ಹುಟ್ಟೂರು ಮಂಗಳೂರಲ್ಲಿ ಕೃತಿ ಶೆಟ್ಟಿ… ಕುಟುಂಬದ ಜೊತೆ ಭೂತ ಕೋಲದಲ್ಲಿ ಭಾಗಿ
ಉಪ್ಪೇನ ಚಿತ್ರದ ಮೂಲಕ ತೆಲುಗು ಸಿನಿಮಾದಲ್ಲಿ ಸದ್ದು ಮಾಡಿದ ಮಂಗಳೂರು ಬೆಡಗಿ ಕೃತಿ ಶೆಟ್ಟಿ ಹುಟ್ಟೂರಿಗೆ ತೆರಳಿ ಭೂತಕೋಲದಲ್ಲಿ ಭಾಗಿಯಾಗಿದ್ದಾರೆ.

ಮಂಗಳೂರಿನಲ್ಲಿ ಹುಟ್ಟಿ, ಮುಂಬೈನಲ್ಲಿ ಬೆಳೆದು ಸದ್ಯ ತಮಿಳು ಮತ್ತು ತೆಲುಗು ಸಿನಿಮಾ ಇಂಡಷ್ಟ್ರಿಯಲ್ಲಿ ಸದ್ದು ಮಾಡುತ್ತಿರುವ ಬ್ಯೂಟಿಫುಲ್ ಹುಡುಗಿ ಕೃತಿ ಶೆಟ್ಟಿ (Krithi Shetty). ಈ ನಟಿ ಹೆಚ್ಚಾಗಿ ತಮ್ಮ ಮುದ್ದಾದ ಲುಕ್ ಮೂಲಕ ಸದ್ದು ಮಾಡುತ್ತಿರುತ್ತಾರೆ.
ಹಿಂದಿಯ ಸೂಪರ್ 30 ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ಶೆಟ್ಟಿ, ಎರಡನೇ ಸಿನಿಮಾ ಉಪ್ಪೇನಾ (Uppena) ಮೂಲಕ ರಾತ್ರೋ ರಾತ್ರಿ ಜನಪ್ರಿಯತೆ ಪಡೆದರು. ಕೃತಿ ಅಭಿನಯ, ಬ್ಯೂಟಿ, ಬೋಲ್ಡ್ ನೆಸ್ ಗೆ ವೀಕ್ಷಕರು ಮನ ಸೋತಿದ್ದರು.
ಉಪ್ಪೇನಾ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ ಸಹ ಕೃತಿ ಶೆಟ್ಟಿಗೆ ಅಷ್ಟೆನೂ ಹೆಸರು ತಂದುಕೊಟ್ಟಿಲ್ಲ. ಆದರೂ ಸದ್ಯದ ಬ್ಯುಸಿ ನಟಿ ಕೃತಿ. ಇವರು ಇದೀಗ ತಮಿಳಿನಲ್ಲಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಒಂದು ಮಲಯಾಲಂ ಸಿನಿಮಾದಲ್ಲೂ ನಟಿಸಿದ್ದಾರೆ.
ತಮಿಳಿನಲ್ಲಿ ನಟ ಕಾರ್ತಿ ಜೊತೆ ವಾ ವಾದಿಯಾರ್, ಲವ್ ಇನ್ಶುರೆನ್ಸ್ ಕಂಪನಿ, ರವಿ ಮೋಹನ್ ಜೊತೆ ಜಿನ್ನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಳು ಈ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.
ಕೃತಿ ಶೆಟ್ಟಿ ಮಂಗಳೂರು ಮೂಲದವರಾಗಿದ್ದು, ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸಹ ತಮ್ಮ ಮೂಲ ಸಂಪ್ರದಾಯವನ್ನು ಮರೆತಂತಿಲ್ಲ. ಯಾಕಂದ್ರೆ ಈ ಬಾರಿ ನಟಿ ಹುಟ್ಟೂರಿಗೆ ತೆರಳಿ ಭೂತ ಕೋಲದಲ್ಲಿ ಭಾಗಿಯಾಗಿದ್ದಾರೆ.
ಪ್ರತಿ ವರ್ಷ ಕೃತಿ ಶೆಟ್ಟಿ ಕುಟುಂಬದ ಮನೆಯಲ್ಲಿ ಭೂತ ಕೋಲ ನಡೆಯುತ್ತಂತೆ. ಆದರೆ ನಟಿ ಬ್ಯುಸಿಯಾಗಿರೋದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನಟಿ ಈ ವರ್ಷ ಫ್ರೀ ಮಾಡಿಕೊಂಡು ಬಂದು ಕುಟುಂಬದ ಮನೆಯಲ್ಲಿ ನಡೆದ ಕೋಲದಲ್ಲಿ ಭಾಗಿಯಾಗಿದ್ದಾರೆ.
ಮಂಗಳೂರಿನಲ್ಲಿ ಕಳೆದ ಸುಂದರ ಸಮಯದ ಫೋಟೊಗಳನ್ನು ನಟಿ ಶೇರ್ ಮಾಡಿದ್ದು, ಇಲ್ಲಿನ ಬಾಳೆಲೆ ಊಟ, ಕುಟುಂಬದ ಜೊತೆಗೆ ಕಳೆದ ಸಮಯ, ಸಾಂಪ್ರದಾಯಿಕವಾಗಿ ರೆಡಿಯಾಗಿದ್ದು, ಭೂತ ಕೋಲದ ವಿಡೀಯೋ, ಐಸ್ ಕ್ರೀಂ ಫೋಟೊಗಳನ್ನು ಶೇರ್ ಮಾಡಿದ್ದು, ಮಂಗಳೂರು ಟ್ರಿಪ್ ನ ಸುಂದರವಾದ ಮೆಮೊರಿಗಳು ಎಂದು ಬರೆದುಕೊಂಡಿದ್ದಾರೆ.