ಕೇವಲ 22 ವರ್ಷದ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಂಡ ರಜನಿಕಾಂತ್; ಕಾರಣ ಕೇಳಿ ಶಾಕ್!
ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಮಾಸ್ ಸ್ಟಾರ್ ಧನುಷ್ ಇಬ್ಬರೂ ಅದ್ಭುತ ಕಲಾವಿದರು ಎಂಬುದು ಎಲ್ಲಿರಿಗೂ ತಿಳಿದಿರುವ ವಿಚಾರವೇ ಹೌದು. ಆದರೆ ಧನುಷ್‌ನನ್ನೇ ಅಳಿಯನಾಗಿ ಮಾಡಿಕೊಳ್ಳಲು ಕಾರಣ ಗೊತ್ತಾ?
44 ಸಿನಿಮಾಗಳಲ್ಲಿ ಅಭಿನಯಿಸಿರುವ ಧನುಷ್ 22 ವರ್ಷವಿದ್ದಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
13 ಸೈಮಾ ಅವಾರ್ಡ್, 9 ವಿಜಯ ಅವಾರ್ಡ್, 7 ಫಿಲ್ಮ್‌ಫೇರ್, 5 ವಿಕಟನ್ ಪ್ರಶಸ್ತಿ, 5 ಎಡಿಸನ್ ಪ್ರಶಸ್ತಿ ಹಾಗೂ 3 ನ್ಯಾಷನಲ್ ಅವಾರ್ಡ್ ಪಡೆದುಕೊಂಡಿರುವ ಹೆಗ್ಗಳಿಕೆ ಇವರದು.
ಧನುಷ್ ಕುಟುಂಬಕ್ಕೆ ಸಿನಿಮಾ ನಂಟಿದೆ.
ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕನಾಗಿರುವ ಕಸ್ತೂರಿ ರಾಜನ್ ಅವರ ಮಗ ಧನುಷ್.
ಮದುವೆಯಾಗುವ ಮುನ್ನ ಧನುಷ್ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಧನುಷ್ ಮತ್ತು ಐಶ್ವರ್ಯ ತಂದೆಯಂದಿರು ಮುಖಾಂತರ ಪರಿಚಯವಾದರು.
ಸ್ನೇಹಿತರಾಗಿದ್ದು ಕೆಲವೇ ತಿಂಗಳಲ್ಲಿ ಪ್ರೀತಿಸಲು ಆರಂಭಿಸಿದ್ದರು.
ಹಲವರು ಅನೇಕ ಅಪಪ್ರಚಾರಗಳನ್ನು ಮಾಡುತ್ತಿದ್ದರೂ ಧನುಷ್ ತನಗಿಂತ ದೊಡ್ಡ ವಯಸ್ಸಿನ ಹುಡುಗಿಯನ್ನು ಮದುವೆಯಾಗಲು ತೊಂದರೆಯಿಲ್ಲ ಎಂದಿದ್ದರು.
ಕಸ್ತೂರಿ ರಾಜ್ ಕುಟುಂಬದವರ ಜೊತೆ ಆಪ್ತತೆ ಹೊಂದಿದ್ದ ಕಾರಣ ರಜನಿಕಾಂತ್ ಮದುವೆಗೆ ಒಪ್ಪಿಕೊಂಡರು ಎನ್ನಲಾಗಿದೆ.
ಮದುವೆಯಾದಾಗ ಧನುಷ್‌ಗೆ ಕೇವಲ 22 ವರ್ಷ ಹಾಗೂ ಐಶ್ವರ್ಯಗೆ 25 ವರ್ಷವಾಗಿತ್ತು.