- Home
- Entertainment
- Cine World
- Puneeth Rajkumar: ಅಪ್ಪು ಪತ್ನಿ ಅಶ್ವಿನಿ, ಅಣ್ಣ ಶಿವರಾಜ್ ಕುಮಾರ್ ಭೇಟಿ ಮಾಡಿದ ವಿಶಾಲ್
Puneeth Rajkumar: ಅಪ್ಪು ಪತ್ನಿ ಅಶ್ವಿನಿ, ಅಣ್ಣ ಶಿವರಾಜ್ ಕುಮಾರ್ ಭೇಟಿ ಮಾಡಿದ ವಿಶಾಲ್
Puneeth Rajkumar: ಪವರ್‌ಸ್ಟಾರ್ ಪತ್ನಿಯನ್ನು ಭೇಟಿಯಾದ ನಟ ವಿಶಾಲ್ ಶಿವರಾಜ್ ಕುಮಾರ್ ಮನೆಗೂ ಭೇಟಿ ನೀಡಿ ಮಾತನಾಡಿದ ನಟ ಆತ್ಮೀಯ ಗೆಳೆಯನ ಸಮಾಧಿಗೆ ಪೂಜೆ ಮಾಡಿದ ಕಾಲಿವುಡ್ ಸ್ಟಾರ್

ಕಾಲಿವುಡ್ ನಟ ವಿಶಾಲ್ ಅವರು ಪುನೀತ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ಗೆಳೆಯನಾಗಿದ್ದ ಅಪ್ಪು ಅವರ ಪತ್ನಿಯನ್ನು ಭೇಟಿ ಮಾಡಿ ನಟ ಶಿವರಾಜ್ ಕುಮಾರ್ ಅವರ ಮನೆಗೂ ಭೇಟಿಕೊಟ್ಟಿದ್ದಾರೆ.
ಅಪ್ಪು ಸಮಾಧಿಗೆ ಪೂಜೆ ಮಾಡಿದ ನಟ ವಿಶಾಲ್ ಅವರು ಅಪ್ಪು ಭಾವ ಚಿತ್ರ ಕಂಡು ಭಾವುಕರಾಗಿ ಕೈ ಮುಗಿದಿದ್ದಾರೆ. ಅಪ್ಪ ಅಮ್ಮನ ದೊಡ್ಡ ಫೋಟೋ ಪ್ರೇಮ್ ಕೆಳಗೆ ಇಡಲಾಗಿದ್ದ ಅಪ್ಪು ಭಾವಚಿತ್ರಕ್ಕೆ ವಿಶಾಲ್ ಬಗ್ಗಿ ನಮಸ್ಕರಿಸಿದ್ದಾರೆ.
ಪುನೀತ್ ಸಾಮಾನ್ಯ ವ್ಯಕ್ತಿಯಂತೆ ಇರುತ್ತಿದ್ದರು. ಸೂಪರ್ ಸ್ಟಾರ್ ಆಗಿದ್ದರೂ ಎಂದೂ ಸ್ಟಾರಿಸಂ ತೋರಿಸುತ್ತಿರಲಿಲ್ಲ. ಪುನೀತ್ ಇಲ್ಲ ಅನ್ನೀ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ.
ಅವರ ಅಗಲಿಕೆ ಸಮಾಜಕ್ಕೂ ಫಿಲ್ಮ್ ಇಂಡಸ್ಟ್ರಿಗೂ ದೊಡ್ಡ ನಷ್ಟ. ಇವರು ಒಳ್ಳೇ ನಟರಷ್ಟೇ ಅಲ್ಲ್ ಒಳ್ಳೆಯ ವ್ಯಕ್ತಿಯೂ ಹೌದು. ಅಶ್ವಿನಿಯವರಿಗೂ ಮಕ್ಕಳಿಗೂ ಶಕ್ತಿ ಕೊಡಬೇಕು. ಪುನೀತ್ ಅಗಲಿಕೆಯಿಂದ ಒಳ್ಳೆಯ ಮಿತ್ರ ನನ್ನ ಜೊತೆ ಇಲ್ಲ ಅನ್ನುವಂತಾಗಿದೆ ಎಂದಿದ್ದಾರೆ ನಟ.
ಈಗಷ್ಟೇ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದೆ. ಅವರ ಕಾರ್ಯ ಮುಂದುವರೆಸಲು ಅನುಮತಿ ಕೇಳಿದ್ದೆ. ಅಶ್ವಿನಿ ಮೇಡಮ್ ಹತ್ತಿರ ಅಪ್ಪು ಕೆಲಸ ಮುನ್ನಡೆಸಲು ಅನುಮತಿ ಕೇಳಿದ್ದೇನೆ . 1800 ವಿದ್ಯಾರ್ಥಿಗಳನ್ನು ನೋಡಿಕೊಳ್ಳೋಕೆ ಅನುಮತಿ ಕೇಳಿದ್ದೇನೆ ಎಂದಿದ್ದಾರೆ.
ಇನ್ನು ಕೆಲವೇ ದಿನದಲ್ಲಿ ಅವರ ಅಭಿಪ್ರಾಯ ತಿಳಿಸುತ್ತಾರೆ ಎಂದು ಹೇಳಿದ್ದಾರೆ. ಈಗಷ್ಟೇ ಅಪ್ಪು ಮನೆಗೆ ಭೇಟಿ ಕೊಟ್ಟಿದ್ದೆ. ಅವರ ಕಾರ್ಯ ಮುಂದುವರೆಸಲು ಅನುಮತಿ ಕೇಳಿದ್ದೆ ಎಂದಿದ್ದಾರೆ.
ಈ ಹಿಂದೆಯೇ ನಟ ಪುನೀತ್ ನಿಧನರಾದಾಗ ಈ ಬಗ್ಗೆ ಪ್ರತಿಕ್ರಿಯಿಸಿದ ವಿಶಾಲ್ ನಟನ ಸಾವಿಗೆ ಸಂತಾಪ ವ್ಯಕ್ತಪಡಿಸಿ ಅವರು ನಡೆಸುತ್ತಿದ್ದ ಶಾಲೆಗಳ ಜವಾಬ್ದಾರಿ ತೆಗೆದುಕೊಂಡಿದ್ದರು. ಇದೀಗ ನುಡಿನಮನ ಕಾರ್ಯಕ್ರಮದಲ್ಲಿ ಅದನ್ನು ಮತ್ತೆ ಹೇಳಿದ್ದಾರೆ.
ನಟ ನನಗೆ ಇದೊಂದು ಅವಕಾಶ ಕೊಡಿ ಎಂದು ಕುಟುಂಬಸ್ಥರಲ್ಲಿ ಕೈಮುಗಿದು ಕೇಳಿದ್ದಾರೆ. ಸ್ವಂತ ಮನೆಯೂ ಇಲ್ಲ ಎಂದ ನಟ ಅದನ್ನು ಮುಂದೆಯೂ ಕಟ್ಟಬಹುದು, ಇದನ್ನು ಮಾಡಲು ಅವಕಾಶ ಕೊಡಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.