮ್ಯಾ ಕೃಷ್ಣ ಬಣ್ಣ ಹಚ್ಚಿದ್ದಾರೆ. ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಈಗಾಗಲೇ ಟ್ರೇಲರ್ ಮತ್ತು ಹಾಡುಗಳು ಸಿನಿಮಾದ ಮೇಲಿನ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಹೊಂದಿದೆ.