- Home
- Entertainment
- Cine World
- ಕೆಲಸವಿಲ್ಲದೆ ಒಂದು ವರ್ಷ ಮನೆಯಲ್ಲಿದ್ದ ಗಂಡ, ಕಪೂರ್ ಕುಟುಂಬಕ್ಕೆ ಅವಮಾನ; ಕಣ್ಣೀರಿಟ್ಟ ಮಹೀಪ್ ಕಪೂರ್
ಕೆಲಸವಿಲ್ಲದೆ ಒಂದು ವರ್ಷ ಮನೆಯಲ್ಲಿದ್ದ ಗಂಡ, ಕಪೂರ್ ಕುಟುಂಬಕ್ಕೆ ಅವಮಾನ; ಕಣ್ಣೀರಿಟ್ಟ ಮಹೀಪ್ ಕಪೂರ್
ಕಾಫಿ ವಿತ್ ಕಿರಣ್ ಕಾರ್ಯಕ್ರಮದಲ್ಲಿ ಭಾವುಕರಾದ ಮಹೀಪ್ ಕಪೂರ್. ಕೆಲಸವಿಲ್ಲದ ಗಂಡನ ಬಗ್ಗೆ ಜನರು ಹೀಗೆಲ್ಲಾ ಹೇಳಿದ್ದರಂತೆ....

ಕಾಫಿ ವಿತ್ ಕರಣ್ ಸೀಸನ್ 7ರ 12ನೇ ಎಪಿಸೋಡ್‌ನಲ್ಲಿ ಗೌರಿ ಖಾನ್,ಮಹೀಪ್ ಕಪೂರ್ ಮತ್ತು ಭಾವನಾ ಪಾಂಡ್ಯಾ ಭಾಗಿಯಾಗಿದ್ದರು. ಈ ವೇಳೆ ಫ್ಯಾಮಿಲಿ, ವರ್ಕ್ ಮತ್ತು ಪಬ್ಲಿಕ್ ಲೈಫ್ ಬಗ್ಗೆ ಮಾತನಾಡಿದ್ದಾರೆ.
ಈ ವೇಳೆ ಮಹೀಪ್ ಕಪೂರ್ ಪತಿ ಸಂಜಯ್ ಕಪೂರ್ ಕೆಲಸ ಮತ್ತು ಹಣಕಾಸಿನ ನಿರ್ಬಂಧಗಳು ಬಗ್ಗೆ ಮೊದಲ ಸಲ ಬಹಿರಂಗವಾಗಿ ಮಾತನಾಡಿದ್ದಾರೆ.
'ನಮ್ಮ ಜೀವನದಲ್ಲಿ ಒಂದು ಮರೆಯಲಾಗದ ಹಂತವಿತ್ತು. ಒಂದು ವರ್ಷಗಳ ಕಾಲ ಸಂಜಯ್ ಕಪೂರ್ ಕೆಲಸವಿಲ್ಲದೆ ಮನೆಯಲ್ಲಿದ್ದರು' ಎಂದು ಮಹೀಪ್ ಕಪೂರ್ ಹೇಳಿದ್ದಾರೆ.
'ಹಣದ ಸಮಸ್ಯೆ ತುಂಬಾನೇ ಇತ್ತು.ನನ್ನ ಮಕ್ಕಳು ಶರಣ್ಯ ಕಪೂರ್ ಮತ್ತು ಜಹಾನ್ ಕಪೂರ್ ಬೆಳೆದಿದ್ದರು ಅಲ್ಲದೆ ಅವರು ಗ್ಲಾಮರ್ ಪ್ರಪಂಚಕ್ಕೆ ಪರಿಚಯ ಆಗಿದ್ದರು'
'ನಮ್ಮ ಸುತ್ತಲಿರುವ ಜನರು ನೆಗೆಟಿವ್ ಆಗಿ ಮಾತನಾಡಲು ಶುರು ಮಾಡಿದ್ದರು. ಕಪೂರ್ ಕುಟುಂಬದ ಮೋಸ್ಟ್ unseccessful ನಾವು ಎನ್ನುತ್ತಿದ್ದರು'
ಸುಶ್ಮಿತಾ ಸೇನ್ ಜೊತೆ ಬ್ರೇಕಪ್ ಆದ್ಮೇಲೆ ಮಹೀಪ್ ಕಪೂರ್‌ನ ಭೇಟಿ ಮಾಡಿದ ಸಂಜಯ್ ಲವ್ ಮಾಡಿ ಕೆಲವೇ ವರ್ಷಗಳಲ್ಲಿ ಮದುವೆಯಾದ್ದರು.
ಮಹೀಪ್ ಕಪೂರ್ ಮೂಲತಃ ಪಂಜಾಬ್‌ನವರಾಗಿದ್ದು ವೃತ್ತಿಯಲ್ಲಿ ಆಭರಣ್ಯ ವಿನ್ಯಾಸ ಮಾಡುತ್ತಾರೆ. ಮದುವೆಗೂ ಮುನ್ನ australiaದಲ್ಲಿ ವಾಸವಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.